ನಿರ್ವಹಣೆ ಮತ್ತು ಬೇರೆ ಬೇರೆ ಕಾರ್ಯಗಳ ಹಿನ್ನೆಲೆ ಬೆಂಗಳೂರಿನ ಅನೇಕ ಭಾಗಗಳಲ್ಲಿ 3-ದಿನ ಕಾಲ ವಿದ್ಯುತ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ!

ನಿರ್ವಹಣೆ ಮತ್ತು ಇತರ ಕಾರ್ಯಗಳ ನಿಮಿತ್ತ ಬುಧವಾರದಿಂದ (ಜನೆವರಿ 12) ಶುಕ್ರವಾರ (ಜನೆವರಿ 14) ರವರೆಗೆ ಬೆಂಗಳೂರು ನಗರದ ಅನೇಕ ಭಾಗಗಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆಯೆಂದು ಬೆಸ್ಕಾಂ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ನಿರ್ವಹಣೆ ಮತ್ತು ಬೇರೆ ಬೇರೆ ಕಾರ್ಯಗಳ ಹಿನ್ನೆಲೆ ಬೆಂಗಳೂರಿನ ಅನೇಕ ಭಾಗಗಳಲ್ಲಿ 3-ದಿನ ಕಾಲ ವಿದ್ಯುತ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ!
ಬೆಸ್ಕಾಂ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jan 12, 2022 | 4:18 PM

ನಿರ್ವಹಣೆ ಮತ್ತು ಇತರ ಕಾರ್ಯಗಳ ನಿಮಿತ್ತ ಬುಧವಾರದಿಂದ (ಜನೆವರಿ 12) ಶುಕ್ರವಾರ (ಜನೆವರಿ 14) ರವರೆಗೆ ಬೆಂಗಳೂರು ನಗರದ ಅನೇಕ ಭಾಗಗಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆಯೆಂದು ಬೆಸ್ಕಾಂ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಜನೆವರಿ 12 ರಂದು ಬೆಂಗಳೂರಿನ ದಕ್ಷಿಣ ವಲಯದ ಕೆಳಕಂಡ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಜರಗನಹಳ್ಳಿ, ಕೃಷ್ಣ ದೇವರಾಯ ನಗರ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ವಿಟ್ಟಲ ನಗರ, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಭ ನಗರ, ಶಾರದ ನಗರ, ಕುವೆಂಪು ನಗರ ಮುಖ್ಯ ರಸ್ತೆ, ವಸಂತಪುರ, ಎಲ್‌ಐಸಿ ಕಾಲೋನಿ, ಜೆಪಿ ನಗರ ಮೊದಲ ಹಂತ.

ಬನಶಂಕರಿ 3ನೇ ಹಂತ, ಬನಗಿರಿನಗರ, ಜೆ.ಪಿ.ನಗರ 5ನೇ ಹಂತ, ದೊರೆಸಾನಿಪಾಳ್ಯ, ಚನ್ನಮ್ಮನಕೆರೆ ಅಚ್ಚುಕಟ್ಟು, ಕತ್ರಿಗುಪ್ಪೆ, ವಿವೇಕ ನಗರ, ಕೊನೇನ ಅಗ್ರಹಾರ, ಜಿ.ಎಂ.ಪಾಳ್ಯ, ಅಂಬೇಡ್ಕರ್ ನಗರ, ದೊಡ್ಡಾನೆಕುಂದಿ, ಆವಲಹಳ್ಳಿ, ಜೆ.ಪಿ.ನಗರ 8ನೇ ಹಂತ, ರಾಘವನ ಪಾಳ್ಯ, ಕೊತ್ತನೂರು, ಬಿಲೆಕಹಳ್ಳಿ, ಹುಳಿಮಾವು ಗೊಟ್ಟಿಗೆರೆ ಮತ್ತು ಬಿಡಿಎ 9ನೇ ಹಂತ.

ಪೂರ್ವ ವಲಯದ ಕೆಳಕಂಡ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗೆ 10ರಿಂದ 12ರವರೆಗೆ ವಿದ್ಯುತ್‌ ಕಡಿತವಾಗಲಿದೆ.

