ಪಿಎಸ್ಐ ಅಕ್ರಮದಲ್ಲಿ ಕಿಲಾಡಿ ಜೋಡಿಗಳ ಕಮಾಲ್; ಅಮೃತ್ ಪೌಲ್, ಶಾಂತಕುಮಾರ್ ವಿರುದ್ಧ ಆರೋಪಗಳ ಸುರಿಮಳೆ

| Updated By: ಆಯೇಷಾ ಬಾನು

Updated on: May 04, 2022 | 1:43 PM

ಪಿಎಸ್‌ಐ ನೇಮಕಾತಿಯಲ್ಲಿ ಕಿಲಾಡಿ ಜೋಡಿಗಳಾಗಿರುವ ಅಮೃತ್ ಪೌಲ್ ಮತ್ತು ಶಾಂತಕುಮಾರ್ ಕೋಟಿ ಕೋಟಿ ಹಣ ಪಡೆದು ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಈ ಹಿಂದೆಯು ನೇಮಕಾತಿಯಲ್ಲಿ ಅಕ್ರಮವೆಸಗಿರುವ ಬಗ್ಗೆ ಇದೇ ಜೋಡಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.

ಪಿಎಸ್ಐ ಅಕ್ರಮದಲ್ಲಿ ಕಿಲಾಡಿ ಜೋಡಿಗಳ ಕಮಾಲ್; ಅಮೃತ್ ಪೌಲ್, ಶಾಂತಕುಮಾರ್ ವಿರುದ್ಧ ಆರೋಪಗಳ ಸುರಿಮಳೆ
ಐಪಿಎಸ್ ಅಧಿಕಾರಿ ಅಮೃತ್ ಪೌಲ್
Follow us on

ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ(PSI Recruitment Scam) ವಿಚಾರಕ್ಕೆ ಸಂಬಂಧಿಸಿ ಪಿಎಸ್‌ಐ ನೇಮಕಾತಿಯ ಅಕ್ರಮದ ಹಿಂದೆ ಕಿಲಾಡಿ ಜೋಡಿಗಳ ಕೈವಾಡ ವಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಪಿಎಸ್‌ಐ ನೇಮಕಾತಿಯಲ್ಲಿ ಕಿಲಾಡಿ ಜೋಡಿಗಳಾಗಿರುವ ಅಮೃತ್ ಪೌಲ್ ಮತ್ತು ಶಾಂತಕುಮಾರ್ ಕೋಟಿ ಕೋಟಿ ಹಣ ಪಡೆದು ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಈ ಹಿಂದೆಯು ನೇಮಕಾತಿಯಲ್ಲಿ ಅಕ್ರಮವೆಸಗಿರುವ ಬಗ್ಗೆ ಇದೇ ಜೋಡಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಇದರಿಂದ ಕೋಟಿ ಕೋಟಿ ಹಣ ಗಳಿಸಿರುವ ಆರೋಪ ಕೇಳಿಬಂದಿದೆ. ಡಿವೈಎಸ್‌ಪಿ ಶಾಂತಿಕುಮಾರ್, ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳ ಭೇಟಿ ಮಾಡುತ್ತಿದ್ದರು. ಅಭ್ಯರ್ಥಿಗಳೊಂದಿಗೆ ಡೀಲ್ ಮಾಡಿಕೊಳ್ಳುತ್ತಿದ್ದರು. ಬಳಿಕ ರೇಟ್ ಫಿಕ್ಸ್ ಮಾಡುತ್ತಿದ್ದರು.

ಇನ್ನು ಬೆಂಗಳೂರಿನ ಸಿಐಡಿ ಕಚೇರಿಗೆ ಹಿರಿಯ ವಕೀಲ ರಂಗನಾಥ್ ಭೇಟಿ ನೀಡಿದ್ದು ಕೆಳಮಟ್ಟದಲ್ಲಿ ಅಕ್ರಮ ಎಸಗಿದವರನ್ನು ಮಾತ್ರ ವಿಚಾರಣೆ ನಡೆಸಲಾಗ್ತಿದೆ. ಪ್ರಕರಣದಲ್ಲಿ ಪ್ರಭಾವಿಗಳು, ಉನ್ನತ ಅಧಿಕಾರಿಗಳು ಭಾಗಿಯಾಗಿರುವ ಆರೋಪವಿದೆ. ಸಚಿವ ಅಶ್ವತ್ಥ್ ನಾರಾಯಣ ಸಹೋದರನ ವಿರುದ್ಧ ಆರೋಪ ಕೇಳಿ ಬಂದಿದೆ. ರಾಜ್ಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಡಿಜಿ & ಐಜಿಪಿ‌ ಪ್ರವೀಣ್ ಸೂದ್, ಎಡಿಜಿಪಿ ಅಮೃತ್ ಪಾಲ್, ಸಿಐಡಿ SP ರವಿ.ಡಿ ಚನ್ನಣ್ಣನವರ್ ಸೇರಿ ಹಲವರ ವಿರುದ್ಧ ಆರೋಪ ಕೇಳಿ ಬಂದಿದೆ. ಪ್ರಭಾವಿಗಳು, ಉನ್ನತಮಟ್ಟದವರಿಗೆ ಯಾವುದೇ ನೋಟಿಸ್ ನೀಡಿಲ್ಲ. ಉನ್ನತಮಟ್ಟದವರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲು ಸಿಐಡಿ ಡಿಜಿಪಿಗೆ ಹಿರಿಯ ವಕೀಲ ರಂಗನಾಥ್ ನೇತೃತ್ವದ ತಂಡ ಮನವಿ ಮಾಡಿದೆ. ಅಲ್ಲದೆ ಪಿಎಸ್​ಐ ಅಭ್ಯರ್ಥಿಗಳಿಂದ 50 ರಿಂದ 70 ಲಕ್ಷ ಹಣ ಪಡೆದಿದ್ದಾರೆ. ಸುಮಾರು 63 ಅಭ್ಯರ್ಥಿಗಳಿಂದ ಬ್ರೋಕರ್ ಮೂಲಕ ಹಣ ಪಡೆದಿದ್ದಾರೆ ಎಂದು ಮಾಜಿ ಸಿಎಂ ಪುತ್ರನ ವಿರುದ್ಧ ವಕೀಲ ರಂಗನಾಥ್ ಆರೋಪ ಮಾಡಿದ್ದು ಮಾಜಿ ಸಿಎಂ ಪುತ್ರನಿಗೆ ನೋಟಿಸ್ ನೀಡಿ ತನಿಖೆ ಮಾಡುಬೇಕು ಎಂದು ADGP-CIDಗೆ ದೂರು ನೀಡಿದ್ದಾರೆ.

