Afghanistan: ಅಫ್ಘಾನ್ ಆಟಗಾರರಿಗೆ ವಿದೇಶಿ ಲೀಗ್​ನಲ್ಲಿ ಆಡಲು ಸಿಗಲ್ಲ ಅವಕಾಶ​..!

Afghanistan Cricket Team: ಈಗ ಸಲ್ಲಿಸಿರುವ ರಿಪೋರ್ಟ್​​​ನಲ್ಲಿ ಅಫ್ಘಾನ್​ ಆಟಗಾರರನ್ನು ವಿವಿಧ ಲೀಗ್​ನಲ್ಲಿ ಭಾಗವಹಿಸುವುದನ್ನು ತಡೆಯಬೇಕು ಎಂದು ತಿಳಿಸಲಾಗಿದೆ. (ಡೈಲಿಹಂಟ್​ನಲ್ಲಿ ಫೋಟೋ ಗ್ಯಾಲರಿ ಸುದ್ದಿಯಲ್ಲಿ ವಿಷಯ ಕಾಣಿಸುತ್ತಿಲ್ಲ. ಹೀಗಾಗಿ tv9kannada.com ಗೆ ಭೇಟಿ ನೀಡುವ ಮೂಲಕ ಸಂಪೂರ್ಣ ಸುದ್ದಿ ಓದಬಹುದು)

TV9 Web
| Updated By: ಝಾಹಿರ್ ಯೂಸುಫ್

Updated on:Dec 14, 2021 | 2:47 PM

ಅಫ್ಘಾನಿಸ್ತಾನ್ ತಂಡದ ಕ್ರಿಕೆಟಿಗರು  ಪ್ರಪಂಚದಾದ್ಯಂತದ ವಿವಿಧ T20 ಲೀಗ್‌ಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಇಡೀ ವಿಶ್ವಕ್ಕೆ ಸಾರುತ್ತಿದ್ದಾರೆ. ಆದರೆ ಇದೀಗ ಆಟಗಾರರು ಇಂತಹ ಲೀಗ್​ನಲ್ಲಿ ಭಾಗವಹಿಸದಂತೆ ಲಗಾಮು ಹಾಕಲು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಮುಂದಾಗಿದೆ.ಮಾಧ್ಯಮ ವರದಿಗಳ ಪ್ರಕಾರ, ಎಸಿಬಿ ತನ್ನ ಆಟಗಾರರಿಗೆ ಕೇವಲ ಮೂರು ಲೀಗ್‌ಗಳಲ್ಲಿ ಭಾಗವಹಿಸಲು ಅವಕಾಶ ನೀಡಲಿದೆ. ಇದರಿಂದ  ಇತರೆ ಸಮಯದಲ್ಲಿ ಆಟಗಾರರು ರಾಷ್ಟ್ರೀಯ ತಂಡಕ್ಕೆ ಲಭ್ಯವಿರುತ್ತಾರೆ. ಹಾಗೆಯೇ ಉಳಿದ ಸಮಯದಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳಬೇಕು ಎಂಬ ನಿಯಮವನ್ನು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ರೂಪಿಸುತ್ತಿದೆ.

1 / 6
ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್​ ಇತ್ತೀಚೆಗೆ 14 ಸದಸ್ಯರ ತಾಂತ್ರಿಕ ಸಮಿತಿಯನ್ನು ರಚಿಸಿದ್ದು, ಈ ಮೂಲಕ ತಂಡದ ಪ್ರದರ್ಶನವನ್ನು ಮಟ್ಟವನ್ನು ಹೇಗೆ ಹೆಚ್ಚಿಸಬೇಕು ಎಂಬುದಕ್ಕೆ ರೂಪುರೇಷೆಗಳನ್ನು ಸಿದ್ದಪಡಿಸುತ್ತಿದೆ. ಈ ಸಮಿತಿಯು ಒಟ್ಟಾಗಿ ಸಭೆ ನಡೆಸಿದ ನಂತರ, ಎಸಿಬಿಯ ಉನ್ನತ ಆಡಳಿತಕ್ಕೆ ವರದಿ ಮಾಡಲಿದೆ.

2 / 6
 ಇದೀಗ ಇದರ ಮೊದಲ ಹೆಜ್ಜೆಯಾಗಿ ಸಲ್ಲಿಸಿರುವ ರಿಪೋರ್ಟ್​​​ನಲ್ಲಿ ಅಫ್ಘಾನ್​ ಆಟಗಾರರನ್ನು ವಿವಿಧ ಲೀಗ್​ನಲ್ಲಿ ಭಾಗವಹಿಸುವುದನ್ನು ತಡೆಯಬೇಕು ಎಂದು ತಿಳಿಸಲಾಗಿದೆ. ಏಕೆಂದರೆ  ಆಟಗಾರರು ಪ್ರತಿಯೊಂದು ಪ್ರಮುಖ T20 ಲೀಗ್‌ನಲ್ಲಿ ಭಾಗವಹಿಸುತ್ತಿರುವ ಕಾರಣ ದೇಶೀಯ ಪಂದ್ಯಾವಳಿಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ. ಹೀಗಾಗಿ ಬದಲಾವಣೆ ತರಲು ಎಸಿಬಿ ಬಯಸಿದೆ ಎಂದು ವರದಿಯಾಗಿದೆ.

