ಕಳಪೆ ಕಾಮಗಾರಿಯಿಂದ ಬೆಂಗಳೂರಿನಲ್ಲಿ ಅನಾಹುತ, ರಸ್ತೆಯೊಳಕ್ಕೆ ಇಳಿಯಿತು ಲಾರಿ ಚಕ್ರ

| Updated By: ಆಯೇಷಾ ಬಾನು

Updated on: Sep 01, 2021 | 9:31 AM

ಕಳಪೆ ರಸ್ತೆಕಾಮಗಾರಿಯಿಂದ ನೆಲ ಕುಸಿದು ಟಿಪ್ಪರ್ ಗಾಡಿ ಪಲ್ಟಿಯಾಗಿದೆ. ರಿಚ್‌ಮಂಡ್ ರಸ್ತೆಯ ವುಡ್ಲ್ಯಾಂಡ್ ಹೋಟೆಲ್ ಬಳಿ ಟಿಪ್ಪರ್ ಲಾರಿ ಭಾರಕ್ಕೆ ರಸ್ತೆ ಕುಸಿದಿದೆ.

ಕಳಪೆ ಕಾಮಗಾರಿಯಿಂದ ಬೆಂಗಳೂರಿನಲ್ಲಿ ಅನಾಹುತ, ರಸ್ತೆಯೊಳಕ್ಕೆ ಇಳಿಯಿತು ಲಾರಿ ಚಕ್ರ
ಕಳಪೆ ಕಾಮಗಾರಿಯಿಂದ ಬೆಂಗಳೂರಿನಲ್ಲಿ ಅನಾಹುತ, ರಸ್ತೆಯೊಳಕ್ಕೆ ಇಳಿಯಿತು ಲಾರಿ ಚಕ್ರ
Follow us on

ಬೆಂಗಳೂರು: ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದು ಲಾರಿ ಪಲ್ಟಿಯಾದ ಘಟನೆ ಬೆಂಗಳೂರಿನ ರಿಚ್‌ಮಂಡ್ ರಸ್ತೆಯಲ್ಲಿ ನಡೆದಿದೆ. ಲಾರಿ ಸೈಡ್‌ಗೆ ನಿಲ್ಲಿಸಿ ವಿಳಾಸ ಕೇಳುವ ವೇಳೆ ಘಟನೆ ಸಂಭವಿಸಿದ್ದು ಪೊಲೀಸರು ಪಲ್ಟಿಯಾದ ಲಾರಿ ತೆರವು ಮಾಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಲವೊಂದು ವೈರಲ್ ವಿಡಿಯೋದಲ್ಲಿ ಇಂತಹ ದೃಶ್ಯಗಳನ್ನು ನಾವು ನೋಡಿರುತ್ತೇವೆ. ಆದ್ರೆ ಇಂದು ಬೆಂಗಳೂರಿನಲ್ಲೇ ಇಂತಹ ಭೀಕರ ಘಟನೆ ಸಂಭವಿಸಿದೆ. ಕಳಪೆ ರಸ್ತೆಕಾಮಗಾರಿಯಿಂದ ನೆಲ ಕುಸಿದು ಟಿಪ್ಪರ್ ಗಾಡಿ ಪಲ್ಟಿಯಾಗಿದೆ. ರಿಚ್‌ಮಂಡ್ ರಸ್ತೆಯ ವುಡ್ಲ್ಯಾಂಡ್ ಹೋಟೆಲ್ ಬಳಿ ಟಿಪ್ಪರ್ ಲಾರಿ ಭಾರಕ್ಕೆ ರಸ್ತೆ ಕುಸಿದಿದೆ. ಟಿಪ್ಪರ್ ಲಾರಿ ಸಂಪಂಗಿ ರಾಮನಗರದ ಸೆಂಚುರಿ ಅಪಾರ್ಟ್ ಮೆಂಟ್ ಕಡೆ ಕಾಮಗಾರಿಗೆ ಡಸ್ಟ್ ಸಾಗಿಸುತ್ತಿತ್ತು. ಈ ವೇಳೆ ರಸ್ತೆ ಪಕ್ಕಕ್ಕೆ ಲಾರಿ ನಿಲ್ಲಿಸಿ ಅಡ್ರಸ್ ಕೇಳುವಷ್ಟರಲ್ಲಿ ಹೆಚ್ಚು ಬಾರ ಇದ್ದ ಕಾರಣ ರಸ್ತೆಯೊಳಗೆ ವಾಹನದ ಟೈರ್ ಇಳಿದಿದೆ. ಸದ್ಯ ಚಾಲಕ ವಾಹನದಿಂದ ಕೆಳಗಿಳಿದಿದ್ದ ಕಾರಣ ಅನಾಹುತ ತಪ್ಪಿದೆ.

ಕಳಪೆ ಕಾಮಗಾರಿಯಿಂದಲೇ ಈ ಘಟನೆ ನಡೆದಿದ್ದು ಕ್ರೇನ್ ಮೂಲಕ ಸಂಚಾರಿ ಪೊಲೀಸರಿಂದ ತೆರವು ಕಾರ್ಯಾಚರಣೆ ನಡೆದಿದೆ.

ಲಾರಿ ಭಾರಕ್ಕೆ ಕುಸಿದ ರಸ್ತೆ

ಇದನ್ನೂ ಓದಿ: ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಸುಮಲತಾ ಗುದ್ದಲಿ ಪೂಜೆ; ಪುತ್ರನ ರಾಜಕೀಯ ಅಭಿಷೇಕಕ್ಕೆ ಅಡಿಪಾಯ ಹಾಕಿದರಾ?

ಅಪಘಾತಕ್ಕೂ ಮುನ್ನ ಜಿಗ್​ಜ್ಯಾಗ್​ ರೈಡ್: ತಪಾಸಣೆಗೆ ಬಂದ ಪೊಲೀಸ್​ ಮೇಲೆ ಕಾರು ಹತ್ತಿಸೋ ಯತ್ನ, ಜೊಮ್ಯಾಟೋ ಹುಡುಗ ಜಸ್ಟ್​ ಮಿಸ್

Published On - 9:27 am, Wed, 1 September 21