Power Cut: ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದು ಪವರ್ ಕಟ್

TV9 Digital Desk

| Edited By: shivaprasad.hs

Updated on: Jan 14, 2022 | 10:24 AM

Bengaluru Power Cut: ಇಂದು ಬೆಂಗಳೂರಿನ ಜೆಪಿ ನಗರ, ಜಯನಗರ, ಎಲೆಕ್ಟ್ರಾನಿಕ್ ಸಿಟಿ, ತ್ಯಾಗರಾಜನಗರ, ಶ್ರೀನಗರ, ಕೊಡಿಗೇಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Power Cut: ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದು ಪವರ್ ಕಟ್
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಬೆಂಗಳೂರು ಕೊರೊನಾ ಹಾಟ್​ಸ್ಪಾಟ್​ ಎನಿಸಿಕೊಂಡಿದೆ. ಇರದ ನಡುವೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ನಿರ್ವಹಣೆ ಮತ್ತು ಇತರ ಕಾಮಗಾರಿಗಳಿಗೆ ಅನುವು ಮಾಡಿಕೊಡಲು ಇಂದು (ಶುಕ್ರವಾರ) ಬೆಂಗಳೂರಿನ ಹಲವು ಏರಿಯಾಗಳಲ್ಲಿ ಪವರ್ ಕಟ್ ಮಾಡಲಾಗುವುದು ಎಂದು ಬೆಸ್ಕಾಂ ತಿಳಿಸಿದೆ. ಇಂದು ಬೆಂಗಳೂರಿನ ಜೆಪಿ ನಗರ, ಜಯನಗರ, ಎಲೆಕ್ಟ್ರಾನಿಕ್ ಸಿಟಿ, ತ್ಯಾಗರಾಜನಗರ, ಶ್ರೀನಗರ, ಕೊಡಿಗೇಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಇಂದು ಬೆಳಗ್ಗೆ ಬೆಂಗಳೂರು ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ವಸಂತ ವಲ್ಲಬ ನಗರ, ಶಾರದ ನಗರ, ಜರಗನಹಳ್ಳಿ, ಎಲ್‌ಐಸಿ ಕಾಲೋನಿ, ಜೆಪಿ ನಗರ 1 ನೇ ಹಂತ, ಜಯನಗರ 8 ನೇ ಬ್ಲಾಕ್, ಶಾಸ್ತ್ರಿನಗರ ಮುಖ್ಯ ರಸ್ತೆ, ಪದ್ಮನಾಭನಗರ, ಜೆಪಿ ನಗರ 2 ನೇ ಹಂತ, ಜೆಪಿ ನಗರ 3 ನೇ ಹಂತ, ಜೆಪಿ ನಗರ 4 ನೇ ಹಂತ, ಜೆಪಿ ನಗರ 5 ನೇ ಹಂತ ಸೇರಿವೆ. ಹಂತ, ಡಾಲರ್ಸ್ ಲೇಔಟ್, ವಿನಾಯಕನಗರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ ಮತ್ತು ದೊಡ್ಡತೊಗೂರು ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ಕಡಿತವಾಗಲಿದೆ. ನಾಗವಾರ ಪಾಳ್ಯ ಮುಖ್ಯರಸ್ತೆ, ಕಸ್ತೂರಿ ನಗರ, ಎ ನಾರಾಯಣಪುರ ಮತ್ತು ನಲ್ಲೂರಹಳ್ಳಿ ಗ್ರಾಮಗಳಲ್ಲಿ ಕರೆಂಟ್ ಇರುವುದಿಲ್ಲ. ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ರಾಮಚಂದ್ರಾಪುರ ಗ್ರಾಮ, ಕೊಡಿಗೇಹಳ್ಳಿ, ಬಾಲಾಜಿ ಲೇಔಟ್, ನಿರಂತರ ಲೇಔಟ್, ಸಾತನೂರು ಗ್ರಾಮ, ಸಿಂಗನಾಯಕನಹಳ್ಳಿ, ಆವಲಹಳ್ಳಿ, ಜಕ್ಕೂರು ಮುಖ್ಯರಸ್ತೆ, ಆನಂದನಗರ, ಎಸ್‌ಬಿಎಂ ಕಾಲೋನಿ, ಜೆಸಿ ನಗರ ಮತ್ತು ಕೈಗಾರಿಕಾ ಪ್ರದೇಶ ಪೀಣ್ಯ 1ನೇ ಹಂತದಲ್ಲಿ ಪವರ್ ಕಟ್ ಇರಲಿದೆ.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಮರ್‌ಪುರ ಮುಖ್ಯರಸ್ತೆ, ತ್ಯಾಗರಾಜನಗರ, ವೀವರ್ಸ್ ಕಾಲೋನಿ, ಧೋಬಿಘಾಟ್, ಶ್ರೀನಗರ, ಅಂದ್ರಹಳ್ಳಿ, ಭವಾನಿ ನಗರ, ಬೋಳಾರೆ, ತಿಟ್ಟಹಳ್ಳಿ, ಗಂಟಕನದೊಡ್ಡಿ ಮತ್ತು ವೀರಸಂದ್ರದಲ್ಲಿ ಇಂದು ಪವರ್ ಕಟ್ ಇರಲಿದೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಜಯನಗರ, ಮತ್ತಿಕೆರೆ ಸೇರಿ ಈ ಏರಿಯಾಗಳಲ್ಲಿ ಇಂದು ಪವರ್ ಕಟ್

Bengaluru Power Cut: ಬೆಂಗಳೂರಿನ ಬನಶಂಕರಿ, ಜೆಪಿ ನಗರ, ಮಹಾಲಕ್ಷ್ಮೀ ಪುರಂನಲ್ಲಿ ಇಂದು ಪವರ್ ಕಟ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada