ಕಾಂಗ್ರೆಸ್​​​ ಸಭಾತ್ಯಾಗದ ನಡುವೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ತಿದ್ದುಪಡಿ ಬಿಲ್​ ಪಾಸ್

| Updated By: ಆಯೇಷಾ ಬಾನು

Updated on: Sep 21, 2022 | 3:19 PM

ಗೃಹ ಸಚಿವ ಆರಗ ಜ್ಞಾನೇಂದ್ರ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ​ ಮಂಡಿಸಿದ್ರು. ಕಾಂಗ್ರೆಸ್​​​ ಸಭಾತ್ಯಾಗದ ನಡುವೆಯೇ ಪರಿಷತ್​​ನಲ್ಲಿ ತಿದ್ದುಪಡಿಯೊಂದಿಗೆ ಮಸೂದೆ ಅಂಗೀಕರಿಸಲಾಗಿದೆ.

ಕಾಂಗ್ರೆಸ್​​​ ಸಭಾತ್ಯಾಗದ ನಡುವೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ತಿದ್ದುಪಡಿ ಬಿಲ್​ ಪಾಸ್
ಆರಗ ಜ್ಞಾನೇಂದ್ರ, ಗೃಹ ಸಚಿವರು
Follow us on

ಬೆಂಗಳೂರು: ವಿಧಾನಸಭೆಯಲ್ಲಿ ಮತಾಂತರ ನಿಷೇಧ ತಿದ್ದುಪಡಿ ಬಿಲ್​(Anti Conversion Bill) ಪಾಸ್ ಮಾಡಲಾಗಿದೆ. ಕಾಂಗ್ರೆಸ್​​​ ಸಭಾತ್ಯಾಗದ ನಡುವೆಯೇ ಪರಿಷತ್​​ನಲ್ಲಿ ತಿದ್ದುಪಡಿಯೊಂದಿಗೆ ಮಸೂದೆ ಅಂಗೀಕರಿಸಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಮತಾಂತರ ನಿಷೇಧ ತಿದ್ದುಪಡಿ ವಿಧೇಯಕ​ ಮಂಡಿಸಿದ್ರು.

ಇನ್ನು ಇಂದು ವಿಧಾನಸಭೆಯಲ್ಲಿ ಮತಾಂತರ ನಿಷೇಧ ತಿದ್ದುಪಡಿ ಬಿಲ್ ಸಂಬಂಧ ಚರ್ಚೆ ನಡೆಯುತ್ತಿದ್ದ ವೇಳೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಆಕ್ಷೇಪ ವ್ಯಕ್ತಪಡಿಸಿದರು. ಇದು ಸಂವಿಧಾನ ವಿರೋಧಿ ಮಸೂದೆ, ದುರುದ್ದೇಶದಿಂದ ಕೂಡಿದೆ. ಕಾನೂನಾತ್ಮಕವಾಗಿ ಹೋರಾಡಿದರೆ ಮಸೂದೆಗೆ ತಡೆ ಸಿಗಲಿದೆ ಎಂದರು. ತಜ್ಞರ ಜೊತೆ ಚರ್ಚಿಸಿ ವಿಧೇಯಕ ತರಲಾಗಿದೆ. ಮತಾಂತರ ವೇಳೆ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ದೂರು ಕೊಟ್ಟ ತಕ್ಷಣ ಶಿಕ್ಷೆ ಆಗಲ್ಲ ಎಂದು ಆರಗ ಜ್ಞಾನೇಂದ್ರ ಅವರು ಯು.ಟಿ.ಖಾದರ್​ಗೆ ಪ್ರತಿಕ್ರಿಯಿಸಿದರು. ಈ ವೇಳೆ ಕಾಂಗ್ರೆಸ್ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ್ರು. ಸಭಾತ್ಯಾಗದ ನಡುವೆಯೇ ವಿಧಾನಸಭೆಯಲ್ಲಿ ಬಿಲ್​ ಪಾಸ್​​ ಮಾಡಲಾಗಿದೆ. ಇದನ್ನೂ ಓದಿ: ಆಡಳಿತ ನಡೆಸೋದು ಅಂದ್ರೆ ಸದನದಲ್ಲಿ ಉತ್ತರ ಹೇಳೋದಷ್ಟೇ ಅಲ್ಲ, ಕೆಲಸ ಮಾಡಿ ತೋರಿಸಿ: ಸಚಿವರಿಗೆ ತಿವಿದ ಸ್ಪೀಕರ್ ಕಾಗೇರಿ

ಕೆಲ ದಿನಗಳ ಹಿಂದೆ ವಿಧಾನ ಪರಿಷತ್​ನಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ (ಮತಾಂತರ ನಿಷೇಧ ಕಾಯ್ದೆ) ಮಂಡನೆ ಮಾಡಲಾಗಿತ್ತು. ಗೃಹ ಸಚಿವ ಆರಗ ಜ್ಞಾನೇಂದ್ರ ಮತಾಂತರ ನಿಷೇಧ ವಿಧೇಯಕ ಮಂಡಿಸಿದ್ದರು. ಇದು ಬಹಳ ಮಹತ್ವದ ಕಾಯ್ದೆಯನ್ನ ಸರ್ಕಾರ ತಂದಿದೆ. 2013 ರಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗಲು ಇದರ ಬಗ್ಗೆ ಚಿಂತನೆ ನಡೆಸಿತ್ತು. ಎಲ್ಲರಿಗೂ ಅವರವರ ಧಾರ್ಮಿಕ ಹಕ್ಕಿನಲ್ಲಿ ಬದುಕುವ ಅವಕಾಶ ವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಲವಂತದಿಂದ, ಆಮೀಷದ ಮತಾಂತರ ನಡೆಯುತ್ತಿದೆ. ನಮ್ಮ ಶಾಸಕರೇ ಕಳೆದ ಬಾರಿ ವಿಧಾನ ಸಭೆಯಲ್ಲಿ ಹೇಳಿದ್ರು ನನ್ನ ತಾಯಿಯನ್ನೆ ಮತಾಂತರ ಮಾಡಲಾಗಿದೆ ಎಂದು ಹೇಳಿದ್ರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಇಂದು ವಿಧಾನಸಭೆಯಲ್ಲಿ ಮತಾಂತರ ನಿಷೇಧ ತಿದ್ದುಪಡಿ ಬಿಲ್ ಮಂಡಿಸಲಾಗಿದೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:12 pm, Wed, 21 September 22