Venkatesh Iyer: ಹಾರ್ದಿಕ್ ಪಾಂಡ್ಯ ಜಾಗಕ್ಕೆ ಈಗಾಗಲೇ ಹೊಸ ಆಟಗಾರನ ಎಂಟ್ರಿ ಆಗಿದೆಯಂತೆ
Hardik Pandya replacement: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಬಾ ಕರೀಮ್ ಅವರು ಹಾರ್ದಿಕ್ ಪಾಂಡ್ಯ ಜಾಗಕ್ಕೆ ಈಗಾಗಲೇ ಟೀಮ್ ಇಂಡಿಯಾಕ್ಕೆ ಹೊಸ ಆಟಗಾರ ಕಾಲಿಟ್ಟಾಗಿದೆ ಎಂದು ಹೇಳಿದ್ದಾರೆ. ಪಾಂಡ್ಯ ಬದಲು ಭಾರತ ತಂಡಕ್ಕೆ ವೆಂಕಟೇಶ್ ಅಯ್ಯರ್ ಅವರನ್ನು ಆಡಿಸಬೇಕೆಂದು ಸಲಹೆ ನೀಡಿದ್ದಾರೆ.
ಇತ್ತೀಚೆಗಷ್ಟೆ ಮುಕ್ತಾಯಗೊಂಡಿದ್ದ ಐಸಿಸಿ ಟಿ20 ವಿಶ್ವಕಪ್ನಲ್ಲಿ (T20 World Cup) ಟೀಮ್ ಇಂಡಿಯಾ (Team India) ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಜೊತೆಗೆ ಹಾರ್ದಿಕ್ ಪಾಂಡ್ಯ (Hardik Pandya) ಮೇಲೆ ಬೆಟ್ಟದಷ್ಟು ನಂಬಿಕೆಯಿತ್ತು. ಆದರೆ, ಇವೆರಡೂ ಯಶಸ್ವಿಯಾಗಲಿಲ್ಲ. ಅದರಲ್ಲೂ ವಿಶ್ವಕಪ್ ಸಮರ ಮುಗಿದ ಬಳಿಕ ಪಾಂಡ್ಯ ಸ್ಥಾನಕ್ಕೂ ಕುತ್ತುಬಂದಿದೆ. 2019ರಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಳಿಕ ಪಾಂಡ್ಯ ಆಟದಲ್ಲಿ ಸಂಪೂರ್ಣ ಬದಲಾಗಿದೆ. ಆ ಹಳೆಯ ಆಟಗಾರನ ರೀತಿ ಇದೀಗ ಕಾಣುತ್ತಿಲ್ಲ. ಇದೇ ಕಾರಣಕ್ಕೆ ಸದ್ಯ ಹಾರ್ದಿಕ್ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಿರುವಾಗ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಬಾ ಕರೀಮ್ (Saba Karim) ಅವರು ಹಾರ್ದಿಕ್ ಪಾಂಡ್ಯ ಜಾಗಕ್ಕೆ ಈಗಾಗಲೇ ಟೀಮ್ ಇಂಡಿಯಾಕ್ಕೆ ಹೊಸ ಆಟಗಾರ ಕಾಲಿಟ್ಟಾಗಿದೆ ಎಂದು ಹೇಳಿದ್ದಾರೆ. ಪಾಂಡ್ಯ ಬದಲು ಭಾರತ ತಂಡಕ್ಕೆ ವೆಂಕಟೇಶ್ ಅಯ್ಯರ್ (Venkatesh Iyer) ಅವರನ್ನು ಆಡಿಸಬೇಕೆಂದು ಸಲಹೆ ನೀಡಿದ್ದಾರೆ.