ಬಾಣಸವಾಡಿ ಮುಖ್ಯರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಕಾಫಿ ಬೋರ್ಡ್ ಲೇಔಟ್, ದಾಸರಹಳ್ಳಿ ಮುಖ್ಯರಸ್ತೆ, ಕಾವೇರಿ ಲೇಔಟ್, ಮರಿಯಣ್ಣಪಾಳ್ಯ, ಗೆದ್ದಲಹಳ್ಳಿ, ಪೊನ್ನಪ್ಪ ಲೇಔಟ್, ವೀರಣ್ಣಪಾಳ್ಯ, ವೈಟ್‌ಫೀಲ್ಡ್ ಕೆಲ ಭಾಗಗಳು, ವಿಜಯನಗರದ ಕೆಲವು ಭಾಗಗಳು, ಬೆಳತ್ತೂರು ಮತ್ತು ಕುಂಬೇನ ಅಗ್ರಹಾರ.

ಉತ್ತರ ವಲಯದ ಈ ಏರಿಯಾಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಪ್ರಕಾಶನಗರ, ಮರಿಯಪ್ಪನಪಾಳ್ಯ, ಗಾಯತ್ರಿನಗರ, ನಾಗಪ್ಪ ಬ್ಲಾಕ್, ಕೆನರಾ ಯೂನಿಯನ್, ಲೊಟ್ಟೆಗೊಲ್ಲಹಳ್ಳಿ, ಆರ್‌ ಕೆ ಗಾರ್ಡನ್, ಯಶವಂತಪುರದ ಕೆಲವು ಭಾಗಗಳು, ಮಂಜುನಾಥ ನಗರ, ಪ್ರಕೃತಿ ನಗರ, ಭೂಪಸಂದ್ರ, ರವೀಂದ್ರನಗರ, ಸಂತೋಷ್ ನಗರ, ಕಲ್ಯಾಣ ನಗರ, ಟಿ ದಾಸರಹಳ್ಳಿ ಮಾರುಕಟ್ಟೆ, ನೃಪತುಂಗ ರಸ್ತೆ, ಕೊಬ್ಬರಿ ಮಾರುಕಟ್ಟೆ, ನಾಗಾಪುರ ಮುಖ್ಯ ರಸ್ತೆ, ಮೋದಿ ರಸ್ತೆ, ಮಹಾಲಕ್ಷ್ಮಿ ಪುರಂ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಜನೆವರಿ 13

ಬೆಂಗಳೂರು ದಕ್ಷಿಣ ವಲಯದ ಈ ಭಾಗಗಳಲ್ಲಿ ಗುರುವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿನಾಯಕ ನಗರ, ಜರಗನಹಳ್ಳಿ, ಕೃಷ್ಣದೇವರಾಯ ನಗರ, ವಿಟ್ಟಲ ನಗರ, ಕುಮಾರಸ್ವಾಮಿ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ, ಜೆ.ಪಿ.ನಗರ 6ನೇ ಹಂತ, ಪುಟ್ಟೇನಹಳ್ಳಿ, ಜೆ.ಪಿ.ನಗರ 1ನೇ ಹಂತ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಬನಶಂಕರಿ 2ನೇ ಹಂತ, ಕಾವೇರಿನಗರ, ಜೆ.ಪಿ.ನಗರ, ಜೆ.ಪಿ.ನಗರ 24ನೇ ಮುಖ್ಯರಸ್ತೆ, ಅಯೋದ್ಯನಗರ, ಜೆಪಿ ನಗರ 5ನೇ ಹಂತ, ಸಾರ್ವಭೌಮನಗರ, ಅಮರಜ್ಯೋತಿ ವೆಸ್ಟ್ ವಿಂಗ್, ಮಾರತಹಳ್ಳಿ, ಸಂಜಯ್ ನಗರ, ಮಂಜುನಾಥ ನಗರ, ಹೊಂಗಸಂದ್ರ, ಬಿಡಿಎ ಮೊದಲ ಹಂತ, 4ನೇ ಬ್ಲಾಕ್ ಬಿಡಿಎ ಮತ್ತು ನ್ಯಾನಪ್ಪನಹಳ್ಳಿ.

