ಬೆಂಗಳೂರಿನ ಪಬ್​​ಗಳಲ್ಲಿ ಎಣ್ಣೆ, ಡಿಜೆ ಜೊತೆ ಮತ್ತೊಂದು ಮನರಂಜನೆ ಕಾರ್ಯಕ್ರಮ: ಏನದು?

| Updated By: ವಿವೇಕ ಬಿರಾದಾರ

Updated on: Oct 06, 2023 | 8:24 AM

ಇತ್ತೀಚಿಗೆ ಬೆಂಗಳೂರಿನ ಕೆಲವು ಪಬ್​​ಗಳಲ್ಲಿ "ರಸಪ್ರಶ್ನೆ ರಾತ್ರಿ" ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಪ್ರಶ್ನೆಗಳನ್ನು ಕೇವಲ ಉತ್ತಮ ಆಹಾರ ಮತ್ತು ಪಾನೀಯಗಳ ಬಗ್ಗೆ ಕೇಳುವುದಿಲ್ಲ. ಎಲ್ಲದರ ಬಗ್ಗೆಯೂ ಕೇಳಲಾಗುತ್ತದೆ.

ಬೆಂಗಳೂರಿನ ಪಬ್​​ಗಳಲ್ಲಿ ಎಣ್ಣೆ, ಡಿಜೆ ಜೊತೆ ಮತ್ತೊಂದು ಮನರಂಜನೆ ಕಾರ್ಯಕ್ರಮ: ಏನದು?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು ಅ.06: ಪಬ್​​ಗಳೆಂದರೇ (PUB) ಮೊದಲು ನೆನಪಾಗೋದು ಲೀಟರ್​ಗಟ್ಟಲೆ ಕುಡಿಯಲು ಸಿಗುವ ಬಿಯರ್​​. ಹಾಗೆ ಜಗಮಗಿಸುವ ಲೈಟ್​​, ಡಿಜೆ ಹಾಡುಗಳು ಮತ್ತು ಕುಣಿಯುವ ಯುವಕರು. ಕೆಲವೊಂದು ಪಬ್​ಗಳಲ್ಲಿ ಊಟವೂ ಸಿಗುತ್ತದೆ. ಪಬ್​ಗಳೆಂದರೇ ಇಷ್ಟಕ್ಕೆ ಸೀಮತವಾಗಿಬಿಟ್ಟಿವೆ ಎಂದು ಸಾಕಷ್ಟು ಜನರು ಬೇಸರ ಹೊರಹಾಕುತ್ತಾರೆ. ಆದರೆ ಈ ಮಧ್ಯೆ ಪಬ್​​ಗಳಲ್ಲಿ ಹೊಸದೊಂದು ಟ್ರೆಂಡ್​​​ ಶರುವಾಗಿದೆ. ಈ ಟ್ರೆಂಡ್​ ಎಲ್ಲ ವಯಸ್ಕರರನ್ನು ಆಕರ್ಷಿಸುತ್ತಿದೆ. ಅದೇನು ಹೊಸ ಟ್ರೆಂಡ್​ ಇಲ್ಲಿದೆ ಓದಿ.

ಇತ್ತೀಚಿಗೆ ಬೆಂಗಳೂರಿನ ಕೆಲವು ಪಬ್​​ಗಳಲ್ಲಿ “ರಸಪ್ರಶ್ನೆ ರಾತ್ರಿ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ರಸಪ್ರಶ್ನೆ ರಾತ್ರಿಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿವೆ. ಈ ವಿಷಯಾಧಾರಿತ ರಸಪ್ರಶ್ನೆಗಳು ಎಲ್ಲಾ ವಯಸ್ಸಿನ ಪೋಷಕರನ್ನು ಸೆಳೆಯುತ್ತಿವೆ, ವಾರದಲ್ಲಿ ವಿಭಿನ್ನ ರೀತಿಯ ಮನರಂಜನೆಯನ್ನು ಒದಗಿಸುತ್ತಿವೆ.

ಈ ಬಗ್ಗೆ ಸುರೇಶ್ ಮತ್ತು ಮಾಯಾ (ಹೆಸರು ಬದಲಾಯಿಸಲಾಗಿದೆ) ದಂಪತಿ ಮಾತನಾಡಿ “ಸಮಾನ್ಯವಾಗಿ ಪಬ್​​ಗಳಿಗೆ ವೀಕ್​ಎಂಡ್​​​ ಸಮಯದಲ್ಲಿ ಹೋಗುತ್ತಾರೆ. ಆದರೆ ನಾವು ಮಿಡ್​ವೀಕ್​​ನಲ್ಲೇ ಪಬ್​​ಗಳಿಗೆ ಹೋಗುತ್ತೇವೆ. ಪ್ರತಿ ಬುಧವಾರ ನಾವು ಪಬ್​ಗೆ ಹೋಗುತ್ತೇವೆ. ಅಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ. ಮೊದಲಿಗೆ ಇದನ್ನು ಕಂಡು ಆಶ್ಚರ್ಯವಾಯಿತು ಮತ್ತು ಕೂತೂಹಲ ಮೂಡಿಸಿತು. ಹೀಗಾಗಿ ಪ್ರತಿ ಬುಧವಾರ ನಾವು ಪಬ್​​ಗೆ ಹೋಗುತ್ತೇವೆ” ಎಂದು ಹೇಳಿದರು.

