World Record: ಒಂದೇ ಓವರ್​ನಲ್ಲಿ 6 ವಿಕೆಟ್​: ವಿಶ್ವ ದಾಖಲೆ ಬರೆದ ಯುವ ಸ್ಪಿನ್ನರ್

Harshit Seth: ದುಬೈ ಜೆಮ್ಸ್ ಮಾಡರ್ನ್ ಅಕಾಡೆಮಿಯಲ್ಲಿ 11ನೇ ತರಗತಿ ವಿದ್ಯಾರ್ಥಿಯಾಗಿರುವ ಹರ್ಷಿತ್ ಅವರ ಕುಟುಂಬವು ದೆಹಲಿ ಮೂಲದವರು ಎಂಬುದು ವಿಶೇಷ.

TV9 Web
| Updated By: ಝಾಹಿರ್ ಯೂಸುಫ್

Updated on:Dec 13, 2021 | 10:51 PM

ಕ್ರಿಕೆಟ್ ಅಂಗಳದಲ್ಲಿ ಹಳೆಯ ದಾಖಲೆಗಳನ್ನು ಅಳಿಸಿ ಹಾಕಿ ಹೊಸ ದಾಖಲೆಗಳು ನಿರ್ಮಾಣವಾಗುವುದು ಸಾಮಾನ್ಯ. ಆದರೆ ಅಪರೂಪಕ್ಕೆ ವಿಶೇಷ ದಾಖಲೆಗಳು ನಿರ್ಮಾಣವಾಗುತ್ತವೆ. ಅಂತಹದೊಂದು ದಾಖಲೆ ನಿರ್ಮಿಸಿದ್ದಾರೆ ಯುಎಇನ ಯುವ ಸ್ಪಿನ್ನರ್ ಹರ್ಷಿತ್ ಸೇಠ್.

1 / 5
U-19 UAE ಎಡಗೈ ಸ್ಪಿನ್ನರ್ ಹರ್ಷಿತ್ ಸೇಠ್ ಒಂದೇ ಓವರ್​ನಲ್ಲಿ 6 ವಿಕೆಟ್ ಪಡೆಯುವ ಮೂಲಕ ಕ್ರಿಕೆಟ್ ಅಂಗಳದಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ದುಬೈನ ಈಡನ್ ಗಾರ್ಡನ್ಸ್ ಮೈದಾನದಲ್ಲಿ  ಅಜ್ಮಾನ್ ಕ್ರಿಕೆಟ್ ಕೌನ್ಸಿಲ್ ನಡೆಸಿದ ಕಾರ್ವಾನ್ ಗ್ಲೋಬಲ್ ಟ್ವೆಂಟಿ 20 ಲೀಗ್‌ನಲ್ಲಿ ಕ್ಲಬ್ ಪಂದ್ಯವೊಂದರಲ್ಲಿ ಒಂದು ಓವರ್‌ನಲ್ಲಿ ಆರು ವಿಕೆಟ್ ಪಡೆಯುವ ಮೂಲಕ ಈ ಅಪರೂಪದ ಸಾಧನೆ ಮಾಡಿದರು.

2 / 5
 ದುಬೈ ಕ್ರಿಕೆಟ್ ಕೌನ್ಸಿಲ್ ಸ್ಟಾರ್ಲೆಟ್ಸ್ ಪರ ಆಡುತ್ತಿರುವ ಸೇಠ್  ಪಾಕಿಸ್ತಾನದ ಹೈದರಾಬಾದ್ ಹಾಕ್ಸ್ ಅಕಾಡೆಮಿ RCG ವಿರುದ್ಧ ಒಂದು ಓವರ್‌ನಲ್ಲಿ ಆರು ವಿಕೆಟ್‌ಗಳನ್ನು ಉರುಳಿಸಿದರು. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಒಟ್ಟು  8 (4-0-4-8) ವಿಕೆಟ್‌ಗಳನ್ನು ಕಬಳಿಸಿದರು. ಇನ್ನು ಹರ್ಷಿತ್ ಸೇಠ್ ದಾಳಿಗೆ ತತ್ತರಿಸಿದ ಹೈದರಾಬಾದ್ ಹಾಕ್ಸ್ ಅಕಾಡೆಮಿ ತಂಡವು ಕೇವಲ 44 ರನ್​ಗಳಿಗೆ ಆಲೌಟ್ ಆಯಿತು.

