ರಾಜಸ್ಥಾನ ಮತ್ತು ಬೆಂಗಳೂರು ಪೊಲೀಸರ​ ಜಂಟಿ ಕಾರ್ಯಾಚರಣೆ: ಉದಯಪುರದಲ್ಲಿ ಗುಂಡು ಹಾರಿಸಿ 4 ದರೋಡೆಕೋರರ ಬಂಧನ, 3 ಕೆಜಿ ಚಿನ್ನ ವಶ

ರಾಜಸ್ಥಾನದ ಉದಯಪುರದಲ್ಲಿ,  ಬೆಂಗಳೂರು ನಗರದ ಎಲೆಕ್ಟ್ರಾನಿಕ್​ಸಿಟಿ ಠಾಣೆ ಪೊಲೀಸರು ಮತ್ತು ರಾಜಸ್ಥಾನ  ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ರಾಜಸ್ಥಾನ ಮತ್ತು ಬೆಂಗಳೂರು ಪೊಲೀಸರ​ ಜಂಟಿ ಕಾರ್ಯಾಚರಣೆ: ಉದಯಪುರದಲ್ಲಿ ಗುಂಡು ಹಾರಿಸಿ 4 ದರೋಡೆಕೋರರ ಬಂಧನ, 3 ಕೆಜಿ ಚಿನ್ನ ವಶ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on: Jul 06, 2022 | 7:35 PM

ಬೆಂಗಳೂರು/ ರಾಜಸ್ಥಾನ: ರಾಜಸ್ಥಾನದ (Rajsthan) ಉದಯಪುರದಲ್ಲಿ,  ಬೆಂಗಳೂರು (Bengaluru) ನಗರದ ಎಲೆಕ್ಟ್ರಾನಿಕ್​ಸಿಟಿ (Electronic City) ಠಾಣೆ ಪೊಲೀಸರು (Police) ಮತ್ತು ರಾಜಸ್ಥಾನ  ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಲೆಕ್ಟ್ರಾನಿಕ್​ಸಿಟಿ ಠಾಣೆ ಪೊಲೀಸರು ದರೋಡೆಕೋರರ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ (Arrested). ಬೆಂಗಳೂರಿನ ಹಲವೆಡೆ ದರೋಡೆ ಮಾಡಿದ್ದ ಕುಖ್ಯಾತ  ದರೋಡೆಕೋರರ ಗುಂಪನ್ನು ಬಂಧಿಸಲು ಕಾರ್ಯಾಚರಣೆಗೆ ಇಳಿದಿದ್ದ  ಪೊಲೀಸರ ಮೇಲೆ ಗ್ಯಾಂಗ್​ ಗುಂಡುಹಾರಿಸಿದೆ.

ಇದನ್ನು ಓದಿ: Crime News: ಬಕ್ರೀದ್​ಗಾಗಿ 250 ಮೇಕೆ ಕದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್​..!

ಈ ವೇಳೆ  ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ‌ ಪೊಲೀಸರು ಪ್ರತಿದಾಳಿ ನಡೆಸಿ ನಾಲ್ವರು ದರೋಡೆಕೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ 3 ಕೆಜಿ ಚಿನ್ನ, 30 ಕೆಜಿ ಬೆಳ್ಳಿ, ಬಂದೂಕು, ಸಜೀವ ಗುಂಡುಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಪ್ರಾಣ ಪಣಕ್ಕಿಟ್ಟು ಎಲೆಕ್ಟ್ರಾನಿಕ್ ಸಿಟಿ‌ ಪೊಲೀಸರು ನಡೆಸಿದ ಕಾರ್ಯಾಚರಣೆಗೆ ರಾಜಸ್ಥಾನ ಪೊಲೀಸ್​​ ಅಭಿನಂದಿಸಿದ್ದಾರೆ.

ಕೆರೂರಿನ ಮಾರ್ಕೆಟ್​ನಲ್ಲಿ ಗುಂಪು ಘರ್ಷಣೆ, ಇಬ್ಬರಿಗೆ ಚಾಕು ಇರಿತ

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣ ಕೆರೂರಿನ ಮಾರ್ಕೆಟ್​ನಲ್ಲಿ ಗುಂಪು ಘರ್ಷಣೆ ಸಂಭವಿಸಿ ಇಬ್ಬರಿಗೆ ಚಾಕು ಇರಿಯಲಾಗಿದೆ. ದುಷ್ಕರ್ಮಿಗಳು ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ ಎಂಬುವರಿಗೆ ಚಾಕು ಇರಿದಿದ್ದಾರೆ. ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿ: 5 ದಿನಗಳ ಹಿಂದೆಯೇ ಚಂದ್ರಶೇಖರ್ ಗುರೂಜಿ ಕೊಲೆಯ ಸುಳಿವು ನೀಡಿದ್ದ ಆರೋಪಿ! ಫೇಸ್​​ಬುಕ್​ ಪೋಸ್ಟ್​​ನಲ್ಲಿ ಏನಿದೆ?

ಅಲ್ಲದೆ ಕಿಡಿಗೇಡಿಗಳು ಒಂದು ಕೋಮಿನವರಿಗೆ ಸೇರಿದ ತರಕಾರಿಗಳನ್ನು ರಸ್ತೆಗೆ ಚೆಲ್ಲಿ, 2 ತಳ್ಳುವಗಾಡಿಗೆ ಬೆಂಕಿಹಚ್ಚಿದ್ದಾರೆ. ಗುಂಪು ಘರ್ಷಣೆ ವೇಳೆ 10 ಅಂಗಡಿ ಧ್ವಂಸವಾಗಿದ್ದು, 5 ಬೈಕ್​​ಗಳು ಜಖಂಗೊಂಡಿವೆ. ಕೆರೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್