545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಹಗರಣದಲ್ಲಿ ಹಣದ ಹೊಳೆಯೇ ಹರಿದಿರುವುದು ದೃಢ

| Updated By: ಗಂಗಾಧರ​ ಬ. ಸಾಬೋಜಿ

Updated on: May 20, 2022 | 1:01 PM

545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಹಿನ್ನೆಲೆ ಪಿಎಸ್ಐ ನೇಮಕಾತಿ ವಿಭಾಗದಲ್ಲಿ ಅಧಿಕಾರಿಗಳಿಗಿಂತ ಬ್ರೋಕರ್​ಗಳಿಗೂ ಹಣದ ಹೊಳೆ ಹರಿದಿದೆ.

545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಹಗರಣದಲ್ಲಿ ಹಣದ ಹೊಳೆಯೇ ಹರಿದಿರುವುದು ದೃಢ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: 545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ (PSI Recruitment Scam) ಪ್ರಕರಣ ಪರೀಕ್ಷಾ ಹಗರಣದಲ್ಲಿ ಹಣದ ಹೊಳೆಯೇ ಹರಿದಿರುವುದು ದೃಢವಾಗಿದೆ. ಕೋಟಿ ಕೋಟಿ ಹಣ ಪತ್ತೆ ಹಿನ್ನೆಲೆ ಇಡಿ, ಎಸಿಬಿ ಎಂಟ್ರಿ ಖಚಿತವಾಗಿದ್ದು, ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಹಣ ಸಂಗ್ರಹಣೆಯಾಗಿದೆ. ಅಧಿಕಾರಿಗಳು ಭಾಗಿಯಾಗಿರುವುದರಿಂದ ಇಡಿ, ಎಸಿಬಿ ಎಂಟ್ರಿ ಸಾಧ್ಯತೆಯಿದೆ ಎನ್ನಲಾಗುತ್ತಿದೆ. HC ಶ್ರೀಧರ್​ ಮನೆಯಲ್ಲಿ 50 ಲಕ್ಷ ಹಣ ವಶಕ್ಕೆ ಪಡೆದ ಸಿಐಡಿ, ಶ್ರೀಧರ್ ಬಳಿ ಈಗಾಗಲೇ 1.71 ಕೋಟಿ ಹಣ ಜಪ್ತಿ ಮಾಡಲಾಗಿದೆ. ಅಕ್ರಮದಲ್ಲಿ ಬಂದ ಹಣ ಆರೋಪಿ ಶ್ರೀಧರ್ ಸ್ನೇಹಿತರಿಗೆ ನೀಡಿದ್ದ.​ ಈಗಾಗಲೇ ಹಣ ವಾಪಸ್​ ನೀಡಿರುವ ಮೂವರು ಸ್ನೇಹಿತರು, ಶ್ರೀಧರ್​ ಬಳಿಯಿದ್ದ ಹಣವನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗ ಮತ್ತೊಬ್ಬ ಸ್ನೇಹಿತ ಸಿಐಡಿಗೆ ಮಾಹಿತಿ ನೀಡಿ ಹಣ ವಾಪಸ್ ನೀಡಿದ್ದಾನೆ. ಇದೀಗ 50 ಲಕ್ಷ ಹಣ ವಶಕ್ಕೆ ಪಡೆದಿರುವ ಸಿಐಡಿ ಪೊಲೀಸರು, ಈವರೆಗೆ ಶ್ರೀಧರ್ ಒಬ್ಬನ ಬಳಿಯೇ 2.21 ಕೋಟಿ ಹಣ ಸೀಜ್ ಮಾಡಲಾಗಿದೆ. ಈಗಾಗಲೇ ಮಧ್ಯವರ್ತಿ ಕೇಶವಮೂರ್ತಿ ಬಳಿ 30 ಲಕ್ಷ ಜಪ್ತಿ ಮಾಡಲಾಗಿದ್ದು, ಬೆಂಗಳೂರಿನ ಪ್ರಕರಣ ಸಂಬಂಧ 2.51 ಕೋಟಿ ಹಣ ವಶಕ್ಕೆ ಪಡೆಯಲಾಗಿದೆ.