ಪಿಎಸ್​ಐ ಅಕ್ರಮದ ಬಗ್ಗೆ ಇನ್ನಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಈ ಅಕ್ರಮದಲ್ಲಿ ಮತ್ತಷ್ಟು ಸಬ್ ಇನ್ಸಪೆಕ್ಟರ್ಗಳು ಹೆಸರು ಬರೋ ಸಾಧ್ಯತೆ ಇದೆ. KSIFS ಸಬ್ ಇನ್ಸಪೆಕ್ಟರ್ ಗಳ ಮೇಲೆ ಸಿಐಡಿ ಕಣ್ಣಿಟ್ಟಿದೆ. ನಿನ್ನೆ ಕಲಬುರಗಿಯ ನಾಗನಹಳ್ಳಿ ತರಬೇತಿ ಕೇಂದ್ರದಿಂದ ಯಶವಂತಗೌಡನನ್ನ ಸಿಐಡಿ ವಶಕ್ಕೆ‌ ಪಡೆದಿತ್ತು. ಯಶವಂತಗೌಡನನ್ನ ವಶಕ್ಕೆ ಪಡೆದು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಈ ಹಿಂದೆ ಆಯ್ಕೆಯಾಗಿ ನಾಗನಹಳ್ಳಿ ತರಬೇತಿ ಕೇಂದ್ರದಲ್ಲಿ ಟ್ರೈನಿಂಗ್ ಪಡೆಯುತ್ತಿರೋ ಕೆಲ KSIFS ಸಬ್ ಇನ್ಸಪೆಕ್ಟರ್ಗಳು, ಸಿವಿಲ್ ಪಿಎಸ್ಐ ಎಕ್ಸಾಮ್ ನಲ್ಲಿ ಕೂಡಾ ಪಾಸ್ ಆಗಿರೋ ಅಭ್ಯರ್ಥಿಗಳು ಸೇರಿದಂತೆ ಅನೇಕರ ವಿಚಾರಣೆ ನಡೆಸಲಾಗುತ್ತಿದೆ.

RSS ಶಾಖೆಯವರನ್ನು PSI ಮಾಡುವ ಅನುಮಾನ ಮೂಡಿದೆ
ಸಹಾಯಕ ಪ್ರಾಧ್ಯಾಪಕ, PSI ನೇಮಕಾತಿ ಅಕ್ರಮ ಪ್ರಕರಣ ಸಂಬಂಧ RSS ಶಾಖೆಯವರನ್ನು PSI ಮಾಡುವ ಅನುಮಾನ ಮೂಡಿದೆ ಎಂದು ಸರ್ಕಾರದ ವಿರುದ್ಧ ಹಿರಿಯ ವಕೀಲ ಬಾಲನ್ ಆರೋಪ ಮಾಡಿದ್ದಾರೆ. ಖಾಸಗಿ ಕೇಂದ್ರಗಳಲ್ಲಿ ಪರೀಕ್ಷೆ ಹೇಗೆ ನಡೆಸಿದರು? OMR ಶೀಟ್ ಹೇಗೆ​ ಬದಲಾವಣೆ ಆಯ್ತು? ಬ್ಲೂ ಟೂತ್ ಹೇಗೆ ಬಂತು ಎಂದು ವಕೀಲ ಬಾಲನ್ ಪ್ರಶ್ನೆ ಮಾಡಿದ್ದಾರೆ. ಗೃಹ ಮಂತ್ರಿ ಮೇಲೆ ಮೊದಲು ಎಫ್​ಐಆರ್ ಹಾಕಬೇಕು. ಇದೊಂದು ಡೋಂಗಿ ಸರ್ಕಾರ, ಇದು ದೇಶದ್ರೋಹ. ಬುಲ್ಡೋಜರ್ ಮಾದರಿ ಜಾರಿ ಮಾಡುತ್ತೇವೆ ಅಂತಾರೆ. ಹಾಗಾದರೆ ಗೃಹ ಮಂತ್ರಿ, ಎಡಿಜಿಪಿ​ ಪಾಲ್ ಮನೆಗೆ ಬುಲ್ಡೋಜರ್ ಕಳಿಸ್ತೀರಾ? ಹೈಕೋರ್ಟ್ ಜಡ್ಜ್​​ ನೇತೃತ್ವದಲ್ಲಿ ಎಸ್​ಐಟಿ ರಚಿಸಿ ತನಿಖೆ ನಡೆಸಿ ಎಂದು ಬೆಂಗಳೂರಲ್ಲಿ ಸರ್ಕಾರಕ್ಕೆ ವಕೀಲ ಬಾಲನ್ ಆಗ್ರಹಿಸಿದ್ದಾರೆ.

Published On - 1:05 pm, Wed, 4 May 22