Bengaluru: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಂಪನ್ನ

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಮಾರಂಭ ಅದ್ಧೂರಿಯಾಗಿ ನೆರವೇರಿತು. 3,686 ಪದವಿಪೂರ್ವ ವಿದ್ಯಾರ್ಥಿಗಳು, 1,233 ಸ್ನಾತಕೋತ್ತರ ಪದವೀಧರರು, 34 ಪಿಹೆಚ್​​ಡಿ ವಿದ್ವಾಂಸರು, 32 ಚಿನ್ನದ ಪದಕ ವಿಜೇತರು ಸೇರಿದಂತೆ 4,953 ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು. ಕುಲಪತಿ ಡಾ. ನಿಸ್ಸಾರ್ ಅಹ್ಮದ್ ಮತ್ತು ಸಂಸ್ಥಾಪಕ ಟ್ರಸ್ಟಿ ಕೌಸರ್ ನಿಸ್ಸಾರ್ ಅಹ್ಮದ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು.

Bengaluru: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಂಪನ್ನ
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ

Updated on: Dec 01, 2025 | 5:47 PM

ಬೆಂಗಳೂರು, ಡಿಸೆಂಬರ್​​ 01: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಮಾರಂಭ ನವೆಂಬರ್​​ 29ರಂದು ಅದ್ಧೂರಿಯಾಗಿ ನೆರವೇರಿತು. ಕುಲಪತಿ ಡಾ. ನಿಸ್ಸಾರ್ ಅಹ್ಮದ್ ಮತ್ತು ಸಂಸ್ಥಾಪಕ ಟ್ರಸ್ಟಿ ಕೌಸರ್ ನಿಸ್ಸಾರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಯಾಗಿ ಬ್ಲಾಕ್‌ಬಸ್ಟರ್ ಸಿನಿಮಾಗಳ ನಿರ್ಮಾಪಕ, ಜಾಗತಿಕ ಆನ್ಲೈನ್ ಉನ್ನತ ಶಿಕ್ಷಣ ವೇದಿಕೆ UpGrad ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷರೂ ಆದ ರೋನಿ ಸ್ಕ್ರೂವಾಲಾ ಭಾಗವಹಿಸಿದ್ದರು. ಗೌರವ ಅತಿಥಿಯಾಗಿ ಪತ್ರಕರ್ತ ದಿಲೀಪ್ ಠಾಕೋರ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಾಕ್ಷಿಯಾದ ಘಟಿಕೋತ್ಸವ

ಘಟಿಕೋತ್ಸವ ಸಮಾರಂಭ

3,686 ಪದವಿಪೂರ್ವ ವಿದ್ಯಾರ್ಥಿಗಳು, 1,233 ಸ್ನಾತಕೋತ್ತರ ಪದವೀಧರರು, 34 ಪಿಹೆಚ್​​ಡಿ ವಿದ್ವಾಂಸರು, 32 ಚಿನ್ನದ ಪದಕ ವಿಜೇತರು ಸೇರಿದಂತೆ 4,953 ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಘಟಿಕೋತ್ಸವ ಸಮಾರಂಭ ಸಾಕ್ಷಿಯಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ರೋನಿ ಸ್ಕ್ರೂವಾಲಾ ಅವರು ಮಾತನಾಡಿ, ದೇಶದಲ್ಲಿ ಯುವಕರಿಗೆ ಹೆಚ್ಚುತ್ತಿರುವ ಅವಕಾಶಗಳ ಬಗ್ಗೆ ತಿಳಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಉದ್ಯಮಶೀಲತೆಯ ಪ್ರಾಮುಖ್ಯತೆ ತಿಳಿಸಿಕೊಡುವ ಜೊತೆಗೆ ಪ್ರತಿಯೊಬ್ಬ ಯುವಕನು ಕನಸು ಕಾಣಲು ಧೈರ್ಯ ಮಾಡಬೇಕು. ಬಹು ಅವಕಾಶಗಳನ್ನು ಸ್ವೀಕರಿಸುವ ಜೊತೆಗೆ ವೈಫಲ್ಯಕ್ಕೆ ಎಂದಿಗೂ ಭಯಪಡಬಾರದು ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ: ಕಾಲೇಜುಗಳು ಸರಿಯಾದ ಸಮಯಕ್ಕೆ ಪರೀಕ್ಷೆ ನಡೆಸಿ ಸರ್ಟಿಫಿಕೆಟ್ ನೀಡಬೇಕು; ಯುಜಿಸಿ ನಿರ್ದೇಶನ

ವಿದ್ಯಾರ್ಥಿಗಳು ಹೇಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಮತ್ತು ತಾವು ದೇಶದ ಆಸ್ತಿಯಾಗಿ ಹೇಗೆ ಬದಲಾಗಬೇಕು ಎಂಬ ಬಗ್ಗೆ ಕಾರ್ಯಕ್ರಮದ ಗೌರವ ಅತಿಥಿ ದಿಲೀಪ್ ಠಾಕೂರ್ ತಿಳಿಸಿಕೊಟ್ಟರು. ಉಪಕುಲಪತಿ (ಪ್ರಭಾರಿ) ಡಾ.ಎಸ್.ಜೆ. ತಿರುವೇಂಗಡಂ ಅವರು 2024-25ರ ಶೈಕ್ಷಣಿಕ ವರ್ಷದಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸಾಧನೆಗಳನ್ನು ಬಿಂಬಿಸುವ ವಾರ್ಷಿಕ ಶೈಕ್ಷಣಿಕ ವರದಿಯನ್ನು ಮಂಡಿಸಿದರು. ರಿಜಿಸ್ಟ್ರಾರ್ ಡಾ. ಸಮೀನಾ ನೂರ್ ಅಹ್ಮದ್ ಪನಾಲಿ ಘಟಿಕೋತ್ಸವ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಉಪಾಧ್ಯಕ್ಷರಾದ ಸುಹೇಲ್ ಅಹ್ಮದ್ ಮತ್ತು ಪ್ರೆಸಿಡೆನ್ಸಿ ಗ್ರೂಪ್ ಆಫ್ ಸ್ಕೂಲ್ಸ್ ಉಪಾಧ್ಯಕ್ಷರಾದ ಡಾ.ನಫೀಸಾ ಅಹ್ಮದ್ ಅವರು ಈ ಸಂದರ್ಭ ಉಪಸ್ಥಿತರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:46 pm, Mon, 1 December 25