ರಾಜ್ಯದ ಜನರಿಗೆ ಕರೆಂಟ್ ಶಾಕ್ ನಿಶ್ಚಿತ: ಜುಲೈ 1ರಿಂದ ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ, ಎಷ್ಟು?

| Updated By: ಆಯೇಷಾ ಬಾನು

Updated on: Jun 30, 2022 | 2:46 PM

ಕಳೆದ ಎರಡು ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳ ಹಿನ್ನೆಲೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದ್ದು ಎಸ್ಕಾಂಗಳ ಮನವಿ ಮೇರೆಗೆ KERC ದರ ಏರಿಕೆ ಮಾಡಲಿದೆ.

ರಾಜ್ಯದ ಜನರಿಗೆ ಕರೆಂಟ್ ಶಾಕ್ ನಿಶ್ಚಿತ: ಜುಲೈ 1ರಿಂದ ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ, ಎಷ್ಟು?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ತರಕಾರಿ ಬೆಲೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದು ಹೈರಾಣಿಗಿರುವ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ನಾಳೆಯಿಂದ ರಾಜ್ಯದ ಜನರ ಜೇಬಿಗೆ ಕತ್ತರಿ ಬೀಳಲಿದೆ. ರಾಜ್ಯದಲ್ಲಿ ಜುಲೈ 1ರಿಂದ ಮತ್ತೆ ವಿದ್ಯುತ್ ದರ ಏರಿಕೆಯಾಗಲಿದೆ(Power Tariff Hike).

ಜುಲೈ 1ರಿಂದ ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ 19-31 ರೂಪಾಯಿ ಹೆಚ್ಚಳವಾಗಲಿದೆ. ಪ್ರತಿ ತಿಂಗಳು 100 ಯೂನಿಟ್ ಬಳಸುವ ಗ್ರಾಹಕರು ಇನ್ಮುಂದೆ 19 ರಿಂದ 31 ರೂ. ಪಾವತಿಸಬೇಕು. ಕಳೆದ ಎರಡು ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳ ಹಿನ್ನೆಲೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದ್ದು ಎಸ್ಕಾಂಗಳ ಮನವಿ ಮೇರೆಗೆ KERC ದರ ಏರಿಕೆ ಮಾಡಲಿದೆ. ಇದನ್ನೂ ಓದಿ: Karnataka Bank FD Interest Rates: ಕರ್ಣಾಟಕ ಬ್ಯಾಂಕ್​ನಿಂದ ಠೇವಣಿ ಬಡ್ಡಿ ದರಗಳ ಏರಿಕೆ

ಹಾಗಾದ್ರೆ ಎಸ್ಕಾಂಗಳು ಎಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು?
ಪ್ರತಿ ಯೂನಿಟ್‍ಗೆ 38 ರಿಂದ 55 ಪೈಸೆಗೆ ಪ್ರಸ್ತಾವನೆ ಕೋರಲಾಗಿತ್ತು.
-ಬೆಸ್ಕಾಂ 55.28 ಪೈಸೆ
-ಮೆಸ್ಕಾಂ 38.98 ಪೈಸೆ
-ಸೆಸ್ಕಾಂ 40.47 ಪೈಸೆ
-ಹೆಸ್ಕಾಂ 49.54 ಪೈಸೆ
-ಗೆಸ್ಕಾಂ 39.36 ಪೈಸೆ

ವಿದ್ಯುತ್ ದರ ಹೆಚ್ಚಳಕ್ಕೆ ಪ್ರಮುಖ ಕಾರಣ ಏನು?
-ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಳ.
-ಹೊರೆ ಕಡಿಮೆಯಾದ ಕೂಡಲೇ ಬೆಲೆಗಳು ವಾಪಸ್ ಯಥಾಸ್ಥಿತಿಗೆ ಬರುವ ಸಾಧ್ಯತೆ
-ಕಲ್ಲಿದ್ದಲು ಅಭಾವ ಹಾಗೂ ದರ ಕೂಡ ಹೆಚ್ಚಳವಾಗಿದೆ.
-ಆರ್ಥಿಕವಾಗಿ ನಷ್ಟದಲ್ಲಿರುವ ಎಸ್ಕಾಂಗಳು ತಾತ್ಕಾಲಿಕ ಮಟ್ಟಕ್ಕೆ ದರ ಹೆಚ್ಚು ಮಾಡಲಾಗಿದೆ.