AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI Recruitment Scam: ಮಾಜಿ ಎಡಿಜಿಪಿ ಅಮೃತ್ ಪೌಲ್ ವಿರುದ್ದ ಸಿಐಡಿ ಅಧಿಕಾರಿಗಳಿಂದ ಚಾರ್ಜ್ ಶೀಟ್ ಸಲ್ಲಿಕೆ

545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಎಡಿಜಿಪಿ ಅಮೃತ್ ಪೌಲ್ ವಿರುದ್ದ ಸಿಐಡಿ ಅಧಿಕಾರಿಗಳು ಹೆಚ್ಚುವರಿ ಚಾರ್ಜ್ ಶೀಟ್​ನ್ನು 1 ನೇ ಎಸಿಎಂಎಂ ಕೋರ್ಟ್​​ಗೆ ಸಲ್ಲಿಸಿದ್ದಾರೆ.

PSI Recruitment Scam: ಮಾಜಿ ಎಡಿಜಿಪಿ ಅಮೃತ್ ಪೌಲ್ ವಿರುದ್ದ ಸಿಐಡಿ ಅಧಿಕಾರಿಗಳಿಂದ ಚಾರ್ಜ್ ಶೀಟ್ ಸಲ್ಲಿಕೆ
ಮಾಜಿ ಎಡಿಜಿಪಿ ಅಮೃತ ಪೌಲ್
TV9 Web
| Edited By: |

Updated on:Sep 28, 2022 | 8:56 PM

Share

ಬೆಂಗಳೂರು: 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ (PSI Recruitment Scam) ಬಂಧಿತರಾಗಿರುವ ಮಾಜಿ ಎಡಿಜಿಪಿ ಅಮೃತ್ ಪೌಲ್ ವಿರುದ್ದ ಸಿಐಡಿ ಅಧಿಕಾರಿಗಳು ಹೆಚ್ಚುವರಿ ಚಾರ್ಜ್ ಶೀಟ್​ನ್ನು 1 ನೇ ಎಸಿಎಂಎಂ ಕೋರ್ಟ್​​ಗೆ ಸಲ್ಲಿಸಿದ್ದಾರೆ. ತನಿಖಾಧಿಕಾರಿ ಡಿವೈಎಸ್ಪಿ ಬಿ.ಕೆ.ಶೇಖರ್ 1406 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ್ದು, 78 ದಾಖಲೆಗಳು, 38 ಸಾಕ್ಷಿಗಳ ಉಲ್ಲೇಖಿಸಲಾಗಿದೆ.

ಪಿಎಸ್​ಐ ಅಕ್ರಮ ಪರೀಕ್ಷಾ ನೇಮಕಾತಿ ಪ್ರಕರಣ: ಎಡಿಜಿಪಿ ಅಮೃತ್ ಪೌಲ್ ಮಾಡಿದ್ದ ಆಸ್ತಿ ಎಷ್ಟು ಗೊತ್ತಾ?

ಬೆಂಗಳೂರು: ಪಿಎಸ್​ಐ ಅಕ್ರಮ ಪರೀಕ್ಷಾ ನೇಮಕಾತಿ ಪ್ರಕರಣ ಹಿನ್ನೆಲೆ ಎಡಿಜಿಪಿ ಅಮೃತ್ ಪೌಲ್ ಮಾಡಿದ್ದ ಆಸ್ತಿ ಎಷ್ಟು ಎನ್ನುವ ಅನುಮಾನ ಉಂಟಾಗಿದೆ. ಅಕ್ರಮವಾಗಿ ಗಳಿಸಿದ್ದ ಹಣದಲ್ಲಿ ಕೋಟಿಗಟ್ಟಲೇ ಪ್ರಾಪರ್ಟಿ ಪರ್ಚೇಸ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪಾಲ್ ಹೆಸರಿಗೆ ಪ್ರಾಪರ್ಟಿ ನೋಂದಣಿ ಮಾಡಿಸದೆ ತನ್ನ ತಂದೆ ಹೆಸರಲ್ಲಿ ಎಕರೆಗಟ್ಟಲೆ ಜಮೀನು ಖರೀದಿ ಮಾಡಿದ್ದು, ತಂದೆ ನೇತಾರಾಮ್ ಬನ್ಸಾಲ್ ಹೆಸರಲ್ಲೇ ಎಲ್ಲಾ ಆಸ್ತಿಯನ್ನ ಪಾಲ್ ಮಾಡಿದ್ದ ಎನ್ನಲಾಗುತ್ತಿದೆ.

