Virat Kohli: ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಹೊರಕ್ಕೆ: ಭಾರತಕ್ಕೆ ಮತ್ತೊಂದು ಬಿಗ್ ಶಾಕ್
Virat Kohli Out of South Africa ODIs: ಖಾಸಗಿ ವೆಬ್ಸೈಟ್ವೊಂದು ಮಾಡಿರುವ ವರದಿ ಪ್ರಕಾರ, ವಿರಾಟ್ ಕೊಹ್ಲಿ ಅವರು ನಾನು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ಬಳಿ ಹೇಳಿರುವುದಾಗಿ ವರದಿಯಲ್ಲಿ ತಿಳಿಸಿದೆ.
ಕಳೆದೊಂದು ವಾರದಿಂದ ಭಾರತ ಕ್ರಿಕೆಟ್ (Indian Cricket) ತಂಡದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ (India vs South Africa) ಟೆಸ್ಟ್ ತಂಡವನ್ನು ಆಯ್ಕೆ ಮಾಡುವಾಗ ತೆಗೆದುಕೊಂಡ ಕೆಲವು ನಿರ್ಧಾರಗಳು ಇಂದು ಹಲವರ ಮನಸ್ಥಾಪಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಮೊದಲಿಗೆ ಏಕದಿನ ಕ್ರಿಕೆಟ್ನ ನಾಯಕಕತ್ವದಿಂದ ವಿರಾಟ್ ಕೊಹ್ಲಿಯನ್ನು (Virat Kohli) ಕೆಳಗಿಳಿಸಿದ ರೋಹಿತ್ ಶರ್ಮಾಗೆ (Rohit Sharma) ಜವಾಬ್ದಾರಿ ನೀಡಲಾಯಿತು. ಟೆಸ್ಟ್ ತಂಡದ ಉಪ ನಾಯಕನ ಪಟ್ಟವೂ ಹಿಟ್ಮ್ಯಾನ್ ವಹಿಸಿಕೊಂಡಿದ್ದಾರೆ. ಆದರೆ, ರೋಹಿತ್ ಇಂಜುರಿಯಿಂದಾಗಿ (Rohit Sharma Injury) ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ಇದರ ನಡುವೆ ಏಕದಿನ ಕ್ರಿಕೆಟ್ನಲ್ಲಿ (ODI Cricket) ನಾಯಕನಾಗಿ ಉತ್ತಮ ದಾಖಲೆ ಹೊಂದಿದ್ದರೂ ತನ್ನನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಕೊಹ್ಲಿಗೆ ಬೇಸರ ಉಂಟು ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಹೀಗಿರುವಾಗ ಟೀಮ್ ಇಂಡಿಯಾಕ್ಕೆ (Team India) ಮತ್ತೊಂದು ಆಘಾತ ಉಂಟಾಗಿದೆ. ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ (Virat Kohli IND vs SA) ಹೊರಗುಳಿಯಲಿದ್ದಾರಂತೆ.
ಇನ್ಸೈಡ್ ಸ್ಫೋರ್ಟ್ಸ್ ಮಾಡಿರುವ ವರದಿ ಪ್ರಕಾರ, ವಿರಾಟ್ ಕೊಹ್ಲಿ ಅವರು ನಾನು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ಬಳಿ ಹೇಳಿರುವುದಾಗಿ ವರದಿಯಲ್ಲಿ ತಿಳಿಸಿದೆ.
ನಾಯಕನ ಸ್ಥಾನದಿಂದ ಕೆಳಗಿಳಿಯಿರಿ ಎಂದು ಬಿಸಿಸಿಐ ಕೊಹ್ಲಿ ಅವರಿಗೆ 48 ಗಂಟೆಗಳ ಕಾಲಾವಕಾಶ ನೀಡಿತ್ತಂತೆ, ಇದಕ್ಕೆ ವಿರಾಟ್ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ 49ನೇ ಗಂಟೆಯಲ್ಲಿ ಹೊಸ ನಾಯಕನ ಘೋಷಣೆ ಮಾಡಿತಂತೆ. ಈ ಬೇಸರ, ಕೋಪದಿಂದ ಕಿಂಗ್ ಕೊಹ್ಲಿ ಇನ್ನೂ ಹೊರಬಂದಿಲ್ಲ ಎಂದು ಒಂದು ಕಡೆಯಿಂದ ಹೇಳಲಾಗುತ್ತಿದೆ. ಅಲ್ಲದೆ ಕೊಹ್ಲಿ ಮುಂಬೈನಲ್ಲಿ ಆಯೋಜಿಸಿದ್ದ ಪ್ಯಾಕ್ಟೀಸ್ ಸೆಷನ್ಗೂ ಹಾಜರಾಗಿಲ್ಲವಂತೆ. ಕ್ವಾರಂಟೈನ್ಗೂ ಮುನ್ನ ಭಾರತದ ಬಹುತೇಕ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಆದರೆ, ಯಾವುದೇ ಪ್ರ್ಯಾಕ್ಟೀಸ್ಗೆ ವಿರಾಟ್ ಕೊಹ್ಲಿ ಹಾಜರಿರಲ್ಲವಂತೆ. ಅಲ್ಲದೆ ಕ್ವಾರಂಟೈನ್ಗೂ ಒಳಪಟ್ಟಿಲ್ಲ ಎಂದು ಬಿಸಿಸಿಐ ಮೂಲಗಳು ಖಾಸಗಿ ವೆಬ್ಸೈಟ್ಗೆ ತಿಳಿಸಿದೆ.
