ಬೆಂಗಳೂರು: 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ (PSI Recruitment Scam) ಬಂಧಿತರಾಗಿರುವ ಮಾಜಿ ಎಡಿಜಿಪಿ ಅಮೃತ್ ಪೌಲ್ ವಿರುದ್ದ ಸಿಐಡಿ ಅಧಿಕಾರಿಗಳು ಹೆಚ್ಚುವರಿ ಚಾರ್ಜ್ ಶೀಟ್ನ್ನು 1 ನೇ ಎಸಿಎಂಎಂ ಕೋರ್ಟ್ಗೆ ಸಲ್ಲಿಸಿದ್ದಾರೆ. ತನಿಖಾಧಿಕಾರಿ ಡಿವೈಎಸ್ಪಿ ಬಿ.ಕೆ.ಶೇಖರ್ 1406 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ್ದು, 78 ದಾಖಲೆಗಳು, 38 ಸಾಕ್ಷಿಗಳ ಉಲ್ಲೇಖಿಸಲಾಗಿದೆ.
ಪಿಎಸ್ಐ ಅಕ್ರಮ ಪರೀಕ್ಷಾ ನೇಮಕಾತಿ ಪ್ರಕರಣ: ಎಡಿಜಿಪಿ ಅಮೃತ್ ಪೌಲ್ ಮಾಡಿದ್ದ ಆಸ್ತಿ ಎಷ್ಟು ಗೊತ್ತಾ?
ಬೆಂಗಳೂರು: ಪಿಎಸ್ಐ ಅಕ್ರಮ ಪರೀಕ್ಷಾ ನೇಮಕಾತಿ ಪ್ರಕರಣ ಹಿನ್ನೆಲೆ ಎಡಿಜಿಪಿ ಅಮೃತ್ ಪೌಲ್ ಮಾಡಿದ್ದ ಆಸ್ತಿ ಎಷ್ಟು ಎನ್ನುವ ಅನುಮಾನ ಉಂಟಾಗಿದೆ. ಅಕ್ರಮವಾಗಿ ಗಳಿಸಿದ್ದ ಹಣದಲ್ಲಿ ಕೋಟಿಗಟ್ಟಲೇ ಪ್ರಾಪರ್ಟಿ ಪರ್ಚೇಸ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪಾಲ್ ಹೆಸರಿಗೆ ಪ್ರಾಪರ್ಟಿ ನೋಂದಣಿ ಮಾಡಿಸದೆ ತನ್ನ ತಂದೆ ಹೆಸರಲ್ಲಿ ಎಕರೆಗಟ್ಟಲೆ ಜಮೀನು ಖರೀದಿ ಮಾಡಿದ್ದು, ತಂದೆ ನೇತಾರಾಮ್ ಬನ್ಸಾಲ್ ಹೆಸರಲ್ಲೇ ಎಲ್ಲಾ ಆಸ್ತಿಯನ್ನ ಪಾಲ್ ಮಾಡಿದ್ದ ಎನ್ನಲಾಗುತ್ತಿದೆ.
ಅಮೃತ್ ಪಾಲ್ ಆಸ್ತಿ ಎಲ್ಲೆಲ್ಲಿದೆ.?
ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿಯ ಹೊಸಹುಡ್ಯಾ ಗ್ರಾಮದಲ್ಲಿ ಸರ್ವೆ ನಂಬರ್ 247 ರಲ್ಲಿರೋ ಫಾರ್ಮೌಸ್ 4 ಎಕರೆಯಷ್ಟು ಜಾಗದಲ್ಲಿ ಫಾರಂ ಹೌಸ್. ಈ ಫಾರ್ಮೌಸ್ ಪೌಲ್ ತನ್ನ ತಂದೆ ನೇತಾರಾಮ್ ಬನ್ಸಾಲ್ ಹೆಸರಲ್ಲಿ ಜಮೀನನ್ನ ನೋಂದಣಿ ಮಾಡಲಾಗಿದೆ. ಫಾರಾಂ ಹೌಸ್ನ ಆಸುಪಾಸಿನ 8 ಎಕರೆ ಜಮೀನನ್ನ ಕೂಡ ಪೌಲ್ ಇತ್ತೀಚಿಗೆ ಪರ್ಚೇಸ್ ಮಾಡಿದ್ದಾರಂತೆ. ಚಿಕ್ಕಬಳ್ಳಾಪುರ ತಾಲೂಕಿನ ಶಿಡ್ಲಘಟ್ಟ ನೆಲಪ್ಪನಹಳ್ಳಿ ಬಳಿ 8 ಎಕರೆ 29 ಗುಂಟೆ ಜಮೀನು ತಂದೆ ನೇತಾರಾಮ್ ಹೆಸರಲ್ಲಿ ರಿಜಿಸ್ಟರ್ ಮಾಡಿಸಲಾಗಿದೆ. ಅದೇ ರೀತಿ ನೆಲಪ್ಪನಹಳ್ಳಿ ಸರ್ವೆ ನಂಬರ್ 49 ರಲ್ಲಿ 4 ಎಕರೆ 39 ಗುಂಟೆ ಜಾಗ, ನೆಲಪ್ಪನಹಳ್ಳಿಯಲ್ಲೇ 3 ಎಕರೆ 30 ಗುಂಟೆ ಜಾಗ ಪಾಲ್ ತಂದೆ ಹೆಸರಲ್ಲಿ ರಿಜಿಸ್ಟರ್ ಮಾಡಲಾಗಿದೆ. ಇತ್ತೀಚಿಗೆ ಪರ್ಚೇಸ್ ಮಾಡಿದ್ದ ಜಾಗವನ್ನ ಜಾತವಾರ ಗ್ರಾಮದ ಜಗದೀಶ ಎಂಬವರ ಮಧ್ಯಸ್ಥಿಕೆಯಲ್ಲಿ ಪಾಲ್ ಕೊಂಡುಕೊಂಡಿದ್ದರಂತೆ. ಇದೀಗ ಅಮೃತ್ ಪಾಲ್ರ ಎಲ್ಲಾ ಆಸ್ತಿ ಪಾಸ್ತಿಯ ವಿವರಗಳನ್ನ ಸಿಐಡಿ ಟೀಂ ಕಲೆ ಹಾಕುತ್ತಿದೆ. ಚಾರ್ಜ್ ಶೀಟ್ನಲ್ಲೂ ಅಕ್ರಮ ಆಸ್ತಿಯ ಶಂಕೆ ಹಿನ್ನಲೆ ವಿವರಗಳನ್ನ ದಾಖಲಿಸಲು ಸಿಐಡಿ ಮುಂದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:50 pm, Wed, 28 September 22