ಬೆಂಗಳೂರು: ಒಕ್ಕಲಿಗರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ. ಒಕ್ಕಲಿಗರು ಅಷ್ಟೇನು ಚೀಪ್ ಅಲ್ಲ, ಎಚ್ಚರಿಕೆ ಕೊಡುತ್ತಿದ್ದೇನೆ ಎಂದು ಕಂದಾಯ ಸಚಿವ ಆರ್ ಅಶೋಕ್ (R Ashok) ಹೇಳಿಕೆ ನೀಡಿದ್ದಾರೆ. ಪದೇಪದೆ ಒಕ್ಕಲಿಗ ಜಾತಿ ವಿಚಾರ ಬೀದಿಗೆ ತಂದು ರಂಪಾಟ ಮಾತನಾಡುತ್ತಿರುವುದು ನಮ್ಮ ಎಲ್ಲಾ ಮಠಾಧೀಶರಿಗೆ ನೋವಾಗಿದೆ. ರಾಜಕೀಯಕ್ಕಾಗಿ ಒಕ್ಕಲಿಗ ಸಮುದಾಯ ದುರ್ಬಳಕೆ ಆಗುತ್ತಿದೆ. ಡಿಕೆ ಶಿವಕುಮಾರ್ (DK Shivakumar), ಜಮೀರ್ ಅಹ್ಮದ್ಗೆ (Zameer Ahmed ) ಒಳ್ಳೆಯದಾಗಲ್ಲ. ಒಕ್ಕಲಿಗ ಸಮುದಾಯ ಅನ್ನ ಕೊಡುವ ಸಮುದಾಯ. ಕುವೆಂಪು ಹುಟ್ಟಿದ ಸಮುದಾಯದ ನಾವು ವಿಶ್ವಮಾನವರಾಗಬೇಕು. ಕಳೆದು 1 ವಾರದಿಂದ ಪರ ವಿರೋಧ ಚರ್ಚೆಯಿಂದ ನೋವಾಗಿದೆ ಎಂದು ಅಶೋಕ್ ಹೇಳಿದರು.
ನಾನು ಒಬ್ಬ ಒಕ್ಕಲಿಗನಾಗಿ ತುಂಬಾ ನೋವಿನಿಂದ ಹೇಳುತ್ತಿದ್ದೇನೆ. ಒಕ್ಕಲಿಗ ಸಮುದಾಯ ಒಂದು ಪಕ್ಷದ ಸಮುದಾಯ ಅನ್ನಲಾಗಲ್ಲ. ಜಾತಿ ಹೆಸರಿನಲ್ಲಿ ಮುಖ್ಯಮಂತ್ರಿ ಆಗಲು ಸಾಧ್ಯಾನಾ? ಎಂದು ಪ್ರಶ್ನಸಿದ ಅಶೋಕ್, ಒಕ್ಕಲಿಗ ಸಮುದಾಯ ತಮ್ಮದೇ ಬ್ರ್ಯಾಂಡ್ ಎಂದು ಕಚ್ಚಾಡುತ್ತಿದ್ದಾರೆ. ಹೆಚ್ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಜಗಳ ಮಾಡುತ್ತಿದ್ದಾರೆ. ಇವರ ಜಗಳದಲ್ಲಿ ಬಿಜೆಪಿಗೆ ಲಾಭ ಆಗುತ್ತದೆ ಎಂದು ಅಶೋಕ್ ಹೇಳಿದ್ದಾರೆ.
ಇದನ್ನೂ ಓದಿ: ನಿದ್ರೆ ಮಾಡುವಾಗ ಪದೇ ಪದೇ ಎಚ್ಚರವಾಗುತ್ತಾ? ರಾತ್ರಿ ಮಲಗುವ ಮುನ್ನ ಈ ಆಹಾರಗಳನ್ನು ಸೇವಿಸಿ
ಸುಧಾಕರ್ ಹೇಳಿಕೆಗೆ ಡಿಕೆಶಿ ತಿರುಗೇಟು:
ಬಿಜೆಪಿ ನೋಡಿ ಕಾಂಗ್ರೆಸ್ ಪಾಠ ಕಲಿಯಬೇಕು ಎಂಬ ಸಚಿವ ಸುಧಾಕರ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಭ್ರಷ್ಟಾಚಾರ, ಲೂಟಿ ಮಾಡುತ್ತಿರುವ ಪಕ್ಷ. ಬಿಜೆಪಿಯಲ್ಲಿನ ಕೊಳಕನ್ನು ಕಂಡು ಅಲ್ಲಿರುವವರೇ ಅರಗಿಸಿಕೊಳ್ತಿಲ್ಲ. ಈ ವಿಚಾರದ ಬಗ್ಗೆ ಬೇಕಿದ್ದರೆ ಬಿಜೆಪಿ ಕಾರ್ಯಕರ್ತರನ್ನೇ ಕೇಳಿ ಎಂದರು.
ಒಕ್ಕಲಿಗರ ಬಗ್ಗೆ ಜಮೀರ್ ಹೇಳಿಕೆಗೆ ಚಲುವರಾಯಸ್ವಾಮಿ ಆಕ್ಷೇಪದ ಬಗ್ಗೆ ಮಾತನಾಡಿರುವ ಶಿವಕುಮಾರ್, ಜಮೀರ್ ಹೇಳಿಕೆ ಬಗ್ಗೆ ನನ್ನ ಬಳಿ ಯಾರೊಬ್ಬರೂ ಚರ್ಚೆ ಮಾಡಿಲ್ಲ. ಸಂಘಟನೆ ವಿಚಾರ ಬಿಟ್ಟು ನಾನು ಯಾವುದೇ ವಿಚಾರದ ಬಗ್ಗೆ ಮಾತಾಡಿಲ್ಲ ಎಂದರು. ಇದೇ ವೇಳೆ ಜುಲೈ 26ಕ್ಕೆ ಸೋನಿಯಾ ಗಾಂಧಿ ಮತ್ತೆ ಇಡಿ ವಿಚಾರಣೆಗೆ ಕರೆದಿದ್ದಾರೆ. ನನ್ನ ತಾಯಿಗೂ ಸಹ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಈ ವೇಳೆ ನಾನು ನ್ಯಾಯಾಲಯದ ಮೊರೆಹೋಗಿದ್ದೆ. ಆದರೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೋರ್ಟ್ ಮೊರೆಹೋಗಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: Viral Pics: ಪತ್ನಿಯ ಬದಲು ಪತ್ನಿಯ ಮುಖವಾಡದೊಂದಿಗೆ ಪ್ರವಾಸಕ್ಕೆ ತೆರಳಿದ ಪತಿಮಹಾಶಯ; ಕಾರಣ ಏನು ಗೊತ್ತಾ?
Published On - 2:53 pm, Sun, 24 July 22