Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಜೈಲಿನಲ್ಲಿದ್ದ ಸ್ನೇಹಿತನ ಬಿಡಿಸಿಕೊಳ್ಳಲು ಮನೆಗೆ ಕನ್ನ ಹಾಕಿದ್ದ ಕುಖ್ಯಾತ ಮನೆಗಳ್ಳರ ಬಂಧನ

ಜೈಲಿನಿಂದ ಹೊರಬರಲು ಜಾಮೀನು ಪಡೆಯಬೇಕು. ಹೀಗೆ ಜಾಮೀನು ಪಡೆಯಲು ವಕೀಲರಿಗೆ ಹಣ ನೀಡಬೇಕು ಎನ್ನುವ ಕಾರಣಕ್ಕೆ ಕಳ್ಳತನ ಮಾಡುತ್ತಿದ್ದರು.

Crime News: ಜೈಲಿನಲ್ಲಿದ್ದ ಸ್ನೇಹಿತನ ಬಿಡಿಸಿಕೊಳ್ಳಲು ಮನೆಗೆ ಕನ್ನ ಹಾಕಿದ್ದ ಕುಖ್ಯಾತ ಮನೆಗಳ್ಳರ ಬಂಧನ
ಸಾಂಕೇತಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 06, 2022 | 2:34 PM

ಬೆಂಗಳೂರು: ಜೈಲಿನಲ್ಲಿ ಇದ್ದವರಿಗೆ ಜಾಮೀನು ಕೊಡಿಸಲೆಂದು ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜೈಲಿನಿಂದ ಹೊರಬರಲು ಜಾಮೀನು ಪಡೆಯಬೇಕು. ಹೀಗೆ ಜಾಮೀನು ಪಡೆಯಲು ವಕೀಲರಿಗೆ ಹಣ ನೀಡಬೇಕು ಎನ್ನುವ ಕಾರಣಕ್ಕೆ ಒಳಗಿದ್ದ ಕಳ್ಳರು ಜೈಲಿನಿಂದಲೇ ಸಂಚು ರೂಪಿಸಿ ಕಳ್ಳತನ ಮಾಡಿಸುತ್ತಿದ್ದರು. ಬಂಧಿತರನ್ನು ಶ್ರೀನಿವಾಸ್, ಮಂಜುಳಾ, ಮುಬಾರಕ್ ಅಹ್ಮದ್, ಗಂಗಾಧರಪ್ಪ ಶಾರದಮ್ಮ, ಗಂಗಣ್ಣ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ₹ 25 ಲಕ್ಷ ಮೌಲ್ಯದ 245 ಗ್ರಾಂ ತೂಕದ ಚಿನ್ನದ ಗಟ್ಟಿ 255 ಗ್ರಾಂ ತೂಕದ ಚಿನ್ನಾಭರಣ ಸೇರಿ ಒಟ್ಟು 500 ಗ್ರಾಂ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಸ್ನೇಹಿತರು ಜೈಲು ಸೇರಿದ್ದ ಹಿನ್ನೆಲೆಯಲ್ಲಿ ಅವರನ್ನು ಬಿಡಿಸಿಕೊಳ್ಳಲು ಇವರು ಕಳ್ಳತನಕ್ಕೆ ಇಳಿದಿದ್ದರು. ಆರೋಪಿಗಳ ವಿರುದ್ಧ ಸುಬ್ರಹ್ಮಣ್ಯಪುರ, ಬಸವೇಶ್ವರ ನಗರಮ ರಾಜಗೋಪಾಲನಗರ, ಯಲಹಂಕ ಹಾಗೂ ಕಾಮಾಕ್ಷಿಪಾಳ್ಯ ಸೇರಿ ಹಲವೆಡೆ 20 ಪ್ರಕರಣಗಳು ದಾಖಲಾಗಿವೆ.

