Bangalore Rains: ಮಳೆಗೆ ರಸ್ತೆಗಳು ಜಲಾವೃತ, ಅಂಡರ್‌ಪಾಸ್‌ಗಳು ಮತ್ತೆ ಮುಳುಗಡೆ; ಇಂದು ಕೂಡ ಮಳೆ ಸಾಧ್ಯತೆ
ಬೆಳ್ಳಂದೂರು ಸಮೀಪದ ಕರಿಯಮ್ಮನ ಅಗ್ರಹಾರ ಮತ್ತು ವರ್ತೂರಿನ ಬಳಗೆರೆ ರಸ್ತೆಗಳು ಜಲಾವೃತಗೊಂಡಿವೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಮಹದೇವಪುರ ವಲಯದ ರಾಮಮೂರ್ತಿ ನಗರದಲ್ಲಿ 10 ಮಿ.ಮೀ ಮಳೆಯಾಗಿದೆ.
ಬೆಂಗಳೂರು: ನಗರದಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದವು. ಕತ್ತಲಲ್ಲಿ ಕರೆಯಂತಾದ ರಸ್ತೆಗಳ ಮೇಲೆ ಸಂಚರಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಂಗಳವಾರ ಬೆಳಗ್ಗೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಮಹದೇವಪುರ ವಲಯದ ರಾಮಮೂರ್ತಿ ನಗರದಲ್ಲಿ 10 ಮಿ.ಮೀ ಮಳೆಯಾಗಿದೆ.
ಸಂಜೆ ಕೆಲವೇ ಕೆಲವು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ನಗರದ ಕೆಲವು ಭಾಗಗಳಲ್ಲಿ ಹಲವಾರು ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳು ಜಲಾವೃತಗೊಂಡವು, ಇದು ತೀವ್ರ ಸಂಚಾರ ದಟ್ಟಣೆಗೆ ಕಾರಣವಾಯಿತು. ನಗರದಲ್ಲಿ ಉಂಟಾದ ಮಳೆಯ ಪರಿಣಾಮಗಳ ಹಲವಾರು ವಿಡಿಯೋಗಳನ್ನು ನಿವಾಸಿಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Bengaluru Rain; ಬೆಂಗಳೂರಿನಲ್ಲಿ ಇನ್ನೂ ನಾಲ್ಕು ದಿನ ವರುಣನ ಆರ್ಭಟ, ನಿನ್ನೆ ಸುರಿದ ಮಳೆಗೆ ಕೆರೆಯಂತಾದ ರಸ್ತೆಗಳು
ವರ್ತೂರ್ ರೈಸಿಂಗ್ ಎಂಬ ಟ್ವಿಟರ್ ಖಾತೆಯಲ್ಲಿ ವರ್ತೂರಿನ ಪರಿಸ್ಥಿತಿ ವಿವರಿಸುವ ವಿಡಿಯೋ ಟ್ವೀಟ್ ಮಾಡಲಾಗಿದೆ. ವರ್ತೂರಿನ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ! ವರ್ತೂರಿನಲ್ಲಿ ರಾಜಕಾಲುವೆಗಳು ಅತಿಕ್ರಮಣಗೊಂಡ ಪರಿಣಾಮ ಈ ರೀತಿಯ ಸ್ಥಿತಿ ಎದುರಾಗಿದೆ. 60 ಅಡಿ ಮತ್ತು ಅದಕ್ಕಿಂತ ಹೆಚ್ಚಿನ ರಾಜಕಾಲುವೆಗಳನ್ನು NGT ಮಾನದಂಡಗಳನ್ನು ಉಲ್ಲಂಘಿಸಿ 15 ಅಡಿಗಳಿಗೆ ಇಳಿಸಲಾಗಿದೆ. ಪ್ರಕಾಶ್ ಲೇಔಟ್, ಚಿನ್ನಪ್ಪ ಲೇಔಟ್ ಮತ್ತು ಮೀನಾಕ್ಷಿ ಲೇಔಟ್ನಲ್ಲಿ ರಸ್ತೆಗಳು ಕೆರೆಯಂತಾಗಿವೆ.
Varthur in shambles continues! Outcome of encroached Rajakaluves at Varthur. 60ft & above rajakaluves reduced to 15ft defying the NGT norms. Prakash layout, Chinnappa layout & Meenakshi layout residents are out on the submerged streets. pic.twitter.com/5dmHskTrBd
— Varthur Rising (@RisingVarthur) June 12, 2023
ಬೆಳ್ಳಂದೂರು ಸಮೀಪದ ಕರಿಯಮ್ಮನ ಅಗ್ರಹಾರ ಮತ್ತು ವರ್ತೂರಿನ ಬಳಗೆರೆ ರಸ್ತೆಗಳು ಜಲಾವೃತಗೊಂಡಿವೆ.
#Bengaluru #bellandur #rain #bengalururain pic.twitter.com/MkSHAzRUFD
— vidya d (@vidyaberyl) June 12, 2023
ನಗರದ ವಿಲ್ಸನ್ ಗಾರ್ಡಾನ್, ಶಾಂತಿ ನಗರ, ಕೋರಮಂಗಲ, ಲಾಲ್ ಬಾಗ್, ಮಾರತಹಳ್ಳಿ ಸುತ್ತಮುತ್ತ, ಆಡುಗೋಡಿ ಸುತ್ತ- ಮುತ್ತ ಗುಡುಗು ಸಹಿತ ವರುಣ ಆರ್ಭಟಿಸಿದ್ದ. ಆಡುಗೋಡಿಯಲ್ಲಿ ರಸ್ತೆ ಮೇಲೆ ಹೊಳೆಯಂತೆ ನೀರು ಹರಿಯುತ್ತಿತ್ತು. ರಸ್ತೆ ಜಲಾವೃತವಾಗಿ ವಾಹನ ಸವಾರರು ಪರದಾಡುತ್ತಿದ್ದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:55 am, Tue, 13 June 23