ಯುವ ವೈದ್ಯನ ಬೇಜವಾಬ್ದಾರಿ, ಯುವಕನ ಸಾವು: ಕೆ.ಪಿ. ಅಗ್ರಹಾರ ಭಾಗ್ಯ ಕ್ಲಿನಿಕ್‌ಗೆ ಬೀಗದ ಭಾಗ್ಯ!
ಅಮರ್ ಶೆಟ್ಟಿ ಎಂಬ ಯುವಕ ಕಳೆದ ಆಗಸ್ಟ್ 13ನೇ ತಾರೀಖು ಭಾಗ್ಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ವೈದ್ಯ ರಂಜಿತ್ ಜ್ವರಕ್ಕೆ ಇಂಜೆಕ್ಷನ್ ನೀಡಿದ್ದರು. ಅದರೆ ಸೈಡ್ ಎಫೆಕ್ಟ್ ನಿಂದಾಗಿ ಅಂಗಾಗ ವೈಫಲ್ಯದಿಂದ ಅಮರ್ ಶೆಟ್ಟಿ ನರಳಾಡಿದ್ದರು. ವೈದ್ಯನ ಬೇಜವಾಬ್ದಾರಿಗೆ ಯುವಕ ಬಲಿಯಾಗಿದ್ದ. ಈ ಬಗ್ಗೆ ಕೆ.ಪಿ. ಅಗ್ರಹಾರ ಪೊಲೀಸ್ ಸ್ಟೇಷನ್ ನಲ್ಲಿ ಕ್ಲಿನಿಕ್ ವಿರುದ್ದ ದೂರು ದಾಖಲು ಮಾಡಲಾಗಿತ್ತು. ಸದ್ಯ ಭಾಗ್ಯ ಕ್ಲಿನಿಕ್‌ಗೆ ಬೀಗ ಬಿದ್ದಿದೆ.
ಬೆಂಗಳೂರು, ಸೆಪ್ಟೆಂಬರ್ 4: ನಗರದ ಕೆ.ಪಿ. ಅಗ್ರಹಾರ (KP agrahara) 4 ನೇ ಕ್ರಾಸ್ ನಲ್ಲಿರುವ ಭಾಗ್ಯ ಕ್ಲಿನಿಕ್‌ಗೆ ಬೀಗದ ಭಾಗ್ಯ ಹಾಕಲಾಗಿದೆ. ಕಳೆದ ತಿಂಗಳು ಆಗಸ್ಟ್ 18ರಂದು ಅಮರ್ ಎಂಬ ಅಮಾಯಕನ ಬಲಿ ಪಡೆದಿದ್ದ ಭಾಗ್ಯ ಕ್ಲಿನಿಕ್ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ. ಬಿಬಿಎಂಪಿ (BBMP) ಆರೋಗ್ಯ ಅಧಿಕಾರಿಗಳು ಭಾಗ್ಯ ಕ್ಲಿನಿಕ್ ಅನ್ನು ಇಂದು ಬಂದ್ (closed down) ಮಾಡಿಸಿದರು. ಭಾಗ್ಯ ಕ್ಲಿನಿಕ್ನ ವೈದ್ಯರೊಬ್ಬರ ಬೇಜವಾಬ್ದಾರಿ (Doctor negligence) ಬಗ್ಗೆ ಆರೋಪ ಮಾಡಿದ್ದ ಕುಟುಂಬಸ್ಥರು ಅಮರ್ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಕುಟುಂಬಸ್ಥರು ಮತ್ತು ಸ್ನೇಹಿತರು ಆಗ್ರಹಿಸಿದ್ದರು.
ಅಮರ್ ಸ್ನೇಹಿತರು ಆರೋಗ್ಯ ಸಚಿವರು, ಆರೋಗ್ಯ ಆಯುಕ್ತರು, ಬೆಂಗಳೂರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ವಸಂತನಗರದ ಕರ್ನಾಟಕ ಮೆಡಿಕಲ್ ಕೌನ್ಸಿಲ್ಗೆ ಸಹ ದೂರು ಹೋಗಿತ್ತು. ಈ ದೂರಿನ ಅನ್ವಯ ಇಂಜೆಕ್ಷನ್ ನೀಡಿದ ಡಾ. ರಂಜಿತ್ ಅವರ ಕ್ಲಿನಿಕ್ ಅನ್ನು ಕ್ಲೋಸ್ ಮಾಡಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಲಿನಿಕ್ ಅನ್ನು ಸೀಜ್ ಮಾಡಿ, ಬೀಗ ಜಡಿದಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿಗೆ ಮಧ್ಯರಾತ್ರಿ ಆಗಿದ್ದೇನು? ಹೆಚ್ಡಿಕೆ ಗೋಲ್ಡನ್ ಅವರ್ ಬಗ್ಗೆ ವಿವರಿಸಿದ ಡಾಕ್ಟರ್
ಕುಂದಾಪುರ ಮೂಲದ ಅಮರ್ ಶೆಟ್ಟಿ ಕಳೆದ ಆಗಸ್ಟ್ 13ನೇ ತಾರೀಖು ಭಾಗ್ಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ವೈದ್ಯ ರಂಜಿತ್ ಜ್ವರಕ್ಕೆ ಇಂಜೆಕ್ಷನ್ ನೀಡಿದ್ದರು. ಅದರೆ ಸೈಡ್ ಎಫೆಕ್ಟ್ ನಿಂದಾಗಿ ಅಂಗಾಗ ವೈಫಲ್ಯದಿಂದ ಅಮರ್ ಶೆಟ್ಟಿ ನರಳಾಡಿದ್ದರು. ವೈದ್ಯನ ಬೇಜವಾಬ್ದಾರಿಗೆ ಆಗಸ್ಟ್ 18ರಂದು ಅಮಾಯಕ ಯುವಕ ಬಲಿಯಾಗಿದ್ದ. ಈ ಬಗ್ಗೆ ಕೆ.ಪಿ. ಅಗ್ರಹಾರ ಪೊಲೀಸ್ ಸ್ಟೇಷನ್ ನಲ್ಲಿ ಕ್ಲಿನಿಕ್ ವಿರುದ್ದ ದೂರು ದಾಖಲು ಮಾಡಲಾಗಿತ್ತು. ಸ್ನೇಹಿತರು ಹಾಗೂ ಕುಟುಂಬಸ್ಥರು ವೈದ್ಯನ ಮೇಲೆ ಕ್ರಮಕ್ಕೆ ಪಟ್ಟು ಹಿಡಿದಿದ್ದರು. ಅಮರ್ ಸ್ನೇಹಿತರು ಆರೋಗ್ಯ ಸಚಿವರಿಗೂ ದೂರು ನೀಡಿದ್ದರು.
ಸದ್ಯ ಭಾಗ್ಯ ಕ್ಲಿನಿಕ್‌ಗೆ ಬೀಗ ಬಿದ್ದಿದೆ. ಬೇಜವಾಬ್ದಾರಿ ವೈದ್ಯ ಡಾ. ರಂಜಿತ್ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ. ಕಾನೂನು ರೀತ್ಯ ಶೀಘ್ರ ತನಿಖೆ ನಡೆಸಿ ಬಂಧಿಸುವಂತೆ ಆಗ್ರಹಿಸಲಾಗಿದೆ. ವೈದ್ಯರ ಕಡೆಯಿಂದ ಸೂಕ್ತ ಪರಿಹಾರ ನೀಡುವಂತೆಯೂ ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