ಬೆಂಗಳೂರಿನ ಪ್ರಭುಧ್ಯಾ ಕೊಲೆಯಾಗಿರುವುದು ಧೃಡ, ಓರ್ವ ಅಪ್ರಾಪ್ತ ಪೊಲೀಸ್ ವಶಕ್ಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 24, 2024 | 9:31 PM

ಕೆಲ ದಿನಗಳ ಹಿಂದೆ ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್​ ಠಾಣಾ (Subramanyapura Police Station) ವ್ಯಾಪ್ತಿಯಲ್ಲಿ ಪ್ರಭುಧ್ಯಾ (prabhudhya) ಎಂಬ ಯುವತಿಯ ಶವ ಪತ್ತೆಯಾಗಿತ್ತು. ಮೊದಲಿಗೆ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಲಾಗಿತ್ತು. ಆದರೆ, ಈ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರ ತನಿಖೆ ವೇಳೆ ಪ್ರಬುದ್ಧಳನ್ನ ಕೊಲೆ ಮಾಡಿರುವುದು ಧೃಡವಾಗಿದೆ.

ಬೆಂಗಳೂರಿನ ಪ್ರಭುಧ್ಯಾ ಕೊಲೆಯಾಗಿರುವುದು ಧೃಡ, ಓರ್ವ ಅಪ್ರಾಪ್ತ ಪೊಲೀಸ್ ವಶಕ್ಕೆ
Follow us on

ಬೆಂಗಳೂರು, ಮೇ.23: ಮೇ.15ರಂದು ಕತ್ತು ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಪ್ರಭುಧ್ಯಾ (prabhudhya) ಶವ ಸುಬ್ರಮಣ್ಯಪುರ ಪೊಲೀಸ್​ ಠಾಣಾ (Subramanyapura Police Station) ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಈ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರ ತನಿಖೆ ವೇಳೆ ಪ್ರಬುದ್ಧಳನ್ನ ಕೊಲೆ ಮಾಡಿರುವುದು ಧೃಡವಾಗಿದೆ. ಈ ಹಿನ್ನಲೆ ಓರ್ವ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಘಟನೆ?

ಇದೇ ಮೇ.15ರಂದು ಪ್ರಭುಧ್ಯಾ ಶವ ಪತ್ತೆಯಾಗಿತ್ತು. ಇದನ್ನು ಪೊಲೀಸರು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲು ಮಾಡಿದ್ದರು. ಆದ್ರೆ, ಮೃತದೇಹ ಪತ್ತೆಯಾದ ಮೂರು ದಿನಗಳ ನಂತರ ಮೃತ ಯುವತಿ ತಾಯಿ ಸೌಮ್ಯ ಅವರು ನೀಡಿದ ದೂರಿನ ಮೇಲೆ ಸೆಕ್ಷನ್ 302ರಡಿ ಕೊಲೆ ಪ್ರಕರಣ ದಾಖಲು ಮಾಡಲಾಗಿತ್ತು. ಪ್ರಭುಧ್ಯಾ ತಲೆಗೆ ಹೊಡೆದು, ಕತ್ತು ಕೊಯ್ದು, ಮುಖಕ್ಕೂ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ತಾಯಿ ಸೌಮ್ಯ ಆರೋಪಿಸಿದ್ದರು.

ಇದನ್ನೂ ಓದಿ:ಬೆಂಗಳೂರು: ಬಾತ್ ರೂಂನಲ್ಲಿ PUC ವಿದ್ಯಾರ್ಥಿನಿ ಮೃತದೇಹ ಪತ್ತೆ.. ಸಾವಿನ ಸುತ್ತ ಅನುಮಾನದ ಹುತ್ತ!

ಈ ಹಿನ್ನೆಲೆ ಕೊಲೆ ಪ್ರಕರಣ ದಾಖಲಿಸಿ ಸುಬ್ರಮಣ್ಯಪುರ ಪೊಲೀಸರು ತನಿಖೆ ನಡೆಸುತ್ತಿದ್ದು, ಒಂದು ಕಡೆ ಅನುಮಾನಸ್ಪದ ವ್ಯಕ್ತಿಗಳನ್ನ ವಿಚಾರಣೆ, ಮತ್ತೊಂದು ಕಡೆ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಯುತ್ತಿದ್ದು, ಸಿಸಿಟಿವಿಯಲ್ಲಿ ಅನುಮಾನಸ್ಪದವಾಗಿ ಕಂಡು ಬಂದವರನ್ನೂ ಕೂಡಲೇ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ಇದೀಗ ಓರ್ವನನ್ನ ವಶಕ್ಕೆ ಪಡೆದಿದ್ದಾರೆ. ಆದರೆ, ಘಟನೆಯಾದ ದಿನದಿಂದ ಪ್ರಭುಧ್ಯಾ ಮೊಬೈಲ್ ಫೋನ್ ಕಾಣೆಯಾಗಿದೆ.

‘ಸದ್ಯ ಪೊಲೀಸರು ಮೊಬೈಲ್ ಫೋನ್ ಎಲ್ಲಿದೆ ಎಂದು ಟ್ರೇಸ್ ಮಾಡುತ್ತಿದ್ದು, ಯಾರಾದರೂ ತೆಗೆದುಕೊಂಡಿದ್ದಾರಾ? ಎಲ್ಲಾದ್ರೂ ಮಿಸ್ ಆಗಿದ್ಯಾ ಎಂದು ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಆಕೆಯ ಕಾಲ್ ಡಿಟೇಲ್ಸ್ ಕೂಡ ಕಲೆ ಹಾಕಲಾಗುತ್ತಿದೆ. ಇನ್ನೊಂದು ಕಡೆ ಪ್ರಭುಧ್ಯಾ ಮರಣೋತ್ತರ ಪರೀಕ್ಷೆ ವರದಿಗೆ ಪೊಲೀಸರು ಕಾಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆ ಯುವತಿ ಸಾವಿನ ಬಗ್ಗೆ ನಿಖರ ಮಾಹಿತಿಗಳು ಸಿಗಲಿವೆ. ಸದ್ಯ ಎಲ್ಲಾ ಆಯಾಮಗಳಲ್ಲೂ ಸುಬ್ರಮಣ್ಯಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Thu, 23 May 24