AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ: ಪ್ರೆಸಿಡೆನ್ಸಿ ಲೀಗಲ್ ಇಂಡಸ್ಟ್ರಿ ಇಂಟರ್‌ಫೇಸ್ ಸಮಿಟ್ 2025 ಸಂಪನ್ನ

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸ್ಕೂಲ್​ ಆಫ್​ ಲಾ ವತಿಯಿಂದ ಪ್ರೆಸಿಡೆನ್ಸಿ ಲೀಗಲ್ ಇಂಡಸ್ಟ್ರಿ ಇಂಟರ್‌ಫೇಸ್ ಸಮಿಟ್ 2025 ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ ಉದಯ ಹೊಳ್ಳ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉದಯ ಹೊಳ್ಳಾ, ರಾಮಸ್ವಾಮಿ ಮತ್ತು ಡಾ. ಸರೋಜ್ ಶರ್ಮಾ ಅವರನ್ನು ವಿಶ್ವವಿದ್ಯಾಲಯದ ಚಾನ್ಸಲರ್ ಡಾ. ನಿಸ್ಸಾರ್ ಅಹಮದ್ ಸನ್ಮಾನಿಸಿದರು.

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ: ಪ್ರೆಸಿಡೆನ್ಸಿ ಲೀಗಲ್ ಇಂಡಸ್ಟ್ರಿ ಇಂಟರ್‌ಫೇಸ್ ಸಮಿಟ್ 2025 ಸಂಪನ್ನ
ಕಾರ್ಯಕ್ರಮದ ಉದ್ಘಾಟನೆ
ಪ್ರಸನ್ನ ಹೆಗಡೆ
|

Updated on:Oct 31, 2025 | 6:07 PM

Share

ಬೆಂಗಳೂರು, ಅಕ್ಟೋಬರ್​ 31: ವಕೀಲರಾದವರಿಗೆ ಹಣ ಗಳಿಸುವುದು ಆರಂಭದ ಗುರಿಯಾಗಬಾರದು, ಸತ್ಯನಿಷ್ಠೆಯಿಂದ ಸಮಾಜ ಸೇವೆ ಮಾಡುವುದೇ ಮುಖ್ಯವಾಗಬೇಕು ಎಂದು ಹಿರಿಯ ವಕೀಲ ಉದಯ ಹೊಳ್ಳ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸ್ಕೂಲ್​ ಆಫ್​ ಲಾ ವತಿಯಿಂದ ಆಯೋಜಿಸಲಾಗಿದ್ದ ಪ್ರೆಸಿಡೆನ್ಸಿ ಲೀಗಲ್ ಇಂಡಸ್ಟ್ರಿ ಇಂಟರ್‌ಫೇಸ್ ಸಮಿಟ್ 2025ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ವಕೀಲ ವೃತ್ತಿಯು ಒಂದು ಪವಿತ್ರ ಮತ್ತು ಸೇವಾಭಾವದ ವೃತ್ತಿಯಾಗಿದೆ. ನ್ಯಾಯ, ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ನಿರಂತರ ಜ್ಞಾನಾಸಕ್ತಿ ಪ್ರತಿಯೊಬ್ಬ ವಕೀಲನಲ್ಲೂ ಇರಬೇಕಾದ ಗುಣಗಳು ಎಂದರು.

ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದ ಕೆಪಿಎಂಜಿ (KPMG) ಇಂಡಿಯಾದ ಎಜುಕೇಶನ್ ಮತ್ತು ಸ್ಕಿಲ್ ಡೆವಲಪ್ಮೆಂಟ್ ವಿಭಾಗದ ರಾಷ್ಟ್ರೀಯ ನಾಯಕ ನರಾಯಣನ್ ರಾಮಸ್ವಾಮಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಉದ್ಯಮಕ್ಕೆ ತಕ್ಕಂತೆ ತಾವು ಸಿದ್ಧರಾಗಬೇಕು ಎಂದರು.

ಇದನ್ನೂ ಓದಿ:  ಸೈನಿಕ್ ಶಾಲಾ ಪ್ರವೇಶ ಪರೀಕ್ಷಾ ನೋಂದಣಿ ಶೀಘ್ರದಲ್ಲೇ ಮುಕ್ತಾಯ; ಕೂಡಲೇ ಅರ್ಜಿ ಸಲ್ಲಿಸಿ

ಸನ್ಮಾನ ಕಾರ್ಯಕ್ರಮ

Presidency University 2

ಉದಯ ಹೊಳ್ಳಾ ಅವರನ್ನು ಸನ್ಮಾನಿಸಲಾಯಿತು.

ಉದಯ ಹೊಳ್ಳಾ, ರಾಮಸ್ವಾಮಿ ಮತ್ತು ಡಾ. ಸರೋಜ್ ಶರ್ಮಾ (ಡೀನ್, ಕಾನೂನು ಶಾಲೆ) ಅವರನ್ನು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಚಾನ್ಸಲರ್ ಡಾ. ನಿಸ್ಸಾರ್ ಅಹಮದ್ ಸನ್ಮಾನಿಸಿದರು. ಒಂದು ದಿನದ ಈ ಸಮಿಟ್‌ನಲ್ಲಿ ಪ್ರಮುಖ ಸಂಸ್ಥೆಗಳ ಗಣ್ಯರನ್ನ ಒಳಗೊಂಡ ನಾಲ್ಕು ವಿಶಿಷ್ಟ ಪ್ಯಾನೆಲ್ ಚರ್ಚೆಗಳು ನಡೆದವು.  ಅಕಾಡೆಮಿಕ್ ವಲಯ ಮತ್ತು ಕಾನೂನು ಕ್ಷೇತ್ರದ ನಡುವಿನ ಸಹಯೋಗವನ್ನು ಬಲಪಡಿಸುವ ಜೊತೆಗೆ ಜ್ಞಾನ ವಿನಿಮಯಕ್ಕಾಗಿ ವೇದಿಕೆ ಒದಗಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:05 pm, Fri, 31 October 25

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