Shivananda Steel Flyover: ಶಿವಾನಂದ ಮೇಲ್ಸೇತುವೆ ಕೆಳಗೆ ಪಬ್ಲಿಕ್ ಪ್ಲಾಜಾ ನಿರ್ಮಾಣಕ್ಕೆ ಸ್ಥಳೀಯರ ವಿರೋಧ, ಏನಿದು ಹೊಸ ಯೋಜನೆ?

| Updated By: ಆಯೇಷಾ ಬಾನು

Updated on: Jun 13, 2023 | 10:52 AM

ಅಮೃತ ನಗರೋತ್ಥಾನ ಯೋಜ‌ನೆಯ ಅಡಿಯಲ್ಲಿ ನಗರದ ಶಿವಾನಂದ ಸ್ಟೀಲ್‌ ಮೇಲ್ಸೇತುವೆ ಕೆಳಭಾಗದಲ್ಲಿ ‘ಪಬ್ಲಿಕ್‌ ಪ್ಲಾಜಾ’ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ.

Shivananda Steel Flyover: ಶಿವಾನಂದ ಮೇಲ್ಸೇತುವೆ ಕೆಳಗೆ ಪಬ್ಲಿಕ್ ಪ್ಲಾಜಾ ನಿರ್ಮಾಣಕ್ಕೆ ಸ್ಥಳೀಯರ ವಿರೋಧ, ಏನಿದು ಹೊಸ ಯೋಜನೆ?
ಶಿವಾನಂದ ಮೇಲ್ಸೇತುವೆ
Follow us on

ಬೆಂಗಳೂರು: ರಾಜಾಧಾನಿ ಬೆಂಗಳೂರಿನ ಶಿವಾನಂದ ಸ್ಟೀಲ್‌ ಮೇಲ್ಸೇತುವೆ(Shivananda Steel Flyover) ಕೆಳಭಾಗದಲ್ಲಿ ‘ಪಬ್ಲಿಕ್‌ ಪ್ಲಾಜಾ’ (Public Plaza) ನಿರ್ಮಾಣಕ್ಕೆ ಬಿಬಿಎಂಪಿ(BBMP) ಮುಂದಾಗಿದೆ. ನಾಗರಿಕರಿಗೆ ಹೈಟೆಕ್‌ ಸೌಲಭ್ಯಗಳನ್ನು ರಸ್ತೆ ಮಧ್ಯೆ ಒದಗಿಸುವ ಆಕರ್ಷಕ ತಾಣವೂ ಇದಾಗಲಿದೆ. ಆದ್ರೆ ಈ ಬಗ್ಗೆ ಜನರು ಭಾರಿ‌ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.‌

ರಾಜ್ಯ ರಾಜಾಧಾನಿ ಬೆಂಗಳೂರಿನಲ್ಲಿ 45 ಕ್ಕೂ ಹೆಚ್ಚು ಮೇಲ್ಸೇತುವೆಗಳಿವೆ.‌ ಆದ್ರೆ ಈ ಮೇಲ್ಸೇತುವೆಯ ಕೆಳಭಾಗದಲ್ಲಿದ್ದ ಜಾಗದಲ್ಲಿ ಇಷ್ಟು ದಿನ ಅನಧಿಕೃತ ಚಟುವಟಿಕೆಗಳು ನಡೆಯುತ್ತಿದ್ದವು. ಒಂದಷ್ಟು ಫ್ಲೈ ಓವರ್​ಗಳ ಕೆಳಗಂತೂ ಕಸದ ರಾಶಿಯೇ ತುಂಬಿರುತ್ತಿತ್ತು. ಇದೀಗಾ ಇಂತಹ ಚಟುವಟಿಕೆಗಳಿಗೆ ನಾಂದಿ ಹಾಡುವ ಸಲುವಾಗಿ ನಗರದ ಮೇಲ್ಸುತುವೆ ಕೆಳಗೆ ಪಬ್ಲಿಕ್ ಪ್ಲಾಜಾ ನಿರ್ಮಿಸಲಾಗುತ್ತಿದೆ.‌

ಹೌದು, ಅಮೃತ ನಗರೋತ್ಥಾನ ಯೋಜ‌ನೆಯ ಅಡಿಯಲ್ಲಿ ನಗರದ ಶಿವನಂದ ಸರ್ಕಲ್, ರೇಸ್ ಕೋರ್ಸ್ ಸರ್ಕಲ್, ಆನಂದ್ ರಾವ್ ವೃತ್ತ, ಬಿಎಚ್ ಇ ಎಲ್ ವೃತ್ತ, ಮೈಸೂರ್ ಜಂಕ್ಷನ್​ನಲ್ಲಿ ಪಬ್ಲಿಕ್ ಪ್ಲಾಜಾ ಯೋಜನೆ ರೂಪಿಸಲಾಗುತ್ತಿದೆ. ಸಧ್ಯ ಈ ಯೋಜನೆಗೆ 10.45 ಕೋಟಿ ವ್ಯಾಯ ಮಾಡುತ್ತಿದ್ದು, ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಿಂದ ಪುರುಷರಿಗೆ – ಮಹಿಳೆಯರಿಗೆ ಹಾಗೂ ಅಲ್ಪ ಸಂಖ್ಯಾತರಿಗೆ ಪ್ರತ್ಯೇಕ ಹೈಟೆಕ್ ಶೌಚಾಲಯ ನಿರ್ಮಾಣ‌ ಮಾಡಲಾಗುತ್ತಿದೆ.‌