3 / 5
ದುಬೈ ಜೆಮ್ಸ್ ಮಾಡರ್ನ್ ಅಕಾಡೆಮಿಯಲ್ಲಿ 11ನೇ ತರಗತಿ ವಿದ್ಯಾರ್ಥಿಯಾಗಿರುವ ಹರ್ಷಿತ್ ಅವರ ಕುಟುಂಬವು ದೆಹಲಿ ಮೂಲದವರು ಎಂಬುದು ವಿಶೇಷ. ಇದೀಗ ಯುಎಇ ಕ್ರಿಕೆಟ್​ನಲ್ಲಿ ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ ಮಿಂಚುತ್ತಿರುವ ಹರ್ಷಿತ್ ಮುಂದೆ ಅಂಡರ್-19 ವಿಶ್ವಕಪ್ ಆಡುವ ಅಭಿಲಾಷೆ ಹೊಂದಿದ್ದಾರೆ.

4 / 5
ಇನ್ನು ಕ್ರಿಕೆಟ್ ಇತಿಹಾಸದಲ್ಲಿ ಆರು ಎಸೆತಗಳಲ್ಲಿ ಈ ಹಿಂದೆ 6 ವಿಕೆಟ್ ಪಡೆದವರು ಇದ್ದಾರೆ. ಆಸ್ಟ್ರೇಲಿಯಾದ ಅಲೆಡ್ ಕ್ಯಾರಿ ಅವರು 2017 ರಲ್ಲಿ ಈಸ್ಟ್ ಬಲ್ಲಾರತ್ ವಿರುದ್ಧ ಗೋಲ್ಡನ್ ಪಾಯಿಂಟ್ ಕ್ರಿಕೆಟ್ ಕ್ಲಬ್‌ಗಾಗಿ ಆಡುವ ಒಂದೇ ಓವರ್‌ನಲ್ಲಿ 6 ವಿಕೆಟ್ ಪಡೆದಿದ್ದರು. ಜಿ ಸಿರೆಟ್ 1951 ರಲ್ಲಿ ರಾಯಲ್ ವಾರ್ವಿಕ್‌ಷೈರ್ ರೆಜಿಮೆಂಟಲ್ ಅಸೋಸಿಯೇಶನ್ ವಿರುದ್ಧ ರೋಲ್ಯಾಂಡ್ ಯುನೈಟೆಡ್ ಪರ ಒಂದು ಓವರ್‌ನಲ್ಲಿ ಡಬಲ್ ಹ್ಯಾಟ್ರಿಕ್ ಸಾಧಿಸಿದ್ದರು. ವೈಎಸ್ ರಾಮಸ್ವಾಮಿ ಅವರು 1930 ರಲ್ಲಿ ಮದ್ರಾಸ್‌ನಲ್ಲಿ ಶಾಲಾ ಕ್ರಿಕೆಟ್‌ನಲ್ಲಿ ಇದೇ ರೀತಿಯ ಸಾಧನೆಯನ್ನು ಮಾಡಿದ್ದರು. ಇದೀಗ ಈ ಸಾಧಕರ ಪಟ್ಟಿಗೆ ಹರ್ಷಿತ್ ಸೇಠ್ ಸೇರ್ಪಡೆಯಾಗಿದ್ದಾರೆ.

5 / 5

Published On - 10:40 pm, Mon, 13 December 21

Follow us
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ

ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್

ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ

Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