ದೇವಸ್ಥಾನಗಳ ಆನ್ ಲೈನ್ ಪೂಜೆ ವ್ಯವಸ್ಥೆಯ ಬಗ್ಗೆ ಅರ್ಚಕರ ಬೇಸರ; ಈ ವ್ಯವಸ್ಥೆ ವಜಾಗೊಳಿಸಲು ಒತ್ತಾಯ

| Updated By: ಆಯೇಷಾ ಬಾನು

Updated on: Jul 31, 2024 | 9:18 AM

ದೇವಸ್ಥಾನಗಳಲ್ಲಿ ಭಕ್ತದಿಗಳು ಕ್ಯೂ‌ ನಿಲ್ಲುವುದು‌ ಕಡಿಮೆಯಾಗಲಿ ಎನ್ನುವ ಕಾರಣಕ್ಕೆ‌ ಮುಜುರಾಯಿ ಇಲಾಖೆ ಪೂಜೆಗಳನ್ನ‌ ಮಾಡಿಸಲು ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಿತ್ತು.‌ ಆದರೆ ಇದರಿಂದ‌ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗುತ್ತಿದೆ. ಮೊದಲು ಈ ವ್ಯವಸ್ಥೆಯನ್ನು ಕ್ಯಾನ್ಸಲ್‌ ಮಾಡಿ ಎಂದು ಅರ್ಚಕರು ಒತ್ತಾಯಿಸಿದ್ದಾರೆ.‌

ದೇವಸ್ಥಾನಗಳ ಆನ್ ಲೈನ್ ಪೂಜೆ ವ್ಯವಸ್ಥೆಯ ಬಗ್ಗೆ ಅರ್ಚಕರ ಬೇಸರ; ಈ ವ್ಯವಸ್ಥೆ ವಜಾಗೊಳಿಸಲು ಒತ್ತಾಯ
ದೇವಸ್ಥಾನಗಳ ಅನ್ ಲೈನ್ ವ್ಯವಸ್ಥೆಯ ಬಗ್ಗೆ ಅರ್ಚಕರ ಬೇಸರ
Follow us on

ಬೆಂಗಳೂರು, ಜುಲೈ.31: ನಗರದ ದೇವಸ್ಥಾನಗಳಲ್ಲಿ ನೂಕು- ನುಗ್ಗಲಲ್ಲಿ ಬರುವ ಭಕ್ತಾದಿಗಳ ಸಂಖ್ಯೆಯನ್ನ ಕಡಿಮೆ ಮಾಡುವ ಸಲುವಾಗಿ ಮುಜುರಾಯಿ ಇಲಾಖೆ ಪೂಜೆಗಳನ್ನ ಆನ್ ಲೈನ್ ನಲ್ಲಿ ಮಾಡಿಸಲು ವ್ಯವಸ್ಥೆ ಮಾಡಿತ್ತು. ಆದರೆ ಆನ್ ಲೈನ್ ಪೂಜೆಯನ್ನ (Online Puja) ಜಾರಿ ಮಾಡಿ ಕೆಲವೇ ತಿಂಗಳಲ್ಲಿ ಹಲವು ಸಮಸ್ಯೆಗಳು ತಲೆದೂರಿದ್ದು, ಅರ್ಚಕರ ಅಸೋಸಿಯೇಷನ್ ವತಿಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ದೇವಸ್ಥಾನಗಳಲ್ಲಿ ತಂದಿರುವ ಅನ್ ಲೈನ್ ವ್ಯವಸ್ಥೆ ಬಗ್ಗೆ ಅರ್ಚಕರ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿದೆ. ಮೂರು ತಿಂಗಳ ಹಿಂದೆ ಎ ಮತ್ತು ಬಿ ವರ್ಗದ ಮುಜುರಾಯಿ ದೇವಾಲಯಗಳಲ್ಲಿ ಅನ್ ಲೈನ್ ಪೂಜೆ ವ್ಯವಸ್ಥೆಯನ್ನ ಜಾರಿ ಮಾಡಲಾಗಿತ್ತು. ಇದರಲ್ಲಿ ವಿಶೇಷ ಪೂಜೆ, ಅರ್ಚನೆ, ಹೋಮ, ಪ್ರಸಾದ ಕುರಿತಾಗಿ ಬುಕಿಂಗ್ ವ್ಯವಸ್ಥೆಯನ್ನ ಮಾಡಲಾಗಿತ್ತು. ಆದರೆ ಈಗ ಜಾರಿ ಮಾಡಿರುವ ಅನ್ ಲೈನ್ ವ್ಯವಸ್ಥೆಯಿಂದಾಗಿ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿ ಹೋಗಿವೆ. ರಾತ್ರಿ 11 ಗಂಟೆಗೆ ಕರೆ ಮಾಡಿ ಬೆಳ್ಳಗ್ಗೆ ಅಭಿಷೇಕ ಮಾಡಬೇಕು ಅಂತರೇ. ಹೇಳಿದ ಸಮಯದಲ್ಲಿ ಹೋಮ ಮಾಡ್ಬೇಕು ಅಂತಾರೆ.