ಪ್ರಶ್ನೆಗಳನ್ನು ಕೇವಲ ಉತ್ತಮ ಆಹಾರ ಮತ್ತು ಪಾನೀಯಗಳ ಬಗ್ಗೆ ಕೇಳುವುದಿಲ್ಲ. ಎಲ್ಲದರ ಬಗ್ಗೆಯೂ ಕೇಳಲಾಗುತ್ತದೆ. ಇದರಿಂದ ಸಮಾನ್ಯ ಜ್ಞಾನ ವೃದ್ಧಿಯಾಗುತ್ತದೆ ಮತ್ತು ನಮ್ಮ ಮಿದುಳು ಚುರುಕಾಗುತ್ತದೆ ಎಂದು ದಂಪತಿ ಹೇಳಿದರು.

ಇದನ್ನೂ ಓದಿ: ಆರೋಗ್ಯ ಸರಿ ಇಲ್ಲ ಎಂದು ರಜೆ ಪಡೆದು, ಪಬ್​ಗೆ ಹೋಗಿ ಕಂಠಪೂರ್ತಿ ಕುಡಿದು, ಪೊಲೀಸ್ ಅಧಿಕಾರಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ

ಅಲ್ಲದೆ ಕ್ರೈಸ್ಟ್ ಡೀಮ್ಡ್-ಟು-ಬಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ದಿವ್ಯ (21) ಎಂಬುವರು ಈ ರಸಪ್ರಶ್ನೆ ರಾತ್ರಿಗಳಲ್ಲಿ ತನ್ನ ಸ್ನೇಹಿತರ ಜೊತೆಗೂಡಿ ಪಬ್​​​ಗಳಿಗೆ ಹೋಗುತ್ತಾರೆ. ಅಲ್ಲಿ ತನ್ನ ಸ್ನೇಹಿತರೊಂದಿಗೆ ಸೇರಿ ಪಬ್​​ನಲ್ಲಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಈ ಸಮಯದಲ್ಲಿ ಡ್ರಿಂಕ್ಸ್​ ಮಾಡಲೇಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಈ ಕಾರ್ಯಕ್ರಮ ಎಲ್ಲ ವಯಸ್ಸಿನ ಜನರನ್ನು ಆಕರ್ಷಿಸುತ್ತಿದೆ.

ಇಂದಿರಾನಗರದಲ್ಲಿರುವ 21st ಅಮೆಂಡ್​​ಮೆಂಟ್​ ಗ್ಯಾಸ್ಟ್ರೋಬಾರ್‌ನಲ್ಲಿ, ಪ್ರತಿ ಬುಧವಾರ ವಿಷಯಾಧಾರಿತ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ ಮಿಡ್‌ವೀಕ್ ತುಂಬಾ ರೋಮಾಂಚನಕಾರಿಯಿಂದ ಕೂಡಿರುತ್ತದೆ ಎಂದು ಬಾರ್​ ಮಾಲೀಕರು ತಿಳಿಸಿದ್ದಾರೆ.

ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಟ್ರಿಪ್ಪಿ ಗೋಟ್ ಕೆಫೆಯಲ್ಲಿ, ರಸಪ್ರಶ್ನೆ ರಾತ್ರಿಯು ಸಾಕಷ್ಟು ಕುತೂಹಲದಿಂದ ಕೂಡಿರುತ್ತದೆ. ಈ ಬಗ್ಗೆ ಕೆಫೆಯ ಮ್ಯಾನೇಜರ್ ಅರಿಜಿತ್ ಬ್ಯಾನರ್ಜಿ ಮಾತನಾಡಿ ರಸಪ್ರಶ್ನೆ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇದು ನಂಬಲಸಾಧ್ಯವಾಗಿತ್ತು – ನಮ್ಮ ಗ್ರಾಹಕರ ಪ್ರತಿಕ್ರಿಯೆಯು ನಮ್ಮನ್ನು ಸಂತೋಷ ನೀಡಿದೆ. ನಾವು ಈ ತಿಂಗಳು ಇನ್ನೊಂದು ಸುತ್ತಿಗೆ ಸಜ್ಜಾಗುತ್ತಿದ್ದೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:42 am, Fri, 6 October 23