ಡ್ರಗ್ಸ್​ ಮಾರುತ್ತಿದ್ದವರ ಸೆರೆ

ವಿಶ್ವವಿದ್ಯಾಲಯ ಮತ್ತು ವಿವಿಧ ಕಾಲೇಜುಗಳಲ್ಲಿ ಡ್ರಗ್ಸ್​ ಮಾರುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀಜಿತ್, ತೇಜೇಶ್ವರಪ್ಪ ಅಲಿಯಾಸ್​​ ಟೋನಿ, ಹರ್ಷಿತ್, ಕುಂಜು ಮೂಸ ಬಂಧಿತರು. ಆಫ್ರಿಕಾ ಮೂಲದ ವ್ಯಕ್ತಿಯಿಂದ ಡ್ರಗ್ಸ್​ ತರಿಸಿಕೊಂಡು ಪ್ರತಿಷ್ಠಿತ ವಿವಿಗಳು, ಕಾಲೇಜುಗಳ ವಿದ್ಯಾರ್ಥಿಗಳಿಗೆ ಡ್ರಗ್ಸ್​​ ಸರಬರಾಜು ಮಾಡುತ್ತಿದ್ದರು. ಬಂಧಿತರಿಂದ 62 ಗ್ರಾಂ ಎಂಡಿಎಂಎ, ಒಂದು ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಆರ್​ಟಿ ನಗರದಲ್ಲಿ 60 ಕೆಜಿ ಗಾಂಜಾ ವಶ

ಡಿಜೆ ಹಳ್ಳಿ ಹಾಗೂ ಆರ್​ಟಿ ನಗರ ವ್ಯಾಪ್ತಿಯಲ್ಲಿ ಗಾಂಜಾ ಮಾಡುತ್ತಿದ್ದ ರೌಡಿ ಶೀಟರ್​ಗಳನ್ನು ಬಂಧಿಸಿರುವ ಪೊಲೀಸರು ಅರವತ್ತು ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಈ ಹಿಂದೆಯೂ ಹಲವು ಕೇಸ್​ಗಳಲ್ಲಿ ಭಾಗಿಯಾಗಿದ್ದರು. ಇರ್ಫಾನ್ ಖಾನ್, ಸೈಯದ್ ನೂರ್, ಅಫ್ಜಲ್ ಖಾನ್ ಬಂಧಿತರು. ಇದೇ ಆರೋಪಿಗಳು ಈ ಹಿಂದೆ ಡಿಜೆ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಒಂದು ಸೇನಾ ವಾಹನಕ್ಕೆ ಬೆಂಕಿ ಹಾಕಿದ್ದರು. ಒಡಿಶಾ ದಿಂದ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದರು.

