ಬೆಂಗಳೂರು: 545 ಪಿಎಸ್ಐ (PSI Recruitment Scam) ಹುದ್ದೆಗಳಿಗೆ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದ ಬ್ಯಾಡರಹಳ್ಳಿ (Byadarahalli) ಪೊಲೀಸ್ ಠಾಣೆ PSI ಹರೀಶ್ರನ್ನು ಸಿಐಡಿ ಅಧಿಕಾರಿಗಳು (CID Police) ಬಂಧಿಸಿದ್ದಾರೆ. 2018 ರ ಬ್ಯಾಚ್ ನ ಸಬ್ ಇನ್ಸ್ ಪೆಕ್ಟರ್ ಆಗಿದ್ದು, ಕಳೆದ 1 ವರ್ಷದಿಂದ ಬ್ಯಾಡರಹಳ್ಳಿ ಠಾಣೆಯ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. PSI ಹರೀಶ್ರನ್ನು ಸಿಐಡಿ ಅಧಿಕಾರಿಗಳು ಠಾಣೆಯಲ್ಲೇ ಬಂಧಿಸಿ ಕರೆದೊಯ್ದಿದ್ದಾರೆ. ಹರೀಶ ಇತ್ತೀಚಿಗೆ ಪಿಎಸ್ ಐ ನಲ್ಲಿ ಸೆಲೆಕ್ಟ್ ಆದ ಹರ್ಷನ ಊರಿನವನಾಗಿದ್ದಾರೆ.
ಹರ್ಷನಿಗೆ ಹರೀಶ ಆರ್ಎಸ್ ಐ ಒಬ್ಬನನ್ನ ಪಿಎಸ್ ಐ ಪರೀಕ್ಷೆಗೂ ಮುನ್ನ ಪರಿಚಯ ಮಾಡಿಸಿದ್ದರು. ಹರೀಶ ಕೂಡ ಆ ಆರ್ಎಸ್ ಐ ಮೂಲಕವೇ 2018 ರಲ್ಲಿ ಪಿಎಸ್ ಐ ಪರೀಕ್ಷೆ ಪಾಸಾಗಿದ್ದನಂತೆ. ನನ್ನ ತರಾನೇ ಇಲಾಖೆಗೆ ಬಾ ಅಂತ ಹರೀಶ ಆರ್ಎಸ್ ಐ ನನ್ನ ಪರಿಚಯ ಮಾಡಿಕೊಟ್ಟಿದ್ದನು. ಹರೀಶನ ಮಾತಿನಂತೆ ಹರ್ಷ 60 ಲಕ್ಷ ರೂಪಾಯಿಗೆ ಡೀಲ್ ಮುಗಿಸಿದ್ದನು. ಹರ್ಷ ಬಂಧನದ ಬಳಿಕ ಸತ್ಯ ಹೊರಗಡೆ ಬಂದಿದೆ.
ಇದನ್ನು ಓದಿ: ಮಾನನಷ್ಟ ಮೊಕದ್ದಮೆ ಪ್ರಕರಣ; ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ಗೆ ಹೈಕೋರ್ಟ್ನಿಂದ ಬಿಗ್ ರಿಲೀಫ್
ಕಳೆದ ಇಪ್ಪತ್ತು ದಿನದಿಂದ ಹರೀಶನನ್ನ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಕರೀತಾನೇ ಇದ್ದರು. ವಿಚಾರಣೆಗೆ ಹೆದರಿದ ಪಿಎಸ್ ಐ ಹರೀಶ ಸಿಐಡಿ ತನಿಖೆಯ ಮೇಲೆ ಹೈಕೋರ್ಟ್ ನಲ್ಲಿ ರಿಟ್ ಪಿಟಿಷನ್ ಹಾಕಿದ್ದನು. ಇದೀಗ ಹರೀಶನನ್ನ ಸಿಐಡಿ ಟೀಂ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸ್ತಿದೆ.
ಏನಿದು 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಪ್ರಕರಣ
ಪೊಲೀಸ್ ಸಬ್ಇನ್ಸ್ಪೆಕ್ಟರ್ ನೇಮಕಾತಿ ಹಗರಣದ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪಿಎಸ್ಐ ಪರೀಕ್ಷೆ ಅಕ್ರಮ ನಡೆದಿತ್ತು. ಸಿಐಡಿ ಪೊಲೀಸರು ಪ್ರಕರಣದ ತನಿಖೆಯನ್ನ ಮುಂದುವರೆಸಿದ್ದು, ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಾದ ದಿವ್ಯಾ ಹಾಗರಗಿ, ರುದ್ರಗೌಡ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಈಗ ಮತ್ತೊಬ್ಬ PSI ಅಧಿಕಾರಿಯ ತೆಲೆದಂಡವಾಗಿದ್ದು, ಬ್ಯಾಡರಹಳ್ಳಿ ಠಾಣೆ PSI ಹರೀಶ್ರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ
ಇದನ್ನು ಓದಿ: ನಾವು ಲಂಚ ಪಡೆದಿದ್ದೆವಾ? ಮಂಚಕ್ಕೆ ಹೋಗಿದ್ದೆವಾ? ಬಿಜೆಪಿಗೆ ಹೆದರೋ ಮಾತೇ ಇಲ್ಲ; ಡಿಕೆ ಶಿವಕುಮಾರ್
ಪರೀಕ್ಷೆ ಬರೆಯಲು 1. ಬ್ಲೂಟೂತ್ ಬಳಕೆ 2. ಒಎಂಆರ್ ಪ್ರತಿಯನ್ನ ಎಕ್ಸಾಂ ಸೆಂಟರ್ನಲ್ಲಿ ತಿದ್ದುಪಡಿ ಮಾಡಿದ್ದಾರೆ. 3. ನೇಮಕಾತಿ ವಿಭಾಗದಲ್ಲಿ ಒಎಂಆರ್ ಪ್ರತಿಯಲ್ಲಿ ಅಕ್ರಮ ತಿದ್ದುಪಡಿ ಮಾಡಿದ್ದಾರೆ. 4. ಸೀಟಿಂಗ್ ವ್ಯವಸ್ಥೆ ಮಾಡಿ ಅಕ್ರಮ ಎಸಗಿ ಬರೆಯಲಾಗಿದೆ. 5. ಫಿಸಿಕಲ್ ವೇಳೆ ಹಣ ನೀಡಿ ಅಕ್ರಮ ಎಸಗಿದ್ದಾರೆ. 6. ಸಂಪೂರ್ಣ ಹುದ್ದೆಯನ್ನು ಡೀಲ್ ಮಾಡಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದ್ದಾರೆ. 7. ಮೊದಲ ಪ್ರಶ್ನೆ ಪತ್ರಿಕೆ ಡೀಲ್ ಮಾಡಿ ಬರೆಯಲಾಗಿದೆ. 8. ಎರಡನೆ ಪ್ರಶ್ನೆ ಪತ್ರಿಕೆ ಡೀಲ್ ಮಾಡಿ ಪರೀಕ್ಷೆ ಬರೆಯಲಾಗಿದೆ. 9. ಎಕ್ಸಾಂ ಸೆಂಟರ್ ಬುಕ್ ಮಾಡಿ ಅಕ್ರಮ ಎಸಗಿರುವುದು ಪತ್ತೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.