AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕೆಟ್ ದರ ಏರಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೆಎಸ್ಆರ್​ಟಿಸಿ, ಬಿಎಂಟಿಸಿ

ಬಿಎಂಟಿಸಿಯ ಟಿಕೆಟ್ ದರ ಹೆಚ್ಚಳ ಮಾಡಿ ಬರೋಬ್ಬರಿ ಹತ್ತು ವರ್ಷ ಆಗಿವೆ. ಕೆಎಸ್ಆರ್​ಟಿಸಿ ಸೇರಿದಂತೆ ಮೂರು ನಿಗಮಗಳ ಟಿಕೆಟ್ ದರ ಹೆಚ್ಚಳ ಮಾಡಿ ನಾಲ್ಕು ವರ್ಷಗಳಾಗಿವೆ. ಈಗಾಗಲೇ ರಾಜ್ಯ ಸರ್ಕಾರ ಡಿಸೇಲ್ ಮೇಲೆ ಚಿಲ್ಲರೆ ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಿದೆ. ಇದರಿಂದ ಹೆಚ್ಚುವರಿಯಾಗಿ ವರ್ಷಕ್ಕೆ 190 ರಿಂದ 200 ಕೋಟಿ ರೂ. ಹೊರೆಯಾಗಲಿದೆ. ದಯವಿಟ್ಟು ಟಿಕೆಟ್ ದರ ಏರಿಕೆ ಮಾಡಿ ಎಂದು ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.

ಟಿಕೆಟ್ ದರ ಏರಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೆಎಸ್ಆರ್​ಟಿಸಿ, ಬಿಎಂಟಿಸಿ
ಕೆಎಸ್ಆರ್​ಟಿಸಿ ಬಸ್
Kiran Surya
| Edited By: |

Updated on: Jul 31, 2024 | 7:33 AM

Share

ಬೆಂಗಳೂರು, ಜುಲೈ 31: ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ಬಸ್ ಟಿಕೆಟ್ ದರ ಏರಿಕೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಬಿಎಂಟಿಸಿ ಬರೋಬ್ಬರಿ ಶೇ 37 ರಷ್ಟು ಟಿಕೆಟ್ ದರ ಹೆಚ್ಚಳ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದರೆ, ಕೆಎಸ್ಆರ್​ಟಿಸಿ ಶೇರರಷ್ಟು, ಎನ್​​ಡಬ್ಲ್ಯೂಕೆಆರ್​​ಟಿಸಿ ಶೇ 30 ಹಾಗೂ ಕೆಕೆಆರ್​​ಟಿಸಿ ಶೇ 30 ರಷ್ಟು ಟಿಕೆಟ್ ದರ ಏರಿಕೆ ಮಾಡುವಂತೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿವೆ.

ನಾಲ್ಕು ನಿಗಮಗಳಿಂದ ಒಟ್ಟಾಗಿ ಬರೋಬ್ಬರಿ ಶೇ 127 ರಷ್ಟು ದರ ಏರಿಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡಿ ಬರೋಬ್ಬರಿ 10 ವರ್ಷಗಳಾಗಿದ್ದರೆ ಇತ್ತ ಕೆಎಸ್ಆರ್ಟಿಸಿ, ಕೆಕೆಆರ್ಟಿಸಿ ಹಾಗೂ ಎನ್ಡಬ್ಲೂಕೆಆರ್ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿ 4 ವರ್ಷಗಳಾಗಿವೆ. ದರ ಹೆಚ್ಚಳವಾಗಿದೆ, ಬಿಡಿ ಭಾಗಗಳ ದರ ಹೆಚ್ಚಳವಾಗಿದೆ, ನೌಕರರಿಗೆ ಸಂಬಳ ಹೆಚ್ಚಳ ಮಾಡಲಾಗಿದೆ. ನಾಲ್ಕು ನಿಗಮಗಳು ನಷ್ಟದಲ್ಲಿದೆ ದರ ಏರಿಕೆ ಅನಿವಾರ್ಯ ಎಂದು ನಿಗಮಗಳು ಮನವಿ ಮಾಡಿವೆ. ಎಂದು ಸಾರಿಗೆ ಮುಖಂಡ ಜಗದೀಶ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಡಿಸೇಲ್ ಮೇಲೆ ಸುಮಾರು ಮೂರೂವರೆ ರುಪಾಯಿಯಷ್ಟು ದರ ಏರಿಕೆ ಮಾಡಿದ್ದು, ಇದರಿಂದ ನಾಲ್ಕು ನಿಗಮದ ಬಸ್ಸುಗಳಿಗೆ ಡಿಸೇಲ್ ಹಾಕಿಸಲು ತುಂಬಾ ಕಷ್ಟ ಆಗುತ್ತಿದೆ. ಹೆಚ್ಚುವರಿಯಾಗಿ ತಿಂಗಳಿಗೆ 15 ಕೋಟಿ ರೂ. ಹಣ ಬೇಕಾಗುತ್ತದೆ. ವರ್ಷಕ್ಕೆ ಬರೋಬ್ಬರಿ 190 ರಿಂದ 200 ಕೋಟಿಯಷ್ಟು ಹೆಚ್ಚುವರಿ ಹೊರೆ ಆಗುತ್ತದೆ. ಟೈರ್ ಟ್ಯೂಬ್ ಗಳ ದರ ವಿಪರೀತವಾಗಿ ಹೆಚ್ಚಾಗಿದೆ. ದರ ಹೆಚ್ಚಳ ಮಾಡದಿದ್ದರೆ ನಿಗಮಗಳು ಉಳಿಯುವುದಿಲ್ಲ ಎಂದು ಸಾರಿಗೆ ನಿಗಮಗಳು ಸರ್ಕಾರಕ್ಕೆ ಮನವಿ ಮಾಡಿವೆ.

ಇದನ್ನೂ ಓದಿ: ವಯನಾಡು ಗುಡ್ಡ ಕುಸಿತದಲ್ಲಿ ಚಾಮರಾಜನಗರ ಮೂಲದ ಇಬ್ಬರು ಸಾವು, ಮತ್ತಿಬ್ಬರು ನಾಪತ್ತೆ

ಮತ್ತೊಂದೆಡೆ, ಪ್ರಯಾಣಿಕರು ಮಾತ್ರ ದರ ಏರಿಕೆ ಮಾಡಬೇಡಿ. ಈಗಾಗಲೇ ಎಲ್ಲದರ ದರ ಏರಿಕೆ ಆಗಿದೆ ಎಂದು ಮನವಿ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