ಟ್ರಾಫಿಕ್​ನಿಂದ ತಪ್ಪಿಸಿ ಜನರನ್ನು ತಂಪಾಗಿ ಕರೆದೊಯ್ಯುವ ನಮ್ಮ ಮೆಟ್ರೋ ಆರಂಭವಾಗಿ ಇಂದಿಗೆ 13 ವರ್ಷ

|

Updated on: Oct 20, 2024 | 3:09 PM

ನಮ್ಮ ಮೆಟ್ರೋ ಶುರುವಾಗಿ 13 ವಸಂತಗಳು ಕಳೆದಿವೆ, ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತಿದ್ದ ಬೆಂಗಳೂರು ಜನತೆಗೆ ಬೆಳದಿಂಗಳಂತೆ ಬಂದಿದ್ದು ನಮ್ಮ ಮೆಟ್ರೋ, ನಿತ್ಯ ಸಾವಿರಾರು ವಾಹನಗಳ ನಡುವೆ ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಜನರಿಗೆ ಕಡಿಮೆ ಖರ್ಚಿನಲ್ಲಿ ತಂಪಾಗಿ ಎಸಿಯಲ್ಲಿ ಕೂತು ಹೋಗಬಹುದಾದ ಅವಕಾಶ ಮೆಟ್ರೋದಿಂದ ಸಿಕ್ಕಿತ್ತು.

ಟ್ರಾಫಿಕ್​ನಿಂದ ತಪ್ಪಿಸಿ ಜನರನ್ನು ತಂಪಾಗಿ ಕರೆದೊಯ್ಯುವ ನಮ್ಮ ಮೆಟ್ರೋ ಆರಂಭವಾಗಿ ಇಂದಿಗೆ 13 ವರ್ಷ
ನಮ್ಮ ಮೆಟ್ರೋ
Image Credit source: Deccan Herald
Follow us on

ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತಿದ್ದ ಬೆಂಗಳೂರು ಜನತೆಗೆ ಬೆಳದಿಂಗಳಂತೆ ಬಂದಿದ್ದು ನಮ್ಮ ಮೆಟ್ರೋ, ನಿತ್ಯ ಸಾವಿರಾರು ವಾಹನಗಳ ನಡುವೆ ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಜನರಿಗೆ ಕಡಿಮೆ ಖರ್ಚಿನಲ್ಲಿ ತಂಪಾಗಿ ಎಸಿಯಲ್ಲಿ ಕೂತು ಹೋಗಬಹುದಾದ ಅವಕಾಶ ಮೆಟ್ರೋದಿಂದ ಸಿಕ್ಕಿತ್ತು. 2011ರ ಅಕ್ಟೋಬರ್ 20ರಂದು ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭವಾಯಿತು, ನಗರದ ಎಲ್ಲಾ ದಿಕ್ಕಿನಲ್ಲಿ ಮೆಟ್ರೋ ಇಲ್ಲದಿದ್ದರೂ ಮೆಟ್ರೋದಿಂದ ಎಷ್ಟು ಅನುಕೂಲವಿದೆ ಎಂದು ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ಬೇಕಿರಲಿಲ್ಲ.

ಎಲ್ಲಾ ದಿಕ್ಕಿಗೂ ಬೇಗ ಬೇಗ ಮೆಟ್ರೋ ಸೇವೆ ಆರಂಭವಾಗಲಿ ಎಂದು ಎಷ್ಟೋ ಮಂದಿ ಅದರಲ್ಲೂ ಸಿಲ್ಕ್​ ಬೋರ್ಡ್​, ವೈಟ್​ ಫೀಲ್​ಗೆ ಹೋಗುತ್ತಿದ್ದ ಜನರಂತೂ ಹೇಳಿಕೊಂಡಿದ್ದುಂಟು, ಇದೀಗ ವೈಟ್​ಫೀಲ್ಡ್​ ಮೆಟ್ರೋ ಆಗಿದೆ, ಕೆಲವೇ ದಿನಗಳಲ್ಲಿ ಸಿಲ್ಕ್​ ಬೋರ್ಡ್​ವರೆಗೂ ಮೆಟ್ರೋ ಶುರುವಾಗಲಿದೆ. ಜನರು ಸಂಪೂರ್ಣವಾಗಿ ಟ್ರಾಫಿಕ್​ನಿಂದ ಬಿಡುಗಡೆ ಪಡೆಯುವುದಂತೂ ಸತ್ಯ.

ಪ್ರತಿ ನಿತ್ಯ ನಮ್ಮ ಮೆಟ್ರೋದಲ್ಲಿ 8 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಿದ್ದಾರೆ. 2011 ರ ಅಕ್ಟೋಬರ್ 20ರಂದು ಬೆಂಗಳೂರಿನಲ್ಲಿ ಹಳಿಗೆ ಇಳಿದಿದ್ದ ನಮ್ಮ ಮೆಟ್ರೋ ಇವತ್ತಿಗೆ 13 ವರ್ಷ ಪೂರ್ಣಗೊಳಿಸಿದೆ. ಎಂ.ಜಿ. ರಸ್ತೆಯಿಂದ ಬೈಯ್ಯಪ್ಪನಹಳ್ಳಿವರೆಗೆ ಮೊದಲಿಗೆ ಮೆಟ್ರೋ ಸಂಚಾರ ಆರಂಭ ಆಗಿತ್ತು. 6 ಕಿ.ಮೀ. ಮಾರ್ಗದಲ್ಲಿ ಮೊದಲ ಬಾರಿಗೆ ಮೆಟ್ರೋ ಸಂಚರಿಸಿತ್ತು.