ನೌಕಾನೆಲೆಗೆ ನುಗ್ಗಲು ಯತ್ನಿಸಿದವ ಸೆರೆ

ಕಾರವಾರ: ನಕಲಿ ದಾಖಲೆ ನೀಡಿ ನೌಕಾನೆಲೆಗೆ ನುಗ್ಗಲು ಯತ್ನಿಸಿದ ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಎಸ್​.ಆರ್.ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಕದಂಬ ನೌಕಾನೆಲೆಗೆ ನುಗ್ಗಲು ಯತ್ನಿಸಿದ್ದ ಆರೋಪಿಯು ತನ್ನನ್ನು ತಾನು ನೌಕಾಪಡೆಯ ಪ್ರೊಬೆಷನರಿ ಸಬ್ ಲೆಫ್ಟಿನೆಂಟ್ ಎಂದು ಪರಿಚಯ ಮಾಡಿಕೊಂಡಿದ್ದ. ಆದರೆ ದಾಖಲೆ ಪರಿಶೀಲಿಸಿದಾಗ ನಕಲಿ ಎಂದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ನೌಕಾಪಡೆ ಸಿಬ್ಬಂದಿಯು ಆರೋಪಿಯನ್ನು ಕಾರವಾರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಬುದ್ಧಿ ಹೇಳಿದ್ದಕ್ಕೆ ಬೈಕ್​ಗೆ ಬೆಂಕಿ ಬೆಂಗಳೂರು: ವಿಜಯನಗರದ ಪೈಪ್​ಲೈನ್ ಪ್ರದೇಶದಲ್ಲಿ ಶಾಂತರಾಮ್ ಎಂಬುವವರ ಎರಡು ಸ್ಕೂಟರ್​ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಮನೆ ಮುಂದೆ ಗಾಂಜಾ ಸೇದದಂತೆ ಎಚ್ಚರಿಸಿದ್ದಕ್ಕೆ ಕಿಡಿಗೇಡಿಗಳು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಕೆಪಿ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಶಾಂತಾರಾಮ್ ಅವರಿಗೆ ಸೇರಿದ್ದ ಎರಡು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಸುಟ್ಟ ಬೈಕ್ ಕಂಡು ಮಾಲೀಕರಾದ ನೇತ್ರಾವತಿ ಕಣ್ಣೀರು ಹಾಕಿದರು. ಬುಟ್ಟಿ ಹೊಲಿದು ಬೈಕ್ ಖರೀದಿ ಮಾಡಿದ್ದೆವು. ವಾಹನ ಖರೀದಿಸಿ ಇನ್ನೂ 6 ತಿಂಗಳಷ್ಟೇ ಆಗಿದೆ. ಇಂದಿಗೂ ಲೋನ್ ಕಟ್ಟುತ್ತಿದ್ದೇವೆ. ಮನೆ ಮುಂದೆ ಕುಳಿತು ಏಳೆಂಟು ಹುಡುಗರು ಸಿಗರೇಟ್, ಗಾಂಜಾ ಸೇದುತ್ತಾ, ಹೆಂಡ ಕುಡಿಯುತ್ತಾ ಗಲಾಟೆ ಮಾಡುತ್ತಿದ್ದರು. ಮನೆಗೆ ಹೊಗೆ ಬರುತ್ತೆ ಇಲ್ಲಿ ಸಿಗರೇಟ್ ಸೇದಬೇಡಿ ಅಂದಿದ್ದೆ. ಅದೇ ತಪ್ಪಾಗಿದೆ, ಪೆಟ್ರೊಲ್ ಸುರಿದು ಗಾಡಿಗೆ ಬೆಂಕಿ ಹಚ್ಚಿದ್ದಾರೆ ಎಂದು ವಿವರಿಸಿದರು.

ಐಎಎಸ್ ಅಧಿಕಾರಿ ಮನೆಯಲ್ಲಿ ಹಲವು ದಾಖಲೆ ಪತ್ತೆ

ಬೆಂಗಳೂರು: ಐಎಎಸ್‌ ಅಧಿಕಾರಿ, ಬೆಂಗಳೂರಿನ ಮಾಜಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರ ಮನೆಯಲ್ಲಿ ಹಲವು ದಾಖಲೆಗಳು ಪತ್ತೆಯಾಗಿವೆ. ಅವರ ಮನೆಯಲ್ಲಿ ಸಿಕ್ಕ ಕಾಗದ ಪತ್ರಗಳನ್ನು ಎಸಿಬಿ ತನ್ನ ವಶಕ್ಕೆ ಪಡೆದಿದೆ. ನಿನ್ನೆಯಷ್ಟೇ ಮಂಜುನಾಥ್​ ಅವರ​ ಫ್ಲ್ಯಾಟ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಜೆ.ಮಂಜುನಾಥ್ ಅವರಿ​ಗೆ ಸೇರಿದ ಬ್ಯಾಂಕ್ ಖಾತೆ, ಕುಟುಂಬದವರ ಬ್ಯಾಂಕ್ ಖಾತೆ ವಿವರಗಳನ್ನು ಎಸಿಬಿ ಸಂಗ್ರಹಿಸಿದೆ. ಇಂದು ಆಸ್ತಿ ಪತ್ರದ ದಾಖಲೆ, ಬ್ಯಾಂಕ್​ ವಿವರ ಪರಿಶೀಲಿಸಲಾಯಿತು.

