ಪೊಲೀಸರಿಂದ ದಲಿತ ಯುವಕನಿಗೆ ಕಿರುಕುಳ‌ ಆರೋಪ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ

ಸತತ 12 ದಿನ ಹಲ್ಲೆ ನಡಸಿದ್ದಾರೆ. ಮೈಮೇಲೆ ಮೂತ್ರ ಎರಚಿ, 3 ದಿನ ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದಾರೆಂದು ರಾಮಮೂರ್ತಿನಗರ ಪೊಲೀಸರ ಮೇಲೆ ಯುವಕ ಆರೋಪ ಮಾಡಿದ್ದಾನೆ.

ಪೊಲೀಸರಿಂದ ದಲಿತ ಯುವಕನಿಗೆ ಕಿರುಕುಳ‌ ಆರೋಪ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ
ಯುವಕ ರಾಜೇಶ್
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 29, 2022 | 8:05 AM

ಬೆಂಗಳೂರು: ದಲಿತ ಯುವಕನಿಗೆ ಪೊಲೀಸರಿಂದ ಕಿರುಕುಳ‌ ಆರೋಪ ಮಾಡಲಾಗಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಗೃಹ ಇಲಾಖೆ, ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆಯಲಾಗಿದೆ. ರಾಜೇಶ್ ಕಿರುಕುಳ ನೀಡುತ್ತಿರುವುದಾಗಿ ಪತ್ರ ಬರೆದಿರುವ ಯುವಕ. ಸತತ 12 ದಿನ ಹಲ್ಲೆ ನಡಸಿದ್ದಾರೆ. ಮೈಮೇಲೆ ಮೂತ್ರ ಎರಚಿ, 3 ದಿನ ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದಾರೆಂದು ರಾಮಮೂರ್ತಿನಗರ ಪೊಲೀಸರ ಮೇಲೆ ಯುವಕ ಆರೋಪ ಮಾಡಿದ್ದಾನೆ. ಅದಕ್ಕೆ ಸಂಬಂಧಪಟ್ಟಂತೆ ಫೋಟೊ ಮತ್ತು ವಿಡಿಯೋ ಕೂಡ ಲಗತ್ತಿಸಿದ್ದಾನೆ. ಕೋಳಿರಾಜ @ಪುಷ್ಪರಾಜ್ ಎಂಬಾತನ ಪ್ರಕರಣ ಒಪ್ಪಿಕೊಳ್ಳುವಂತೆ ಹಲ್ಲೆ ಮಾಡಿದ್ದಾರೆಂಬ ಆರೋಪಿಸಲಾಗಿದೆ. ಆದರೆ ಪೊಲೀಸರು ಮಾತ್ರ ಹೇಳೋದೆ ಬೇರೆ. ರಾಜೇಶ್ ರಾಬರಿಗೆ ಯತ್ನ ಮಾಡಿದ್ದಾನೆ. ಹಾಗಾಗಿ ಪೊಲೀಸರು ಬಂಧಿಸುತ್ತಾರೆಂದು ಸುಳ್ಳು ಆರೋಪ ಮಾಡುತ್ತಿದ್ದಾನೆ. ಈತನಿಗೆ ಮತ್ತೋರ್ವ ವ್ಯಕ್ತಿ ಜಗನ್ ಎಂಬಾತ ಸಹಾಯ ಮಾಡಿದ್ದಾನೆ.

ಆತನ ಮೇಲೆ ಪ್ರಕರಣ ಸಂಬಂಧ 2018ರಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. ಅದೇ ಜಿದ್ದಿಗೆ ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಅದಕ್ಕೆ ಸಂಬಂಧ ಪಟ್ಟಂತೆ ರಾಜೇಶ್ ರಾಬರಿಗೆ ಯತ್ನ ಮಾಡಿದ್ದಾನೆ ಎನ್ನಲಾಗುತ್ತಿರುವ ಸಿಸಿಟಿವಿ ದೃಶ್ಯವಳಿ ಕೂಡ ಬಿಡುಗಡೆ ಮಾಡಿದ್ದಾರೆ.