ಪರೀಕ್ಷಾ ಹಗರಣದಲ್ಲಿ ಬ್ರೋಕರ್​​ಗಳಿಗೂ ಹರಿದಿದೆ ಹಣದ ಹೊಳೆ

545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಹಿನ್ನೆಲೆ ಪಿಎಸ್ಐ ನೇಮಕಾತಿ ವಿಭಾಗದಲ್ಲಿ ಅಧಿಕಾರಿಗಳಿಗಿಂತ ಬ್ರೋಕರ್​ಗಳಿಗೂ ಹಣದ ಹೊಳೆ ಹರಿದಿದೆ. ಓರ್ವ ಪಿಎಸ್​ಐ ಅಭ್ಯರ್ಥಿ ನೇಮಕಾತಿ ಆಗ ಬೇಕು ಅಂದ್ರೆ ಕನಿಷ್ಠ ಮೂವರು ನಾಲ್ವರು ಬ್ರೋಕರ್​ಗಳ ಮೂಲಕ ಕೆಲಸ ಆಗ್ತಿತ್ತು. ಪ್ರತಿ ಬ್ರೋಕರ್​ಗಳ ಹಂತದಲ್ಲಿಯೂ ಕನಿಷ್ಠ ಹತ್ತು ಲಕ್ಷ ಹಣ ಕೊಡಬೇಕಿತ್ತು. ನೇಮಕಾತಿ ವಿಭಾಗದ ಅಧಿಕಾರಿಗೆ ಮೂವತ್ತ ರಿಂದ ಮೂವತ್ತೈದು ಲಕ್ಷ ತಲುಪುತ್ತಿತ್ತು. ಮೂವರು ನಾಲ್ವರು ಬ್ರೋಕರ್​ಗಳ ಹಂತದಲ್ಲಿ ಮೂವತ್ತು ನಲವತ್ತು ಲಕ್ಷ ಹಣ ನೀಡಲಾಗ್ತಿತ್ತು. ಅಷ್ಟೂ ಬ್ರೋಕರ್​ಗಳ ಮೂಲಕ ಹಣ ಕೊನೆಗೆ ನೇಮಕಾತಿ ವಿಭಾಗದ ಅಧಿಕಾರಿಗಳ ಕೈಗೆ ಸೇರ್ತಿತ್ತು.

ಇದನ್ನೂ ಓದಿ: NTR31: ಜ್ಯೂ.ಎನ್​ಟಿಆರ್ ಅಭಿಮಾನಿಗಳಿಗೆ ತ್ರಿಬಲ್ ಧಮಾಕಾ; ನೀಲ್-ತಾರಕ್ ಕಾಂಬಿನೇಷನ್​ನ ಹೊಸ ಚಿತ್ರ ಅನೌನ್ಸ್​​​

ನಂತರ ಒಎಂಆರ್ ಶೀಟ್ ತಿದ್ದುವುದು ಹಾಗೂ ಹೊಸ ಒಎಂಆರ್ ಶೀಟ್ ಇಡುವ ಮೂಲಕ ಕೃತ್ಯ ಎಸಗುತಿದ್ದರು. ಅಭ್ಯರ್ಥಿಗಳಿಂದ ನೇಮಕಾತಿ ವಿಭಾಗದಲ್ಲಿ ಕೆಲಸ ಆಗುವವರೆಗೆ ಹಲವರ ಕೈ ಬದಲಾವಣೆ ಆಗಿದೆ. ಹೀಗಾಗಿ ಅಭ್ಯರ್ಥಿಗಳು, ಬ್ರೋಕರ್​ಗಳು, ನೇಮಕಾತಿ ವಿಭಾಗದ ಅಧಿಕಾರಿಗಳನ್ನು ಸಿಐಡಿ ಎಲ್ಲರ ಮ್ಯಾಪಿಂಗ್ ಮಾಡುತ್ತಿದ್ದಾರೆ. ಎಷ್ಟೋ ಭಾರಿ ಓರ್ವ ಬ್ರೋಕರ್​ಗೆ ಯಾವ ಅಭ್ಯರ್ಥಿಗೆ ಕೆಲಸ ಮಾಡಿದ್ದಿನಿ ಅನ್ನೊದೆ ಗೊತ್ತಿಲ್ಲಾ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.