ಒಂದು ಕೆಜಿಯಷ್ಟು ಪ್ರಸಾದಕ್ಕೆ ಬುಕ್ ಮಾಡುತ್ತಾರೆ. ನಾವು ಮಾಡಿಕೊಟ್ಟಿಲ್ಲ ಅಂದ್ರೆ ಜಗಳ ಮಾಡುವುದಕ್ಕೆ ಶುರುಮಾಡ್ತಾರೆ. ಇದರಿಂದ ಪ್ರತಿದಿನ ಬೆಳಗ್ಗೆ ದೇವಸ್ಥಾನದಲ್ಲಿ ನಡೆಯುವ ಪೂಜೆಗಳಿಗೆ ಸಮಸ್ಯೆಯಾಗುತ್ತಿದೆ. ಆನ್ ಲೈನ್ ಮಾಡುವ ಪೇಮೆಂಟ್​ಗಳು ಸರಿಯಾಗಿ ಆಗುತ್ತಿಲ್ಲ.‌ ಇದರಿಂದ ಇಲಾಖೆಗೆ ನಷ್ಟವಾಗುತ್ತಿದೆ. ಹೀಗಾಗಿ ಆನ್ ಲೈನ್ ಆ್ಯಪ್ ಕೂಡಲೇ ಡಿಲೀಟ್ ಮಾಡಬೇಕು. ದೊಡ್ಡ ದೊಡ್ಡ ದೇವಸ್ಥಾನದಲ್ಲಿ ಆನ್ ಲೈನ್ ವ್ಯವಸ್ಥೆಯನ್ನ ನೋಡಿಕೊಳ್ಳುವುದಕ್ಕೇನೆ ಒಂದು ವಿಶೇಷ ತಂಡ ಇರುತ್ತೆ. ಆದರೆ ಎ ಮತ್ತು ಬಿ ವರ್ಗದ ದೇವಸ್ಥಾನಗಳಲ್ಲಿ ಕೇವಲ ಅರ್ಚಕರು ಮಾತ್ರ ಇರುತ್ತಾರೆ.‌ ಇದರಿಂದ ಸಮಸ್ಯೆಯಾಗುತ್ತಿದೆ ಅಂತ ಅಖಿಲ ಕರ್ನಾಟಕ ಅರ್ಚಕರ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಇದನ್ನೂ ಓದಿ: Karnataka Rains Live Updates: ಕೊಡಗಿನ ಪ್ರವಾಸಿ ತಾಣಗಳಿಗೆ 2 ದಿನ ಪ್ರವೇಶ ನಿಷೇಧ

ಇನ್ನು ದೇವಸ್ಥಾನಗಳು ಇರುವುದೇ ಭಕ್ತಿಗಾಗಿ. ಬುಕಿಂಗ್ ಮಾಡಿಕೊಂಡು ಬರುವುದಕ್ಕೆ ದೇವಸ್ಥಾನಗಳು ಆಸ್ಪತ್ರೆಗಳಲ್ಲ. ಅಥವಾ ಯಾವುದೇ ಕೆಲಸವಲ್ಲ. ಬುಕಿಂಗ್ ವ್ಯವಸ್ಥೆ ನಾರ್ಮಲ್ ಜನರಿಗೆ ಸಮಸ್ಯೆಯಾಗುತ್ತಿದೆ. ಎಲ್ಲರಿಗೂ ಅನ್ ಲೈನ್ ವ್ಯವಸ್ಥೆ ಬಗ್ಗೆ ಮಾಹಿತಿ ಇರೋದಿಲ್ಲ. ಹೀಗಾಗಿ ಆನ್ ಲೈನ್ ವ್ಯವಸ್ಥೆಯನ್ನ ವಜಾಗೊಳಿಸಿ ನಾರ್ಮಾಲ್ ಆಗಿ ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಟ್ರೆ ಎಲ್ಲಾರೂ ಒಂದೇ ರೀತಿ ದೇವರ ದರ್ಶನ ಮಾಡಬಹುದು ಅಂತ ಭಕ್ತಾದಿಗಳು ತಿಳಿಸಿದ್ದಾರೆ.

ಇನ್ನು, ಈ ಕುರಿತಾಗಿ ಮುಜುರಾಯಿ ಇಲಾಖೆಯ ಸಚಿವರನ್ನ ಪ್ರಶ್ನಿಸಿದ್ದಕ್ಕೆ ಸಧ್ಯ ಕೆಲ ದೇವಸ್ಥಾನದಲ್ಲಿ ಮಾತ್ರ ಆನ್ ಲೈನ್ ವ್ಯವಸ್ಥೆ ಇದೆ. ಆನ್ ಲೈನ್ ವ್ಯವಸ್ಥೆಯಿಂದ ಏನೇನು ಸಮಸ್ಯೆಗಳಾಗುತ್ತಿವೆ ಎನ್ನುವ ಕುರಿತಾಗಿ ಸಭೆ ಮಾಡಿ ಕ್ರಮ ತೆಗೆದುಕೊಳ್ಳುವುದಾಗಿ ಟಿವಿ9 ಗೆ ಮಾಹಿತಿ ನೀಡಿದ್ರು. ಒಟ್ನಲ್ಲಿ, ಆನ್ ಲೈನ್ ವ್ಯವಸ್ಥೆ ಮಾಡಿದ ಕೆಲ ತಿಂಗಳಲ್ಲಿ ಅರ್ಚಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದು, ಮುಜುರಾಯಿ ಇಲಾಖೆ ಏನು ಕ್ರಮ ತೆಗೆದುಕೊಳ್ಳುತ್ತೆ ಎನ್ನುವುದನ್ನ ಕಾದು ನೋಡ್ಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