ಇದನ್ನೂ ಓದಿ: Bangalore Rains: ಮಳೆಗೆ ರಸ್ತೆಗಳು ಜಲಾವೃತ, ಅಂಡರ್‌ಪಾಸ್‌ಗಳು ಮತ್ತೆ ಮುಳುಗಡೆ; ಇಂದು ಕೂಡ ಮಳೆ ಸಾಧ್ಯತೆ

ಇನ್ನು ಪ್ಲಾಜಾ ಸುತ್ತ ನೆಲ ದೀಪಾ, ಅಲಂಕಾರ ದೀಪಾ, ಬೀದಿ ದೀಪಾಗಳು ಮುಖ್ಯ ಆಕರ್ಷಣೆಯಾಗಿರಲಿವೆ. ಜೊತೆಗೆ ಆಟೋರಿಕ್ಷಾ ಪಿಕ್ ಅಪ್ ಝೋನ್, ಝೀಬ್ರಾ ಕ್ರಾಸಿಂಗ್, ಪಾದಾಚಾರಿ ಮಾರ್ಗ ಇರಲಿವೆಯಂತೆ. ಅಲ್ಲದೇ ಮಕ್ಕಳಿಗೆ ಆಟಾ ಆಡಲು ಸಾಮಾಗ್ರಿಗಳನ್ನ ಒದಗಿಸಲಾಗುತ್ತಿದೆ. ಪ್ಲಾಜಾದಲ್ಲಿ, ಕಿಯೋಸ್ಕ್, ವಿಶ್ರಾಂತಿ ತಾಣ, ಮೊಬೈಲ್ ಚಾರ್ಜಿಂಗ್ ಘಟಕ, ಪುಸ್ತಕಗಳನ್ನ ಒದಲು ಪ್ರತ್ಯೇಕ ಜಾಗವನ್ನ ನಿರ್ಮಾಣ ಮಾಡಲಾಗುತ್ತಿದ್ದು ಇನ್ನು ಒಂದು ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದ್ರೆ ಈ ಯೋಜನೆ ಸಂಬಂಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಶಿವಾನಂದ ಸರ್ಕಲ್​ನಲ್ಲಿ ಗಾಡಿಗಳನ್ನ ಪಾರ್ಕಿಂಗ್ ಮಾಡುವುದಕ್ಕೆ ಮೊದಲೇ ಜಾಗವಿಲ್ಲ. ಈ ಸಂದರ್ಭದಲ್ಲಿ ಈ ಹೈಟೆಕ್ ಪಬ್ಲಿಕ್ ಪ್ಲಾಜಾಗಳ ಅವಶ್ಯಕತೆ ಏನಿದೆ?. ಇದು ದುಡ್ಡು ಮಾಡುವ ತಂತ್ರ ಅಷ್ಟೇ. ಸ್ಟೀಲ್ ಬ್ರಿಡ್ಜ್ ನಿಂದ ಟ್ರಾಫಿಕ್ ಕಡಿಮೆ ಮಾಡ್ತಿವಿ ಎಂದ್ರು. ಆದ್ರೆ ಇದೀಗಾ ಕಡಿಮೆಯೇ ಆಗಿಲ್ಲ. ಮೇಲ್ಸೇತುವೆ ಕೆಳಗೆ ಶೌಚಾಲಯ ನಿರ್ಮಾಣ ಮಾಡ್ತಿವಿ ಎಂದ್ರು. ಆದ್ರೆ ಆ ಶೌಚಾಲಯಗಳನ್ನ ಸರಿಯಾಗಿ ನಿರ್ವಹಣೆ ಮಾಡದೇ ಹೊದ್ರೆ ಸ್ಥಳೀಯರಿಗೆ ಇನ್ನಿಲ್ಲದ ಸಮಸ್ಯೆ ಉಂಟಾಗುವುದು ಮಾತ್ರ ಖಚಿತ. ಹೀಗಾಗಿ ನಮಗೆ ಈ ಯೋಜನೆಯ ಅವಶ್ಯಕತೆಯೇ ಇರಲಿಲ್ಲ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