ಸ್ನೇಹಿತರ ಜೊತೆ ಸ್ವಿಮ್ಮಿಂಗ್ ಪೂಲ್​ಗೆ ಈಜಲು ಹೋಗಿದ್ದ ಯುವಕ ಸಾವು

ಶಿವಮೊಗ್ಗ: ಸ್ನೇಹಿತರ ಜತೆ ಸ್ವಿಮ್ಮಿಂಗ್​ಪೂಲ್​ಗೆ ಈಜಲು ಹೋಗಿದ್ದ ಯುವಕ ಸಾವನ್ನಪ್ಪಿರುವ ಘಟನೆ ಶಕ್ತಿಧಾಮ ಲೇಔಟ್​ ಬಳಿ ಇರುವ ಖಾಸಗಿ ಒಡೆತನದ ಕರ್ಣ ಮೋದಿ ಸ್ವಿಮ್ಮಿಂಗ್ ಪೂಲ್​ನಲ್ಲಿ ನಡೆದಿದೆ. ರಾಕೇಶ್ (18) ಮೃತ ಯುವಕ. ಶಿವಮೊಗ್ಗದ ಜೊಸೆಫ್ ನಗರದ ನಿವಾಸಿ ಕುಮಾರ್ ಎಂಬುವರ ಪುತ್ರನಾಗಿರುವ ರಾಕೇಶ್, ಡಿವಿಎಸ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದನು. ರಾಕೇಶ್ ಇಂದು ಸ್ನೇಹಿತರೊಂದಿಗೆ ಶಿವಮೊಗ್ಗ ಹೊರವಲಯದ ಗಾಡಿಕೊಪ್ಪ ಸಮೀಪದ ಶಕ್ತಿಧಾಮ ಲೇಔಟ್ ಬಳಿ ಇರುವ ಖಾಸಗಿ ಒಡೆತನದ ಕರ್ಣ ಮೋದಿ ಈಜಲು ತೆರಳಿದ್ದಾನೆ. ಆದರೆ ರಾಕೇಶ್​ಗೆ ಈಜಲು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ ಪತಿ

ದಕ್ಷಿಣ ಕನ್ನಡ : ಪತಿ – ಪತ್ನಿ ನಡುವೆ ವಿರಸ ಮೂಡಿದ್ದು, ಪತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ  ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕು ರಾಮನಾಥಪುರ ನಿವಾಸಿ ಸುನೀಲ್ (28) ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುನೀಲ್  ವಿಷ ಕುಡಿಯುವುದನ್ನು ವಿಡಿಯೋ ಮಾಡಿ ಮನೆಯವರಿಗೆ ಕಳುಹಿಸಿದ್ದಾನೆ. ಈ ವಿಡಿಯೋವನ್ನು ಕುಟುಂಬಸ್ಥರು ಧರ್ಮಸ್ಥಳ ಪೊಲೀಸರಿಗೆ ರವಾನಿಸಿದ್ದಾರೆ.  ವೀಡಿಯೋ ನೋಡಿ  ಕೂಡಲೆ ಜಾಗ ಪತ್ತೆಹಚ್ಚಿ ಸುನೀಲ್​ನನ್ನು ರಕ್ಷಿಸಿದ್ದಾರೆ. ತಕ್ಷಣ ಸುನೀಲ್ ನನ್ನು ಉಜರೆಯ ಖಾಸಗಿ ಆಸ್ಪತ್ರೆಗೆ ದಾಳಿಸಿದ್ದಾರೆ. ಸುನೀಲ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮದ್ಯೆ ಮಾರಾಮಾರಿ ಕೇಸ್!

ಯಾದಗಿರಿ: ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮದ್ಯೆ ಮಾರಾಮಾರಿ ನಡೆದಿದ್ದು, ಎರಡು ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಯಾದಗಿರಿ ತಾಲೂಕಿನ ಸಾವೂರು ಗ್ರಾಮದಲ್ಲಿ ಅಡಿಗಲ್ಲು ಸಮಾರಂಭದಲ್ಲಿ ಬ್ಯಾನರ್ ವಿಚಾರಕ್ಕೆ ಘಟನೆ ನಡೆದಿದೆ. ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ ಹಾಗೂ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಸಮ್ಮುಖದಲ್ಲಿ ನಡೆದಿದ್ದ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಜೆಡಿಎಸ್​ನ ಬಂದಪ್ಪಗೌಡ ಹಾಗೂ ಬಿಜೆಪಿಯ ಶಿವರಾಜ್ ಸೇರಿ ಇತರರ ಮೇಲೆ ಕೇಸ್ ಹಾಕಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada