ಚಾಮರಾಜಪೇಟೆ: ಪುತ್ಥಳಿ ವಿಚಾರವಾಗಿ ಚಾಮರಾಜಪೇಟೆಯಲ್ಲಿ(chamrajpet) ಫೈಟ್ ಶುರುವಾಗಿದೆ. ಸ್ಥಳೀಯರು ಮತ್ತು ಪಾಲಿಕೆ ನಡುವೆ ಪುತ್ಥಳಿಗಾಗಿ ಕಿತ್ತಾಟ ನಡೆಯುತ್ತಿದೆ. ಪುನೀತ್ ರಾಜ್‍ಕುಮಾರ್ ಪುತ್ಥಳಿ(Puneeth Rajkumar statue) ನಿರ್ಮಾಣಕ್ಕೆ ಮನವಿ ನೀಡಿ 7 ತಿಂಗಳಾಯ್ತು ಆದ್ರೆ ಬಿಬಿಎಂಪಿ(BBMP) ಯಾವುದೇ ಅನುಮತಿ ನೀಡಿಲ್ಲ. ಹೀಗಾಗಿ ಸ್ವತಃ ತಾವೇ ಪುನೀತ್ ರಾಜ್ ಕುಮಾರ್ ಪುತ್ಥಳಿ ನಿರ್ಮಾಣಕ್ಕೆ ಸ್ಥಳೀಯರು ಮುಂದಾಗಿದ್ದಾರೆ.
ಸುಮಾರು 15 ಅಡಿ ಎತ್ತರದ ಅಪ್ಪು ಪುತ್ಥಳಿಗೆ ಭರದ ಸಿದ್ದತೆ ನಡೀತಿದ್ದು ಇದರ ನಡುವೆಯೇ ಮತ್ತೊಂದು ಗುಂಪಿನಿಂದ ಚಾಮರಾಜೇಂದ್ರ ಒಡೆಯರ್ ಪುತ್ಥಳಿ ನಿರ್ಮಾಣಕ್ಕೆ ಪಟ್ಟು ಹಿಡಿಯಲಾಗಿದೆ. ಚಾಮರಾಜಪೇಟೆಯಲ್ಲಿ ಒಂದೇ ಒಂದು ಚಾಮರಾಜೇಂದ್ರ ಒಡೆಯರ್ ಪುತ್ಥಳಿಯೂ ಇಲ್ಲ. ಮೊದಲು ಇವರ ಪುತ್ಥಳಿ ನಿರ್ಮಿಸಿ, ನಂತರ ಪುನೀತ್ ಪ್ರತಿಮೆ ಅನಾವರಣಗೊಳಿಸುವಂತೆ ಒತ್ತಾಯ ಮಾಡಲಾಗುತ್ತಿದೆ. ಆದ್ರೆ ಇದಕ್ಕೆ ತಲೆ ಕೆಡಿಸಿಕೊಳ್ಳದೆ 30 ಲಕ್ಷ ರೂ. ವೆಚ್ಚದಲ್ಲಿ ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಸದ್ಯ ನಾನು ಕೆಲಸ ನಿಲ್ಲಿಸೋದಿಲ್ಲ ಅಂತ ಸ್ಥಳೀಯರ ಜೊತೆಗೆ ಮಾಜಿ ಪಾಲಿಕೆ ಸದಸ್ಯ ಚಂದ್ರಶೇಖರ್ ಹೇಳಿದ್ದಾರೆ. ಇನ್ನು ಮತ್ತೊಂದು ಕಡೆ ಬಿಬಿಎಂಪಿ ಆಯುಕ್ತರಿಗೆ 7 ತಿಂಗಳ ಹಿಂದೆಯೇ ಮನವಿ ನೀಡಿದ್ದೇವೆ. ಅನುಮತಿ ಮೇರೆಗೆ ಪುನೀತ್ ಪುತ್ಥಳಿ ನಿರ್ಮಿಸುತ್ತಿದ್ದೇವೆ ಅಂತ ಆಗ್ರಹಿಸಿದ್ದಾರೆ. ಇದನ್ನೂ ಓದಿ: Lakshmi Hebbalkar: ಬೆಳಗಾವಿಯ ನಿವಾಸದಲ್ಲಿ ಕೇದಾರ ಪೀಠದ ಜಗದ್ಗುರುಗಳ ಪಾದಪೂಜೆ ಮಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಇನ್ನು ಈ ವಿಚಾರವಾಗಿ ಮಾತನಾಡಿರುವ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್, ಈ ಹಿಂದೆ ಕೇವಲ ಮನವಿ ಮಾತ್ರ ಬಂದಿತ್ತು. ಆದ್ರೆ ಬಿಬಿಎಂಪಿಯಿಂದ ಯಾವುದೇ ಅನುಮತಿ ಕೊಟ್ಟಿಲ್ಲ. ಪಾದಚಾರಿ ರಸ್ತೆಯಲ್ಲಿ ಪುನೀತ್ ಪ್ರತಿಮೆ ನಿರ್ಮಿಸಲಾಗ್ತಿತ್ತು. ಈ ಬಗ್ಗೆ ಮೌಕಿಕವಾಗಿ ದೂರು ಬಂದ ಮೇಲೆ ನಾನು ಸ್ಥಳಕ್ಕೆ ಭೇಟಿ ನೀಡಿದ್ದೆ. ಬೇರೆ ಎಲ್ಲಿ ನಿರ್ಮಿಸೋಕೆ ಸಾಧ್ಯ ಅಂತ ಅವರು ಮನವಿ ನೀಡಬೇಕು. ಕಾನೂನಿನಲ್ಲಿ ಆ ಸ್ಥಳದಲ್ಲಿ ಅವಕಾಶ ಇದ್ರೆ ಅನುಮತಿ ನೀಡ್ತೀವಿ. ಯಾವುದೇ ಪಾದಚಾರಿ ರಸ್ತೆಯಲ್ಲಿ ಪುತ್ಥಳಿ ನಿರ್ಮಿಸೋಕೆ ಅವಕಾಶ ಇಲ್ಲ. ಸದ್ಯ ಚಾಮರಾಜಪೇಟೆಯಲ್ಲಿ ಪುತ್ಥಳಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿರುವ ಮಾಹಿತಿಯನ್ನ ಇಂಜಿನಿಯರ್ ನೀಡಿದ್ದಾರೆ. ಒಂದು ವೇಳೆ ಪುನಃ ನಿರ್ಮಾಣ ಕಾರ್ಯ ಮುಂದುವರಿಸಿದ್ರೆ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಟಿವಿ9ಗೆ ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.
Published On - 5:16 pm, Wed, 6 July 22