ಮತ್ತಷ್ಟು ಓದಿ: ನಮ್ಮ ಮೆಟ್ರೋ ಟಿಕೆಟ್​ ದರ ಏರಿಕೆಗೆ ಅಭಿಪ್ರಾಯ ಸಂಗ್ರಹ ಅವಧಿ ವಿಸ್ತರಣೆ

ಡಿವಿ ಸದಾನಂದಗೌಡರು ಚಾಲನೆ ಕೊಟ್ಟಿದ್ದರು
ಅಂದು ಮುಖ್ಯಮಂತ್ರಿಯಾಗಿದ್ದ ಡಿ.ವಿ ಸದಾನಂದ ಗೌಡ (Dv Sadananda Gowda) ರವರಿಂದ ಮೊದಲ ಹಂತವಾದ ಬೈಯ್ಯಪ್ಪನಹಳ್ಳಿಯಿಂದ ಮಹಾತ್ಮ ಗಾಂಧಿ ರಸ್ತೆಯವರೆಗೆ ಉದ್ಘಾಟನೆಗೊಂಡು ಇಂದು (ಅ.20) ಒಟ್ಟು 56.1 ಕಿ.ಮೀ ವರೆಗೆ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಪ್ರಮುಖ ಸ್ಥಳಗಳಿಗೆ ನಮ್ಮ ಮೆಟ್ರೋ ಕಾರ್ಯಾಚರಣೆ ನಡೆಸಲಿದೆ.

ಆಗಸ್ಟ್ 14 ರಂದು ನಮ್ಮ ಮೆಟ್ರೋ ತನ್ನ ಅತಿ ಹೆಚ್ಚು ದೈನಂದಿನ ಪ್ರಯಾಣಿಕರ ಸಂಖ್ಯೆ 9,17,365 ಅನ್ನು ದಾಖಲಿಸಿದೆ. ಒಟ್ಟು 73.81 ಕಿಮೀಗೆ ಮೆಟ್ರೋ ವ್ಯಾಪ್ತಿಯನ್ನು ವಿಸ್ತರಿಸಿದೆ.

ಭಾರತ ಸರ್ಕಾರ, ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆ
ಬೆಂಗಳೂರು ಮೆಟ್ರೋ ರೈಲು ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್‌ ಲಿಮಿಟೆಡ್‌ (BMRCL) ವಹಿಸಿಕೊಂಡಿದ್ದು, ಇದು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳ ಜಂಟಿ ಸಾಹಸವಾಗಿದೆ.
ಇಂದು, ಇದು 72.17 ಕಿಮೀ ವ್ಯಾಪಿಸಿರುವ ಭಾರತದ ಎರಡನೇ ಅತಿದೊಡ್ಡ ಮೆಟ್ರೋ ಜಾಲವಾಗಿ ಬೆಳೆದಿದೆ. 97.84 ಕಿಮೀ ಮೆಟ್ರೋ ಮಾರ್ಗಗಳು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ ಮತ್ತು ಹೆಚ್ಚುವರಿಯಾಗಿ 81.64 ಕಿಮೀ ಹೊಸ ಮಾರ್ಗಗಳನ್ನು ಪ್ರಸ್ತಾಪಿಸುವುದರೊಂದಿಗೆ ಬೆಳವಣಿಗೆ ಮುಂದುವರೆದಿದೆ.

ಹಂತ ಹಂತವಾಗಿ ನಮ್ಮ ಮೆಟ್ರೋ ವಿಸ್ತರಣೆ ಮಾಡುತ್ತಿರುವ ಬಿಎಂಆರ್‌ಸಿಎಲ್ ಒಂದೆರಡು ವರ್ಷದಲ್ಲಿ ನಮ್ಮ ಮೆಟ್ರೋ ಜಾಲವನ್ನು 200 ಕೀಲೋ ಮೀಟರ್‌ಗೆ ಹೆಚ್ಚಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಆರ್‌.ವಿ ರಸ್ತೆಯಿಂದ ಬೊಮ್ಮಸಂದ್ರದ ಹಳದಿ ಮಾರ್ಗದಲ್ಲಿ ಇದೇ ಮೊದಲ ಬಾರಿಗೆ ಚಾಲಕರಹಿತ ರೈಲು ಓಡಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಸಹ ಎಲ್ಲ ಪ್ರಾಯೋಗಿಕ, ಸಿಗ್ನಲ್, ಸುರಕ್ಷತೆ ತಪಾಸಣೆ ಪೂರ್ಣಗೊಂಡಿದೆ.

 

ಬೆಂಗಳೂರಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