AISSEE 2026: ಸೈನಿಕ್ ಶಾಲಾ ಪ್ರವೇಶ ಪರೀಕ್ಷಾ ನೋಂದಣಿ ಶೀಘ್ರದಲ್ಲೇ ಮುಕ್ತಾಯ; ಕೂಡಲೇ ಅರ್ಜಿ ಸಲ್ಲಿಸಿ
ಸೈನಿಕ ಶಾಲೆಗಳ 2026ರ AISSEE ಪ್ರವೇಶಕ್ಕೆ ನೋಂದಣಿ ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಆಸಕ್ತ ವಿದ್ಯಾರ್ಥಿಗಳು ಅಕ್ಟೋಬರ್ 30ರೊಳಗೆ exams.nta.ac.in/AISSEE ನಲ್ಲಿ ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಗೆ ಅ.31 ಕೊನೆಯ ದಿನಾಂಕ. ನವೆಂಬರ್ 2ರಂದು ತಿದ್ದುಪಡಿ ವಿಂಡೋ ತೆರೆಯಲಿದೆ. ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ ವಿವರಗಳು ಮತ್ತು ಜನವರಿ 2026ರಲ್ಲಿ ನಡೆಯುವ ಪರೀಕ್ಷೆಯ ಮಾದರಿ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಿದೆ.

ಸೈನಿಕ ಶಾಲೆಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಈ ಸುದ್ದಿ ಅತ್ಯಂತ ಮುಖ್ಯವಾಗಿದೆ. ಅಖಿಲ ಭಾರತ ಸೈನಿಕ ಶಾಲೆಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ 2026ರ AISSEE ನೋಂದಣಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್, exams.nta.ac.in/AISSEE ನಲ್ಲಿ ಅಕ್ಟೋಬರ್ 30 ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕವನ್ನು ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31. ಅಭ್ಯರ್ಥಿಗಳು ಯಾವುದೇ ದೋಷಗಳನ್ನು ಮಾಡಿದ್ದರೆ, ಅರ್ಜಿ ತಿದ್ದುಪಡಿ ವಿಂಡೋ ನವೆಂಬರ್ 2 ರಂದು ತೆರೆಯುತ್ತದೆ.
ಅರ್ಜಿ ಶುಲ್ಕ ಎಷ್ಟು?
ಅರ್ಜಿ ಶುಲ್ಕವನ್ನು ಆನ್‌ಲೈನ್ ಪಾವತಿ ಗೇಟ್‌ವೇಗಳು, ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ ಪಾವತಿಸಬಹುದು. ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 850 ರೂ., ಎಸ್‌ಸಿ/ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ 700 ರೂ. ಯಾವುದೇ ಪ್ರಶ್ನೆಗಳು ಅಥವಾ ಸಹಾಯಕ್ಕಾಗಿ, ಅಭ್ಯರ್ಥಿಗಳು ಎನ್‌ಟಿಎ ಸಹಾಯ ಕೇಂದ್ರವನ್ನು 011-40759000 ಗೆ ಕರೆ ಮಾಡಬಹುದು ಅಥವಾ aissee@nta.ac.in ಗೆ ಇಮೇಲ್ ಮಾಡಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
- ಅಭ್ಯರ್ಥಿಯು ಮೊದಲು exams.nta.ac.in/AISSEE ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
- ಅಲ್ಲಿ AISSEE 2026: ನೋಂದಾಯಿಸಲು/ಲಾಗಿನ್ ಮಾಡಲು ಲಿಂಕ್ ಅನ್ನು ಕ್ಲಿಕ್ ಮಾಡಿ.
- ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ನೋಂದಣಿ ನಂತರ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ.
- ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, apply ಬಟನ್ ಕ್ಲಿಕ್ ಮಾಡಿ.
- ಸಲ್ಲಿಸಿದ ನಂತರ, ದೃಢೀಕರಣ ಪುಟದ ಪ್ರಿಂಟ್ ತೆಗೆದುಕೊಳ್ಳಿ.
ಇದನ್ನೂ ಓದಿ: ಕರ್ನಾಟಕ ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ; ಪಿಯುಸಿ, ಪದವೀಧರರು ಅರ್ಜಿ ಸಲ್ಲಿಸಿ
ಪರೀಕ್ಷೆಯ ದಿನಾಂಕ, ಮಾದರಿ ಮತ್ತು ಫಲಿತಾಂಶ:
AISSEE 2026 ಪರೀಕ್ಷೆಯು 2026 ರ ಜನವರಿಯಲ್ಲಿ ನಡೆಯುವ ನಿರೀಕ್ಷೆಯಿದೆ. ಪರೀಕ್ಷೆಯು ಬಹು ಆಯ್ಕೆಯ (MCQ) ಪ್ರಶ್ನೆಗಳನ್ನು ಆಧರಿಸಿರುತ್ತದೆ ಮತ್ತು ಪೆನ್ನು ಮತ್ತು ಕಾಗದದ ವಿಧಾನದಲ್ಲಿ ನಡೆಸಲಾಗುವುದು. 6 ನೇ ತರಗತಿಯ ಪ್ರವೇಶಕ್ಕಾಗಿ ಪರೀಕ್ಷೆಯು 150 ನಿಮಿಷಗಳ ಕಾಲಾವಕಾಶ ಮತ್ತು 13 ಮಾಧ್ಯಮಗಳಲ್ಲಿ ನಡೆಸಲಾಗುವುದು. 9 ನೇ ತರಗತಿಯ ಪ್ರವೇಶಕ್ಕಾಗಿ ಪರೀಕ್ಷೆಯು 180 ನಿಮಿಷಗಳಿದ್ದು ಮತ್ತು ಇಂಗ್ಲಿಷ್‌ನಲ್ಲಿ ನಡೆಸಲಾಗುವುದು. ಸಂಪೂರ್ಣ ಪರೀಕ್ಷಾ ಯೋಜನೆ, ಪಠ್ಯಕ್ರಮ ಮತ್ತು ಅರ್ಹತಾ ಮಾನದಂಡಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಪರೀಕ್ಷೆಯ ನಾಲ್ಕರಿಂದ ಆರು ವಾರಗಳಲ್ಲಿ ಫಲಿತಾಂಶಗಳನ್ನು ಘೋಷಿಸಲಾಗುತ್ತದೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




