ಆಸ್ತಿ ವಿಚಾರಕ್ಕೆ ದಾಯಾದಿಗಳ ಕಲಹ: ಲಾಂಗ್ ಹಿಡಿದು ಬೆದರಿಕೆ, ಪ್ರತ್ಯೇಕ ಎಫ್​ಐಆರ್ ದಾಖಲಿಸಿ ತನಿಖೆ

| Updated By: ಆಯೇಷಾ ಬಾನು

Updated on: Jul 27, 2023 | 8:48 AM

Bengaluru News: ಬೆಂಗಳೂರಿನ ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುಕ್ತಿ ನಗರದಲ್ಲಿ ಆಸ್ತಿ ವಿಚಾರಕ್ಕೆ ದಾಯಾದಿಗಳ ಕಲಹ. ಎರಡೂ ಕುಟುಂಬಗಳು ದೂರು-ಪ್ರತಿದೂರು ದಾಖಲಿಸಿದ್ದು ಪ್ರತ್ಯೇಕ ಎಫ್​ಐಆರ್ ದಾಖಲಿಸಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಆಸ್ತಿ ವಿಚಾರಕ್ಕೆ ದಾಯಾದಿಗಳ ಕಲಹ: ಲಾಂಗ್ ಹಿಡಿದು ಬೆದರಿಕೆ, ಪ್ರತ್ಯೇಕ ಎಫ್​ಐಆರ್ ದಾಖಲಿಸಿ ತನಿಖೆ
ಸಿಸಿಟಿವಿಯಲ್ಲಿ ಸೆರೆಯಾದ ಗಲಾಟೆ ದೃಶ್ಯ
Follow us on

ಬೆಂಗಳೂರು, ಜುಲೈ 27: ಹೆಣ್ಣು, ಮಣ್ಣು, ಹೊನ್ನಿಗಾಗಿ ಜಗಳ, ಸಾವು-ನೋವುಗಳು ಸಂಭವಿಸುತ್ತಲೇ ಇರುತ್ತವೆ. ಅದೇ ರೀತಿ ಬೆಂಗಳೂರಿನಲ್ಲಿ ಆಸ್ತಿ ವಿಚಾರಕ್ಕೆ ದಾಯಾದಿಗಳ ನಡುವೆ ಕಲಹವಾಗಿದ್ದು ಲಾಂಗು ಝಳಪಿಸಿದೆ(Property Dispute). ಎರಡೂ ಕುಟುಂಬಗಳು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಿವೆ. ಕೆ.ಜಿ. ಹಳ್ಳಿ ಪೊಲೀಸ್ ಠಾಣೆ(KG Halli Police Station) ವ್ಯಾಪ್ತಿಯ ಮುಕ್ತಿ ನಗರದಲ್ಲಿ ಕಳೆದ ಎರಡು ದಿನದ ಹಿಂದೆ ನಡೆದಿರುವ ಘಟನೆ ಈಗ ಬೆಳಕಿಗೆ ಬಂದಿದೆ. ಸದ್ಯ ಪೊಲೀಸದರು ಪ್ರತ್ಯೇಕ ಎಫ್​ಐಆರ್​ ದಾಖಲಿಸಿ ತನಿಖೆಗೆ ಇಳಿದಿದ್ದಾರೆ.

ಒಂದೇ ಏರಿಯಾದ ಅಕ್ಕಪಕ್ಕದಲ್ಲಿ ವಾಸವಾಗಿರುವ ಮುನಿ ಆಂಜಿನಪ್ಪ ಹಾಗೂ ಬಡಿಗಪ್ಪ ಕುಟುಂಬದ ನಡುವೆ ಆಸ್ತಿಗಾಗಿ ಜಗಳವಾಗಿದ್ದು ಎರಡೂ ಕುಟುಂಬಗಳು ಪರಸ್ಪರ ಹಲ್ಲೆ ಮಾಡಿಕೊಂಡಿವೆ. ಹಾಗೂ ಪೊಲೀಸ್ ಠಾಣೆಯಲ್ಲಿ ಒಬ್ಬರ ಕುಟುಂಬದವರ ಮೇಲೆ ಮತ್ತೊಬ್ಬರ ಕುಟುಂಬಗಳ ಹಲ್ಲೆ ಮಾಡಿದ್ದಾಗಿ ದೂರು ಪ್ರತಿದೂರು ದಾಖಲಿಸಿವೆ. ಎರಡೂ ಕುಟುಂಬಗಳ ನಡುವಿನ ಜಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದಿತ್ಯ ಎಂಬಾತ ಲಾಂಗ್ ಹಿಡಿದು ಬಂದು ಧಮ್ಕಿ ಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ಎರಡು ದೂರುಗಳ ಹಿನ್ನಲೆ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್​ಐಆರ್​ಗಳು ದಾಖಲಾಗಿವೆ. ಎಫ್​ಐಆರ್​ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಇಳಿದಿದ್ದಾರೆ.

ಇದನ್ನೂ ಓದಿ: Kalaburagi News: ಜಾಗಿಂಗ್ ಮಾಡೋ ಸೋಗಿನಲ್ಲಿ ಬಂದು ಚಿನ್ನದಂಗಡಿ ಕಳ್ಳತನ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಶಾರ್ಟ್​ ಸರ್ಕ್ಯೂಟ್​ನಿಂದ 15 ಕುರಿಗಳು, ಎರಡು ಎತ್ತುಗಳು ಸಾವು

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಕರಡಿಗುಡ್ಡ ಗ್ರಾಮದ ಹುಲುಗಪ್ಪ, ಕನಕಪ್ಪ ಎಂಬುವವರಿಗೆ ಸೇರಿದ 15 ಕುರಿಗಳು ಮತ್ತು 2 ಎತ್ತುಗಳು ಮೃತಪಟ್ಟಿವೆ. ಟಿಸಿ ಕಂಬದ ವೈಯರ್​ಗಳು ತುಂಡಾಗಿ ನೆಲಕ್ಕೆ ಬಿದ್ದು ಅವಘಡ ಸಂಭವಿಸಿದೆ. ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜಾಗಿಂಗ್ ಮಾಡೋ ಸೋಗಿನಲ್ಲಿ ಬಂದು ಚಿನ್ನದಂಗಡಿ ಕಳ್ಳತನ

ಕಲಬುರಗಿ ಜಿಲ್ಲೆ ಚಿತ್ತಾಪುರ  ತಾಲೂಕಿನ ವಾಡಿ ಪಟ್ಟಣದಲ್ಲಿ ಜಾಗಿಂಗ್ ಮಾಡುವ ರೀತಿಯಲ್ಲಿ ಬಂದು ಬಂಗಾರದ ಅಂಗಡಿಯಲ್ಲಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ನಿನ್ನೆ (ಜು.26) ನಸುಕಿನ ಜಾವ 3.30 ರ ಸಮಯದಲ್ಲಿ ವಾಯು ವಿಹಾರಿಗಳ ಸೋಗಿನಲ್ಲಿ ಬಂದಿದ್ದ ಇಬ್ಬರು ಖದೀಮರು ಪಟ್ಟಣದ ಸಂತೋಷ್ ಮಾಳಿ ಎಂಬುವವರ ಜ್ಯುವೆಲರ್ ಶಾಪ್​​ಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