ಪೂರ್ವ ವಲಯದ ಕೆಳಕಂಡ ಪ್ರದೇಶಗಳಲ್ಲಿ ಗುರುವಾರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಮುನಿಯಪ್ಪ ಲೇಔಟ್, ಉದಯನಗರ, ಕೆ ಜಿ ಪುರ ಮುಖ್ಯರಸ್ತೆ, ಬಾಣಸವಾಡಿ, ರಾಚೇನಹಳ್ಳಿ, ಶ್ರೀರಾಂಪುರ, ಮೇಸ್ತ್ರಿ ಪಾಳ್ಯ, ಚಾಮುಂಡಿ ಲೇಔಟ್, ಅರ್ಕಾವತಿ ಲೇಔಟ್ ಮತ್ತು ಎಚ್‌ಬಿಆರ್ ಲೇಔಟ್.

ಉತ್ತರ ವಲಯದ ಈ ಪ್ರದೇಶಗಳು ಗುರುವಾರ ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ವಿದ್ಯುತ್ ಕಡಿತದಿಂದ ಪ್ರಭಾವಕ್ಕೊಳಗಾಗಲಿವೆ.

ಗಾಯತ್ರಿನಗರ, ರಾಮಮೋಹನಪುರ, ಮತ್ತಿಕೆರೆ ಮುಖ್ಯರಸ್ತೆ, ಎಸ್‌ಬಿಎಂ ಕಾಲೋನಿ, ನಂಜಪ್ಪ ಲೇಔಟ್, ಕುವೆಂಪು ನಗರ, ಎಂಎಲ್‌ಎ ಲೇಔಟ್, ಕಿರ್ಲೋಸ್ಕರ್ ಲೇಔಟ್, ಶಿವಕೋಟೆ, ಮಾವಳ್ಳಿಪುರ, ಕಾವೇರಿ ನಗರ, ಭುವನೇಶ್ವರಿ ನಗರ, ಹೆಗಡೆ ನಗರ, ಜಕ್ಕೂರು ಮುಖ್ಯರಸ್ತೆ, ಸಂಜಯನಗರ ಮುಖ್ಯರಸ್ತೆ, ಸಂಜಯನಗರ ಮುಖ್ಯರಸ್ತೆ , ಜೆಸಿ ನಗರ ಮತ್ತು ಎಂಇಐ ರಸ್ತೆ.

ಪಶ್ಚಿಮ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಕೆಳಕಾಣಿಸಿದ ಏರಿಯಾಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುತ್ತದೆ.

ಟಿಜಿ ಪಾಳ್ಯ ಮುಖ್ಯರಸ್ತೆ, ಪೊಲೀಸ್ ಕ್ವಾರ್ಟರ್ಸ್, ವಿಘ್ನೇಶ್ವರ ನಗರ, ವಿದ್ಯಾಮಾನ ನಗರ, ಹನುಮಂತ ನಗರ, ಬಸವೇಶ್ವರ ನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಟೀಚರ್ಸ್ ಕಾಲೋನಿ, ಜೆಸಿ ನಗರ ಸುತ್ತಮುತ್ತಲಿನ ಪ್ರದೇಶಗಳು, ಹೊಸಹಳ್ಳಿ, ವಿಜಯನಗರ, ಹಾವನೂರು ವೃತ್ತ, ಅತ್ತಿಗುಪ್ಪೆ, ಶಾರದ ಕಾಲೋನಿ, ಮಂಜುನಾಥ್ ನಗರ, ಅಗ್ರಹಾರ ದಾಸರಹಳ್ಳಿ, ಕೆಎಚ್ ಬಿ ಕಾಲೋನಿ ಮತ್ತು ಗಂಗೊಂಡನ ಹಳ್ಳಿ.

