ಬೆಂಗಳೂರು: ಕನ್ನಡ ಬಾವುಟ (Kannada Flag) ಹಾರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪ ಸಂಬಂಧ ಸ್ಥಳಕ್ಕೆ ಆಗಮಿಸಿದ ಕನ್ನಡಪರ ಸಂಘಟನೆ ಕಾರ್ಯಕರ್ತರು ವ್ಯಕ್ತಿಗೆ ಮಸಿ ಬಳಿದು ಎಳೆದಾಡಿದ ಘಟನೆ ನಗರದ ಚಿಕ್ಕಪೇಟೆ ಸರ್ಕಲ್‌ನಲ್ಲಿ (Chikkapete Circle) ನಡೆದಿದೆ. ಚಿಕ್ಕಪೇಟೆ ಸರ್ಕಲ್‌ನಲ್ಲಿ ಕನ್ನಡಪರ ಸಂಘಟನೆಯೊಂದು ಬಾವುಟ ಹಾರಿಸಿದೆ. ಈ ವೇಳೆ ಸ್ಥಳಕ್ಕೆ ಬಂದ ಆರ್ಟಿಐ ಕಾರ್ಯಕರ್ತ ಗಾಂಧಿ ಎಂಬವವರು ಬಾವುಟ ಏಕೆ ಹಾರಿಸಿದ್ದೀರೆಂದು ಆಕ್ಷೇಪಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಮಸಿ ಬೆಳೆಯುವಲ್ಲಿಯವರೆಗೆ ಹೋಗಿದ್ದು, ಸದ್ಯ ಪ್ರಕರಣ ಠಾಣೆ ಮೆಟ್ಟಿಲೇರಿದೆ.
ಸರ್ಕಲ್‌ನಲ್ಲಿ ಬಾವುಟ ಹಾರಿಸಬಾರದು ಎಂದು ಕಿರಿಕ್ ತಗೆದ ಗಾಂಧಿ ಜೊತೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಗಾಂಧಿ ಮತ್ತು ಕಾರ್ಯಕರ್ತರ ನಡುವೆ ಜಗಳ ನಡೆದಿದ್ದು, ಮಾತಿಗೆ ಮಾತು ಬೆಳೆದು ಕಾರ್ಯಕರ್ತರೊಬ್ಬರು ಗಾಂಧಿಗೆ ಮಸಿ ಬಳಿದಿದ್ದಾರೆ. ಬಳಿಕ ಗಾಂಧಿಯನ್ನು ಎಳೆದಾಡಿದ್ದಾರೆ. ಘಟನೆ ಬಗ್ಗೆ ಗಾಂಧಿ, ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಹಾವು ಹಿಡಿಯಲು ಹೋಗುತ್ತಿದ್ದ ಉರಗ ರಕ್ಷಕ ಮೋಯಿನ್ ಪಾಲಿಗೆ ವಿಧಿಯಾಗಿ ಬಂದ ಶಾಲಾ ಬಸ್
ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್ ಬಳಿ ಸಂಭವಿಸಿದ ಕಾಡ್ಗಿಚ್ಚು ನಂದಿಸಲು ಹೋಗಿದ್ದ ನಾಲ್ವರು ಅರಣ್ಯ ಸಿಬ್ಬಂದಿಗೆ ಗಾಯಗಳಾದ ಘಟನೆ ಇಂದು ನಡೆದಿದ್ದು, ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗ್ರಾಮಸ್ಥರು ಗಾಯಾಳುಗಳನ್ನು ಅರಣ್ಯದಿಂದ 5 ಕಿ.ಮೀ ಹೊತ್ತುತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಿಆರ್‌ಎಫ್‌ಒ ಮಂಜುನಾಥ್, ಫಾರೆಸ್ಟರ್ ಸುಂದರೇಶ್‌ಗೆ ಗಂಭೀರ ಗಾಯಗಳಾಗಿದ್ದು, ಆರ್‌ಆರ್‌ಟಿ ಸಿಬ್ಬಂದಿಯಾದ ತುಂಗೇಶ್ ಹಾಗೂ ಮಹೇಶ್‌ಗೂ ಗಾಯಗಳಾಗಿವೆ. ಸದ್ಯ ನಾಲ್ವರಿಗೆ ಸಕಲೇಶಪುರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಡುಮನೆ ಗ್ರಾಮದ ಮಣಿಬೀಡು ದೇವಸ್ಥಾನದ ಸಮೀಪ ಕಾಡ್ಗಿಚ್ಚು ಸಂಭವಿಸಿದ್ದು, ಅರಣ್ಯಕ್ಕೆ ಹೊತ್ತಿದ್ದ ಬೆಂಕಿಯನ್ನು ನಂದಿಸಲು ತೆರಳಿದ್ದಾಗ ಅವಘಡ ಸಂಭವಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:40 pm, Thu, 16 February 23