2021ರ ಎರಡನೇ ಹಂತದಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಮಧ್ಯಪ್ರದೇಶದ ಯುವ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಭಾರತದ ತಂಡದ ಬಹುದೊಡ್ಡ ಕೊರತೆಯಾಗಿರುವ ಬ್ಯಾಟಿಂಗ್ ಆಲರೌಂಡರ್ ಸ್ಥಾನಕ್ಕೆ ಅದ್ಭುತ ಆಟಗಾರನಾಗಿ ಹೊರಹೊಮ್ಮುತ್ತಿದ್ದಾರೆ. ಐಪಿಎಲ್ನ ದುಬೈ ಲೆಗ್ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಫೈನಲ್ ಪ್ರವೇಶಿಸಲು ನೆರವಾಗಿದ್ದ ವೆಂಕಟೇಶ್ ಅಯ್ಯರ್, ನಂತರ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಮೆಂಟ್ನಲ್ಲೂ ಉತ್ತಮ ಆಲ್ರೌಂಡರ್ ಪ್ರದರ್ಶನ ತೋರಿ ಕಿವೀಸ್ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
“ವೆಂಕಟೇಶ್ ಅಯ್ಯರ್ ಮೊದಲನೇ ತಂಡಕ್ಕೆ ಪ್ರವೇಶ ಮಾಡಿದ್ದಾರೆಂದು ನಾನು ನಂಬುತ್ತೇನೆ. ವೈಟ್ ಬಾಲ್ ಕ್ರಿಕೆಟ್ ಬಗ್ಗೆ ನಾನು ಮಾತನಾಡುತ್ತಿದ್ದು, 2023ರ ಏಕದಿನ ವಿಶ್ವಕಪ್ ಟೂರ್ನಿಗೆ ನಾವು ತಯಾರಿ ಆರಂಭಿಸಿದ್ದೇವೆ ಎಂದಾದರೆ, ಅಯ್ಯರ್ ಹಾಗೂ ಗಾಯಕ್ವಾಡ್ ಇಬ್ಬರೂ ಆಟಗಾರರನ್ನು ಆದಷ್ಟು ಬೇಗ ತಂಡಕ್ಕೆ ಸೇರ್ಪಡೆ ಮಾಡಬೇಕು,” ಎಂದು ಸಬಾ ಕರೀಮ್ ತಿಳಿಸಿದ್ದಾರೆ.
2021-22ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಯ್ಯರ್ 4 ಪಂದ್ಯಗಳಿಂದ 136ರ ಸ್ಟ್ರೈಕ್ರೇಟ್ನಲ್ಲಿ 348 ರನ್ಸಿಡಿಸಿ ಅಬ್ಬರಿಸಿದ್ದಾರೆ. ಭಾನುವಾರ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಮಧ್ಯಪ್ರದೇಶ 56ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಅಯ್ಯರ್ 113 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 8 ಬೌಂಡರಿಗಳಿಂದ 151 ರನ್ ಚಚ್ಚಿದ್ದರು. ಬೌಲಿಂಗ್ನಲ್ಲಿ 2 ವಿಕೆಟ್ ಪಡೆದಿದ್ದರು. ಇತ್ತ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿರುವ ಕಾರಣ ಅವರಿಗೆ ಈಗಾಗಲೇ ಭಾರತ ತಂಡದಿಂದ ಹೊರಗಿಡಲಾಗಿದೆ. ಒಂದು ವೇಳೆ ಶೀಘ್ರದಲ್ಲಿ ಬೌಲಿಂಗ್ ಮಾಡಲು ಆರಂಭಿಸದಿದ್ದರೆ ಅಥವಾ ಬೌಲಿಂಗ್ ಪ್ರದರ್ಶನದಲ್ಲಿ ವೈಫಲ್ಯ ಅನುಭವಿಸಿದರೆ ವೆಂಕಟೇಶ್ ಅಯ್ಯರ ಅವರ ಸ್ಥಾನವನ್ನು ತುಂಬುವುದು ಖಚಿತ.
Shikhar Dhawan: ಟೀಮ್ ಇಂಡಿಯಾಕ್ಕೆ ಇನ್ಮುಂದೆ ಈ ಆಟಗಾರನ ಅಗತ್ಯ ಇಲ್ಲ ಎಂದ ಭಾರತದ ಮಾಜಿ ಕ್ರಿಕೆಟಿಗ
(Venkatesh Iyer If we are looking at the replacement for Hardik Pandya we have Venkatesh Iyer Says Saba Karim)