ಕಳ್ಳತನ ಆರೋಪಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ, ಒಂದೂವರೆ ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದು ಮೃತನ ಪತ್ನಿ

| Updated By: ರಮೇಶ್ ಬಿ. ಜವಳಗೇರಾ

Updated on: Sep 04, 2023 | 2:48 PM

ಬೆಂಗಳೂರಿನ ಉದ್ಯಮಿಯೊಬ್ಬರ ಮನೆಯಲ್ಲಿ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಇನ್ನು ತಮ್ಮ ಮೇಲೆ ಕಳ್ಳತನ ಆರೋಪ ಬಂದಿದ್ದರಿಂದ ಪೊಲೀಸ್​ ತನಿಖೆ ಹೆದರಿ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಮೃತನ ಪತ್ನಿಯೇ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು, ಆರೋಪಿಯಿಂದ ಒಂದುವರೆ ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದಾರೆ.

ಕಳ್ಳತನ ಆರೋಪಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ, ಒಂದೂವರೆ ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದು ಮೃತನ ಪತ್ನಿ
ಜಿಮೋನ್​ ವರ್ಗೀಸ್, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
Follow us on

ಬೆಂಗಳೂರು, (ಸೆಪ್ಟೆಂಬರ್ 04): ನಗರದ ಪುಲಿಕೇಶಿನಗರದ ಉದ್ಯಮಿಯೊಬ್ಬರ ಮನೆ ಕಳ್ಖನತತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ವ್ಯಾಪ್ತಿಯಲ್ಲಿ ಗಿರಿಜಾ ಎಂಬುವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಈ ಸಂಬಂಧ ಜಿಮೋನ್​ ವರ್ಗೀಸ್ ಮೇಲೆ ಅನುಮಾನಗೊಂಡು ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಇದರಿಂದ ಹೆದರಿ ಜಿಮೋನ್​ ವರ್ಗೀಸ್ ಆತ್ಮಹತ್ಯೆ (Suicide)  ಮಾಡಿಕೊಂಡಿದ್ದ. ಕಳೆದ ಆಗಸ್ಟ್ 21ರಂದು ಡೆತ್​ ನೋಟ್​ ಬರೆದಿಟ್ಟು ಕೇರಳ ಮೂಲದ ಜಿಮೋನ್​ ವರ್ಗೀಸ್ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಕಳ್ಳತನ ಮಾಡಿದ್ದು ಮೃತನ ಪತ್ನಿ ಎನ್ನುವುದು ಗೊತ್ತಾಗಿದ್ದು, ಇದೀಗ ಪೊಲೀಸರು ಮಹಿಳೆಯಿಂದ ಒಂದೂವರೆ ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು  ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಾಯಚೂರು: ಕೂಲಿ ಕೆಲಸ ಮಾಡುತ್ತೇನೆಂದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನ ಬಂಧನ

ಪ್ರಕರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಪೂರ್ವ ವಿಭಾಗದ ಡಿಸಿಪಿ

ಇನ್ನು ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್, ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ಮನೆಗಳವು ಪ್ರಕರಣ ವರದಿಯಾಗಿತ್ತು. ಮನೆ ಮಾಲೀಕರು ಮನೆ ಸೇವಕರಿಂದ ಕಳವಾಗಿದೆ ಎಂದು ದೂರು ನೀಡಿದ್ದರು. ಎರಡೂವರೆ ಕೋಟಿ ರೂ. ಮೌಲ್ಯದ ಆಭರಣ ಕಳುವಾಗಿದೆ ಎಂದು ಆರೋಪಿಸಿದ್ದರು. ಮನೆ ಕೆಲಸದಾಳುಗಳೇ ಕಳವು ಮಾಡಿದ್ದಾರೆ ಎಂದು ದೂರು ನೀಡಿದ್ದರು. ಈ ದೂರಿನ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು. ಅಲದಲೇ ವಿಚಾರಣೆಗೆ ಬರುವಂತೆ ಮನೆ ಕೆಲಸದವರಿಗೆ ನೊಟೀಸ್ ನೀಡಲಾಗಿತ್ತು. ಇದರ ಮಧ್ಯೆ ಕಳೆದ ತಿಂಗಳು ಆಗಸ್ಟ್ 21ರಂದು ಮನೆ ಕೆಲಸಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ.ಈ ಸುದ್ದಿ ತಿಳಿದು ನಮ್ಮ ಪೊಲೀಸ್ರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುವ ವೇಳೆ ಏಳು ಪುಟಗಳ ಡೆತ್ ನೋಟ್ ಸಿಕ್ಕಿತ್ತು. ಡೆತ್ ನೋಟ್ ಮಲಯಾಳಂ ಭಾಷೆಯಲ್ಲಿತ್ತು. ಅದನ್ನ ಭಾಷಾಂತರ ಮಾಡಿದ್ದು, ಮನೆ ಮಾಲೀಕರ ಮೇಲೆ ಆರೋಪ‌ ಮಾಡಲಾಗಿತ್ತು. ಬಳಿಕ ತನಿಖೆ ಮುಂದುವರೆಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಡೆತ್ ನೋಟ್ ಆಧಾರದ ಮೇಲೆ‌ ಸುಮೋಟೋ ‌ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಕೇರಳದಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲಾಗಿತ್ತು.  ಪೊಲೀಸ್ರು ವಿಚಾರಣೆ ಸಂದರ್ಭದಲ್ಲಿ ಮೃತನ‌ ಪತ್ನಿ ಕಳವು ಮಾಡಿದ್ದ 38 ಆಭರಣಗಳನ್ನ ಪೊಲೀಸ್ರಿಗೆ ಒಪ್ಪಿಸಿದ್ದಾರೆ. ಆಭರಣದ ಬಾಕ್ಸ್ ಗಳ ಮೇಲೆ ಮೃತ ವ್ಯಕ್ತಿಯ ಪಿಂಗರ್ ಪ್ರಿಂಟ್ ಸಿಕ್ಕಿದೆ. ಇಲ್ಲಿಯವರೆಗೂ ಕಳವಾಗಿದ್ದ 38 ಆಭರಣಗಳು ಹಾಗೂ ವಿದೇಶಿ ಕರೆನ್ಸಿ ಸಹ ಪತ್ತೆಯಾಗಿದೆ. ಇನ್ನೂ ಎರಡು ಆಭರಣಗಳನ್ನ ವಶಪಡಿಸಿಕೊಳ್ಳಬೇಕಿದೆ. ಅದನ್ನ ಕೆನರಾ ಬ್ಯಾಂಕ್ ನಲ್ಲಿ ಕೇರಳ ಬ್ರಾಂಚ್ ನಲ್ಲಿ ಅಡ ಇಟ್ಟಿದ್ದು, ಅದನ್ನ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ತನಿಖೆ ಮುಂದುವರೆಸಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