3 / 6
ಈ ಬಗ್ಗೆ ಮಾತನಾಡಿರುವ ಎಸಿಬಿಯ ವಿಶೇಷ ಸಮಿತಿಯ ಸದಸ್ಯ ರೈಸ್ ಅಹ್ಮದ್, "ದೇಶೀಯ ಪಂದ್ಯಾವಳಿಗಳಲ್ಲಿ ನಮ್ಮ ರಾಷ್ಟ್ರೀಯ ತಂಡದ ಆಟಗಾರರನ್ನು ಆಡುವಂತೆ ಮಾಡುವ ಯೋಜನೆಗಳನ್ನು ರೂಪಿಸಿದ್ದೇವೆ. ಬಹುಶಃ ಮಂಡಳಿಯು ಫ್ರಾಂಚೈಸಿ ಲೀಗ್‌ನಲ್ಲಿ ಆಟಗಾರರ ಭಾಗವಹಿಸುವಿಕೆಯ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.  ಇದರಿಂದ ಆಟಗಾರರು ಕೇವಲ ಮೂರು T20 ಲೀಗ್‌ಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿದೆ. ಟೆಸ್ಟ್ ಆಡುವ ಎಲ್ಲಾ ದೇಶಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಮಹತ್ವದ್ದಾಗಿದೆ. ಈಗ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಅದೇ ಮಾರ್ಗವನ್ನು ಅನುಸರಿಸಲು ಬಯಸುತ್ತದೆ ಎಂದು ಅವರು ಹೇಳಿದರು.

4 / 6
ನಮ್ಮ ಆಟಗಾರರು ಹಲವು ಲೀಗ್‌ಗಳಲ್ಲಿ ಆಡುವುದರಿಂದ ಟಿ20 ತಂಡಗಳ ಆಯ್ಕೆ ಸುಲಭವಾಗಿದೆ. ಆದಾಗ್ಯೂ,  ಸ್ಟಾರ್ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಆಡದಿದ್ದಾಗ, ಉತ್ತಮ ಆಟಗಾರರು ರೂಪುಗೊಳ್ಳುವುದಿಲ್ಲ. ಮುಂದಿನ ವರ್ಷದಿಂದ ಶೇ.90 ರಷ್ಟು ಕ್ರಿಕೆಟಿಗರು ದೇಶೀಯ ಕ್ರಿಕೆಟ್‌ನ ಭಾಗವಾಗುವುದು ಖಚಿತ. ಇದಲ್ಲದೇ ದೇಶಿಯ ಕ್ರಿಕೆಟ್ ಮಟ್ಟವನ್ನು ಹೆಚ್ಚಿಸಲು ವಿದೇಶದಿಂದ ಪಿಚ್ ಕ್ಯುರೇಟರ್ ಗಳನ್ನು ಕರೆಸಲಾಗುವುದು. ಇದರಿಂದ  ವೇಗದ ಬೌಲರ್ ಗಳಿಗೆ ಸೂಕ್ತವಾದ ಪಿಚ್ ಸಿದ್ಧಪಡಿಸಬಹುದಾಗಿದೆ. ಮುಂದಿನ ಎಫ್‌ಟಿಪಿ ತನಕ ಅಫ್ಘಾನಿಸ್ತಾನ 37 ODI, 12 T20 ಮತ್ತು ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದಲ್ಲದೇ ಐಸಿಸಿ ಮತ್ತು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಟೂರ್ನಿಗಳಲ್ಲೂ ಭಾಗವಹಿಸಲಿದ್ದಾರೆ. ಹೀಗಾಗಿ ಇದಕ್ಕಾಗಿ ಬಲಿಷ್ಠ ತಂಡವನ್ನು ರೂಪಿಸಲು ಕಟ್ಟು ನಿಟ್ಟಿನ ನಿಯಮ ಜಾರಿಗೆ ತರಲು ಮುಂದಾಗುತ್ತಿದ್ದೇವೆ ಎಂದು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್​ ತಿಳಿಸಿದೆ.

5 / 6
ಅಫ್ಘಾನಿಸ್ತಾನ್ ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್, ಲಂಕಾ ಪ್ರೀಮಿಯರ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್, ಬಿಗ್ ಬ್ಯಾಷ್ ಲೀಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೆ ಅಫ್ಘಾನ್ ತಂಡದ ಸ್ಟಾರ್​ ಆಟಗಾರರಾದ ರಶೀದ್ ಖಾನ್, ಮೊಹಮ್ಮದ್ ನಬಿ ಹಾಗೂ ಮುಜೀಬ್ ಉರ್ ರೆಹಮಾನ್ ಇಂಡಿಯನ್ ಪ್ರೀಮಿಯರ್ ಲೀಗ್​ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ತೆಗೆದುಕೊಂಡಿರುವ ಈ ನಿರ್ಧಾರದಿಂದ ಯಾವ ಮೂರು ಲೀಗ್​ನಲ್ಲಿ ಆಟಗಾರರಿಗೆ ಅವಕಾಶ ಸಿಗಲಿದೆ ಕಾದು ನೋಡಬೇಕಿದೆ.

6 / 6

Published On - 2:44 pm, Tue, 14 December 21

Follow us
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ

ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ

ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?