ಜನೆವರಿ 14

ಬೆಂಗಳೂರು ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ. ಪ್ರಭಾವಕ್ಕೊಳಗಾಲಿರುವ ಪ್ರದೇಶಗಳು ಕೆಳಗಿನಂತಿವೆ.

ವಸಂತ ವಲ್ಲಭ ನಗರ, ಶಾರದ ನಗರ, ಜರಗನಹಳ್ಳಿ, ಎಲ್‌ಐಸಿ ಕಾಲೋನಿ, ಜೆಪಿ ನಗರ 1 ನೇ ಹಂತ, ಜಯನಗರ 8 ನೇ ಬ್ಲಾಕ್, ಶಾಸ್ತ್ರಿನಗರ ಮುಖ್ಯ ರಸ್ತೆ, ಪದ್ಮನಾಭನಗರ, ಜೆಪಿ ನಗರ 2 ನೇ ಹಂತ, ಜೆಪಿ ನಗರ 3 ನೇ ಹಂತ, ಜೆಪಿ ನಗರ 4 ನೇ ಹಂತ, ಜೆಪಿ ನಗರ 5 ನೇ ಹಂತ. ಡಾಲರ್ಸ್ ಲೇಔಟ್, ವಿನಾಯಕನಗರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ ಮತ್ತು ದೊಡ್ಡತೊಗೂರು.

ಪೂರ್ವ ವಲಯದ ಈ ಭಾಗಗಳಲ್ಲಿ ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ಕಡಿತವಾಗಲಿದೆ.

ನಾಗವಾರ ಪಾಳ್ಯ ಮುಖ್ಯರಸ್ತೆ, ಕಸ್ತೂರಿ ನಗರ, ಎ ನಾರಾಯಣಪುರ ಮತ್ತು ನಲ್ಲೂರಹಳ್ಳಿ ಗ್ರಾಮಗಳು.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯಕ್ಕೊಳಗಾಗಲಿರುವ ಪ್ರದೇಶಗಳಿವು.

ರಾಮಚಂದ್ರಾಪುರ ಗ್ರಾಮ, ಕೊಡಿಗೇಹಳ್ಳಿ, ಬಾಲಾಜಿ ಲೇಔಟ್, ನಿರಂತರ ಲೇಔಟ್, ಸಾತನೂರು ಗ್ರಾಮ, ಸಿಂಗನಾಯಕನಹಳ್ಳಿ, ಆವಲಹಳ್ಳಿ, ಜಕ್ಕೂರು ಮುಖ್ಯರಸ್ತೆ, ಆನಂದನಗರ, ಎಸ್‌ಬಿಎಂ ಕಾಲೋನಿ, ಜೆಸಿ ನಗರ ಮತ್ತು ಕೈಗಾರಿಕಾ ಪ್ರದೇಶ ಪೀಣ್ಯ 1ನೇ ಹಂತ.

ಬೆಂಗಳೂರಿನ ಪಶ್ಚಿಮ ವಲಯದ ಕೆಳಕಂಡ ಏರಿಯಾಗಳಲ್ಲಿ ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಮರ್‌ಪುರ ಮುಖ್ಯರಸ್ತೆ, ತ್ಯಾಗರಾಜನಗರ, ವೀವರ್ಸ್ ಕಾಲೋನಿ, ದೋಭಿಘಾಟ್, ಶ್ರೀನಗರ, ಅಂದ್ರಹಳ್ಳಿ, ಭವಾನಿ ನಗರ, ಬೋಳಾರೆ, ತಿಟ್ಟಹಳ್ಳಿ, ಗಂಟಕನದೊಡ್ಡಿ ಮತ್ತು ವೀರಸಂದ್ರ.

ಇದನ್ನೂ ಓದಿ:  Pro Kabaddi 2021: ಬೆಂಗಳೂರು ಬುಲ್ಸ್​ಗೆ ಯುಪಿ ಯೋಧಾರ ಸವಾಲು: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?

Published On - 4:18 pm, Wed, 12 January 22

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