ಅಮೃತ್ ಪಾಲ್ ಆಸ್ತಿ ಎಲ್ಲೆಲ್ಲಿದೆ.?

ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿಯ ಹೊಸಹುಡ್ಯಾ ಗ್ರಾಮದಲ್ಲಿ ಸರ್ವೆ ನಂಬರ್ 247 ರಲ್ಲಿರೋ ಫಾರ್ಮೌಸ್ 4 ಎಕರೆಯಷ್ಟು ಜಾಗದಲ್ಲಿ ಫಾರಂ ಹೌಸ್. ಈ ಫಾರ್ಮೌಸ್ ಪೌಲ್ ತನ್ನ ತಂದೆ ನೇತಾರಾಮ್ ಬನ್ಸಾಲ್ ಹೆಸರಲ್ಲಿ ಜಮೀನನ್ನ ನೋಂದಣಿ ಮಾಡಲಾಗಿದೆ. ಫಾರಾಂ ಹೌಸ್​ನ ಆಸುಪಾಸಿನ 8 ಎಕರೆ ಜಮೀನನ್ನ ಕೂಡ ಪೌಲ್ ಇತ್ತೀಚಿಗೆ ಪರ್ಚೇಸ್ ಮಾಡಿದ್ದಾರಂತೆ. ಚಿಕ್ಕಬಳ್ಳಾಪುರ ತಾಲೂಕಿನ ಶಿಡ್ಲಘಟ್ಟ ನೆಲಪ್ಪನಹಳ್ಳಿ ಬಳಿ 8 ಎಕರೆ 29 ಗುಂಟೆ ಜಮೀನು ತಂದೆ ನೇತಾರಾಮ್ ಹೆಸರಲ್ಲಿ ರಿಜಿಸ್ಟರ್ ಮಾಡಿಸಲಾಗಿದೆ. ಅದೇ ರೀತಿ ನೆಲಪ್ಪನಹಳ್ಳಿ ಸರ್ವೆ ನಂಬರ್ 49 ರಲ್ಲಿ 4 ಎಕರೆ 39 ಗುಂಟೆ ಜಾಗ, ನೆಲಪ್ಪನಹಳ್ಳಿಯಲ್ಲೇ 3 ಎಕರೆ 30 ಗುಂಟೆ ಜಾಗ ಪಾಲ್ ತಂದೆ ಹೆಸರಲ್ಲಿ ರಿಜಿಸ್ಟರ್ ಮಾಡಲಾಗಿದೆ. ಇತ್ತೀಚಿಗೆ ಪರ್ಚೇಸ್ ಮಾಡಿದ್ದ ಜಾಗವನ್ನ ಜಾತವಾರ ಗ್ರಾಮದ ಜಗದೀಶ ಎಂಬವರ ಮಧ್ಯಸ್ಥಿಕೆಯಲ್ಲಿ ಪಾಲ್ ಕೊಂಡುಕೊಂಡಿದ್ದರಂತೆ. ಇದೀಗ ಅಮೃತ್ ಪಾಲ್​ರ ಎಲ್ಲಾ ಆಸ್ತಿ ಪಾಸ್ತಿಯ ವಿವರಗಳನ್ನ ಸಿಐಡಿ ಟೀಂ ಕಲೆ ಹಾಕುತ್ತಿದೆ. ಚಾರ್ಜ್ ಶೀಟ್​ನಲ್ಲೂ ಅಕ್ರಮ ಆಸ್ತಿಯ ಶಂಕೆ ಹಿನ್ನಲೆ ವಿವರಗಳನ್ನ ದಾಖಲಿಸಲು ಸಿಐಡಿ ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:50 pm, Wed, 28 September 22

Follow Us
Web contact
Web contact

TV9 Kannada

Read More
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್