ಈ ಎಲ್ಲ ಬೆಳವಣಿಗೆ ನಡುವೆ ಇದೀಗ ಆಫ್ರಿಕಾ ಏಕದಿನ ಸರಣಿಯಿಂದಲೇ ಕೊಹ್ಲಿ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರಂತೆ. ಬಿಸಿಸಿಐ ಬಳಿ ಇದಕ್ಕೆ ಸೂಕ್ತ ಕಾರಣವನ್ನೂ ನೀಡಿರುವ ಕೊಹ್ಲಿ, ನನ್ನ ಮಗಳಿನ ಮೊದಲ ವರ್ಷದ ಹುಟ್ಟುಹಬ್ಬ ಇರುವ ಕಾರಣ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರಂತೆ. ಆದರೆ, ಬಿಸಿಸಿಐ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಿಟ್ಟುಕೊಟ್ಟಿಲ್ಲ.
ಟೆಸ್ಟ್ನಿಂದ ರೋಹಿತ್ ಔಟ್:
ಹೌದು, ಅಭ್ಯಾಸದ ವೇಳೆ ಗಾಯಗೊಂಡಿರುವ ಭಾರತ ಟೆಸ್ಟ್ ತಂಡದ ನೂತನ ಉಪನಾಯಕ ರೋಹಿತ್ ಶರ್ಮಾ ಮುಂಬರುವ ಸರಣಿಯಿಂದ ಹೊರಗುಳಿಯಲಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಇರುವ ಭಾರತ ‘ಎ’ ತಂಡದ ನಾಯಕತ್ವ ವಹಿಸಿಕೊಂಡಿದ್ದ ಗುಜರಾತ್ ಮೂಲದ ಬ್ಯಾಟ್ಸ್‌ಮನ್ ಪ್ರಿಯಾಂಕ್ ಪಾಂಚಾಲ್ ಅವರನ್ನು ರೋಹಿತ್‌ಗೆ ಬದಲಿ ಆಟಗಾರನನ್ನಾಗಿ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿರುವುದಾಗಿ ಬಿಸಿಸಿಐ ಘೋಷಿಸಿದೆ. “ಮುಂಬೈನಲ್ಲಿ ನಡೆಯುತ್ತಿದ್ದ ಅಭ್ಯಾಸ ಶಿಬಿರದಲ್ಲಿ ಎಡಗಾಲಿನ ತೊಡೆಯ ಸ್ನಾಯು ಸೆಳೆತದ ಸಮಸ್ಯೆಗೆ ರೋಹಿತ್ ತುತ್ತಾಗಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯಿಂದ ಅವರು ಹೊರಗುಳಿಯಲಿದ್ದಾರೆ,” ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದೆ.
Venkatesh Iyer: ಹಾರ್ದಿಕ್ ಪಾಂಡ್ಯ ಜಾಗಕ್ಕೆ ಈಗಾಗಲೇ ಹೊಸ ಆಟಗಾರನ ಎಂಟ್ರಿ ಆಗಿದೆಯಂತೆ
Shikhar Dhawan: ಟೀಮ್ ಇಂಡಿಯಾಕ್ಕೆ ಇನ್ಮುಂದೆ ಈ ಆಟಗಾರನ ಅಗತ್ಯ ಇಲ್ಲ ಎಂದ ಭಾರತದ ಮಾಜಿ ಕ್ರಿಕೆಟಿಗ
(Virat Kohli likely to quit ODI series against South Africa as he plans to celebrate Daughter Vamika birthday)