ಮದ್ಯಕಳ್ಳರ ಬಂಧನ

ದಾವಣಗೆರೆ: ಹರಿಹರ ಮತ್ತು ದಾವಣಗೆರೆ ನಗರಗಳ ವೈನ್​ಶಾಪ್​ಗಳಿಂದ ಮದ್ಯ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಹರಿಹರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹ 1.35 ಲಕ್ಷ ನಗದು, ಎಳು ಲಕ್ಷ ಬೆಲೆ ಬಾಳುವ ಬುಲೆರೋ ವಾಹನ ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರೂ ಹರಿಹರ ಹಾಗೂ ದಾವಣಗೆರೆ ‌ನಗರದ ವೈನ್​ಶಾಪ್​ಗಳನ್ನೇ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದರು. ಹರಿಹರ ತಾಲೂಕಿನ ಕೊಂಡಜ್ಜಿ‌ ಗ್ರಾಮದ ವೈನ್ ಶಾಪ್​ ಕಳವು ಪ್ರಕರಣದಲ್ಲಿ ಸಿಕ್ಕಿಬಿದ್ದರು.

ಲ್ಯಾಪ್​ಟಾಪ್ ಕಳ್ಳರ ಬಂಧನ

ನೆಲಮಂಗಲ: ನೂರಾರು ಲ್ಯಾಪ್‌ಟಾಪ್‌ಗಳ್ನು ಕಳವು ಮಾಡಿದ್ದ ಆರೋಪಿಗಳನ್ನು ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪಾದರಾಯನಪುರದ ಅಸ್ಲಮ್ ಪಾಷ (35) ಹಾಗೂ ಜೆಪಿ ನಗರದ ಯಾಸೀನ್ ಷರೀಫ್ (33) ಬಂಧಿತರು. ಆನ್‌ಲೈನ್‌ನಲ್ಲಿ ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಮಾರಾಟ ಮಾಡುವವರನ್ನೇ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಜೂನ್ 14ರಂದು ಲ್ಯಾಪ್​ಟಾಪ್ ಖರೀದಿಸುವ ನೆಪದಲ್ಲಿ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿದ್ದ ಗೋಡೋನ್​ಗೆ ಹೋಗಿದ್ದ ಅಸ್ಲಾಂ ಪಾಷ, ಜೂನ್ 17ರ ರಾತ್ರಿ ತನ್ನ ಸ್ನೇಹಿತ ಯಾಸೀನ್ ಷರೀಫ್‌ನೊಂದಿಗೆ ಬಂದು ಕೃತ್ಯ ಎಸಗಿದ್ದಾನೆ. ರಾಡ್‌ನಿಂದ ಗೋಡನ್ ಬೀಗ ಮುರಿದು ಜುಲ್ಫಿಕಾರ್ ಎನ್ನುವವರಿಗೆ ಸೇರಿದ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿದ್ದಾನೆ. ಕೊರೊನ ಸಂಕಷ್ಟ ಸಂದರ್ಭದಲ್ಲಿ ಮಾಡಿಕೊಂಡಿದ್ದ ಸಾಲ ತೀರಿಸಲು ಬೇರೆ ಮಾರ್ಗ ಕಾಣದೇ ಈ ಕೃತ್ಯ ಎಸಗಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಸುಮಾರು ಆರು ಲಕ್ಷ ಬೆಲೆಬಾಳುವ ಲ್ಯಾಪ್‌ಟಾಪ್​ಗಳು, ಒಂದು ಕಾರು, ಮೊಬೈಲ್ ಜಪ್ತಿ ಮಾಡಿದ್ದಾರೆ.

Published On - 2:34 pm, Wed, 6 July 22

‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್