ಸರಿ ಇರುವ ರಸ್ತೆಯನ್ನೇ ಅಗೆದು ವೈಟ್ ಟಾಪಿಂಗ್; ಹಾಳಾಗಿರುವ ರಸ್ತೆ ಸರಿ ಮಾಡಿ ಎಂದು ಸಾರ್ವಜನಿಕರ ಆಕ್ರೋಶ

ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬ ಗಾದೆಯನ್ನು ನೆನಪಿಸುತ್ತೆ ಈ ಸುದ್ದಿ. ಯಾಕೆಂದರೆ ಸಾರ್ವಜನಿಕರ ಹಣ ಹೇಗೆ ಬಿಬಿಎಂಪಿ ಪೋಲು ಮಾಡುತ್ತೆ ಅನ್ನೋದಕ್ಕೆ ಈ ಸ್ಟೋರಿ ದಿ ಬೆಸ್ಟ್ ಎಕ್ಸಾಂಪಲ್. ಕೋಟಿ ಕೋಟಿ ದುಡ್ಡು ನೀರಿನಲ್ಲಿ ಹೋಮವಾಗುತ್ತಿದೆ. ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ವೈಟ್ ಟಾಪಿಂಗ್ ರಸ್ತೆ ನಿರ್ಮಾಣಕ್ಕೆ ಮುಂದಾಗಿರೋ ಅಧಿಕಾರಿಗಳು ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ.

ಸರಿ ಇರುವ ರಸ್ತೆಯನ್ನೇ ಅಗೆದು ವೈಟ್ ಟಾಪಿಂಗ್; ಹಾಳಾಗಿರುವ ರಸ್ತೆ ಸರಿ ಮಾಡಿ ಎಂದು ಸಾರ್ವಜನಿಕರ ಆಕ್ರೋಶ
ಸರಿ ಇರುವ ರಸ್ತೆಯನ್ನೇ ಅಗೆದು ವೈಟ್ ಟಾಪಿಂಗ್
Follow us
| Updated By: ಆಯೇಷಾ ಬಾನು

Updated on: Sep 22, 2024 | 1:52 PM

ಬೆಂಗಳೂರು, ಸೆ.22: ಬೆಂಗಳೂರಿನ‌ ಹೃದಯ ಭಾಗವಾದ ಶಾಂತಿನಗರ ವಿಧಾನಸಭಾ ಕ್ಷೇತ್ರದ ಸ್ವಸ್ತಿಕ್ ರಸ್ತೆಗೆ ನಾಲ್ಕು ವರ್ಷದಲ್ಲಿ ಎರಡು ಬಾರಿ ರಸ್ತೆ ಕಾಮಗಾರಿ ಮಾಡಲಾಗಿದೆ. ಚೆನ್ನಾಗಿರೋ ರಸ್ತೆಯನ್ನೇ ಅಗೆದು ಎರಡು ಬಾರಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇದೀಗ ವೈಟ್ ಟಾಪಿಂಗ್ (White Taping) ಹಾಕಿರೋ ರಸ್ತೆ ಚೆನ್ನಾಗಿದ್ದರೂ ಅದನ್ನ ತೆಗೆದು ಮತ್ತೆ ವೈಟ್ ಟಾಪಿಂಗ್ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು  (BBMP) ಮುಂದಾಗಿದ್ದು ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ.

ಅಕ್ಕಪಕ್ಕದ ರಸ್ತೆಗಳು ನಿರ್ಮಾಣ ಮಾಡದ ಪರಿಣಾಮ ದಿನನಿತ್ಯ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಿದ್ದರೂ ಹಾಳಾದ ರಸ್ತೆ ಸರಿ ಮಾಡದೇ ರಸ್ತೆ ಚೆನ್ನಾಗಿದ್ದರೂ ಮತ್ತೆ ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ರಸ್ತೆ ನಿರ್ಮಾಣ ಮಾಡಬೇಕಾದರೆ ಓಡಾಡಲು ತೊಂದರೆ ಆಯ್ತು. ಅಲ್ಲದೇ ವೈಟ್ ಟಾಪಿಂಗ್ ರಸ್ತೆ ಹಾಕಿದರೆ 5 ವರ್ಷ ಆಗೋ ವರೆಗೂ ತೆಗೆಯಬಾರದು. ಆದರೆ ಈಗ ಮತ್ತೆ ವೈಟ್ ಟಾಪಿಂಗ್ ರಸ್ತೆ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ. ಹೇಳೊರು ಇಲ್ಲ, ಕೇಳೊರು ಇಲ್ಲ ಅಂತ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮಹಿಳೆ ಕೊಲೆಗೆ ಪರಸಂಗದ ಅನುಮಾನ? 50 ತುಂಡುಗಳನ್ನು ಜೋಡಿಸಿ ವರದಿ ಸಿದ್ಧ ಮಾಡುವಿದೇ ಸವಾಲು

ಇನ್ನೂ ಮನೆಗಳಿಗೆ ನಲ್ಲಿ ಸಂಪರ್ಕಕ್ಕೆ ಅಂತ ರಸ್ತೆ ಅಗೆಯುತ್ತಾರೆ. ಇದರಿಂದ ಮತ್ತೆ ರಸ್ತೆ ತೆಗೆಯೋದು ಹಾಕೋದು ಮಾಡುತ್ತಾರೆ. ಹೀಗಾಗಿ ಸಮಸ್ಯೆ ಆಗುತ್ತದೆ. ಅಲ್ಲದೇ ಸಿಮೆಂಟ್ ರಸ್ತೆ ಮಾಡುವುದಕ್ಕಿಂತ ಟಾರ್ ರಸ್ತೆ ಮಾಡಬೇಕು. ಯಾಕೆಂದರೆ ವೈಟ್ ಟಾಪಿಂಗ್‌ನಿಂದ ಅಂತರ್ಜಲಮಟ್ಟಕ್ಕೂ ಹೊಡೆತ ಬೀಳುತ್ತದೆ. ಬೋರ್‌ವೆಲ್ ರಿಚಾರ್ಜ್ ಆಗಲ್ಲ. ಏನಾದರು ಸಮಸ್ಯೆಗಳಾದರೆ ಟಾರ್ ರಸ್ತೆ ಅಗೆದು ಮತ್ತೆ ಟಾರ್ ಹಾಕಬಹುದು. ಆದರೆ ಸಿಮೆಂಟ್ ರಸ್ತೆ ಮಾಡಿದರೆ ಎಲ್ಲವೂ ಕೂಡ ತೊಂದರೆ ಇದೆ. ಜೊತೆಗೆ ನೀರಿನ ಸಮಸ್ಯೆ ಕಸ ವಿಲೇವಾರಿ ಸೇರಿದಂತೆ ಪಾರ್ಕಿಂಗ್ ಸಮಸ್ಯೆಗಳಿವೆ. ಅವುಗಳನ್ನ ಕೂಡ ಬಗೆಹರಿಸಿ ಅಂತ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಚೆನ್ನಾಗಿರೋ ವೈಟ್ ಟಾಪಿಂಗ್ ರಸ್ತೆಗೆ ಈಗ ಮತ್ತೆ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಗೆ ಮುಂದಾಗಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