‘ರಕ್ಕಮ್ಮ’ ಬಂದ ಮರುದಿನವೇ ಬರಲಿದೆ ‘ರಕ್ಕಂ’; ನೈಜ ಘಟನೆ ಆಧಾರಿತ ಚಿತ್ರ ಜುಲೈ 29ಕ್ಕೆ ರಿಲೀಸ್​

‘ರಕ್ಕಂ’ ಚಿತ್ರದ ಮೂಲಕ ರಣಧೀರ್​ ಗೌಡ ಹೀರೋ ಆಗಿದ್ದಾರೆ. ಅವರಿಗೆ ನಟಿ ಅಮೃತಾ ನಾಯರ್​ ಜೋಡಿಯಾಗಿ ನಟಿಸಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಾಗಿದೆ.

‘ರಕ್ಕಮ್ಮ’ ಬಂದ ಮರುದಿನವೇ ಬರಲಿದೆ ‘ರಕ್ಕಂ’; ನೈಜ ಘಟನೆ ಆಧಾರಿತ ಚಿತ್ರ ಜುಲೈ 29ಕ್ಕೆ ರಿಲೀಸ್​
‘ರಕ್ಕಂ’ ಸಿನಿಮಾ ತಂಡ
TV9kannada Web Team

| Edited By: Madan Kumar

Jul 24, 2022 | 1:05 PM

ಚಂದನವನದಲ್ಲಿ (Sandalwood) ಈಗ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಸೂಕ್ತ ರಿಲೀಸ್​ ದಿನಾಂಕಕ್ಕಾಗಿ ಎಲ್ಲ ಚಿತ್ರತಂಡಗಳು ಪ್ರಯತ್ನಿಸುತ್ತಿವೆ. ಜುಲೈ 28ಕ್ಕೆ ‘ರಾ ರಾ ರಕ್ಕಮ್ಮ..’ ಎನ್ನುತ್ತ ‘ವಿಕ್ರಾಂತ್​ ರೋಣ’ ಚಿತ್ರ ಬಿಡುಗಡೆ ಆಗಲಿದೆ. ರಕ್ಕಮ್ಮನ ಆಗಮನವಾದ ಮರುದಿನವೇ ಅಂದರೆ, ಜುಲೈ 29ರಂದು ‘ರಕ್ಕಂ’ ಚಿತ್ರ (Rakkam Movie) ರಿಲೀಸ್​ ಆಗಲಿದೆ. ಒಂದಷ್ಟು ಕಾರಣಗಳಿಂದಾಗಿ ಈ ಸಿನಿಮಾ ಗಮನ ಸೆಳೆಯುತ್ತಿದೆ. ‘ರಕ್ಕಂ’ ಸಿನಿಮಾದಲ್ಲಿ ಕೆಲಸ ಮಾಡಿರುವ ಬಹುತೇಕರು ಹೊಸಬರು. ಆದರೆ ರಂಗಭೂಮಿ, ಕಿರುತೆರೆಯಲ್ಲಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಸೆಂದಿಲ್ ಕೆ.​ ನಿರ್ದೇಶನ ಮಾಡಿದ್ದು, ಸ್ನೇಹಲತಾ ನಿರ್ಮಾಣ ಮಾಡಿದ್ದಾರೆ. ರಣಧೀರ್​ ಗೌಡ (Ranadheer Gowda) ನಾಯಕನಾಗಿ ನಟಿಸಿದ್ದು, ಅವರಿಗೆ ಜೋಡಿಯಾಗಿ ಅಮೃತಾ ನಾಯರ್​ ಅಭಿನಯಿಸಿದ್ದಾರೆ.

‘ರಕ್ಕಂ’ ಚಿತ್ರದ ಮೂಲಕ ರಣಧೀರ್​ ಗೌಡ ಹೀರೋ ಆಗಿದ್ದಾರೆ. ಆದರ್ಶ ಫಿಲ್ಮ್​ ಇನ್ಸ್​ಟಿಟ್ಯೂಟ್ ಮತ್ತು ರಂಗಾಯಣದಲ್ಲಿ ಅಭಿನಯ ಕಲಿತಿರುವ ಅವರು ಸಕಲ ತಯಾರಿಯೊಂದಿಗೆ ಕ್ಯಾಮೆರಾ ಎದುರಿಸಿದ್ದಾರೆ. ನಟನೆ ಮಾತ್ರವಲ್ಲದೇ ನಿರ್ದೇಶನ ವಿಭಾಗದಲ್ಲೂ ಆಸಕ್ತಿ ಹೊಂದಿರುವ ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವನ್ನೂ ಹೊಂದಿದ್ದಾರೆ. ‘ರಂಗ ಎಂಬುದು ನನ್ನ ಪಾತ್ರದ ಹೆಸರು. ಎರಡು ಶೇಡ್​ಗಳಲ್ಲಿ ನಾನು ಅಭಿನಯಿಸಿದ್ದೇನೆ. ಮೊದಲು ಹಳ್ಳಿಯವನಾಗಿ ನಂತರ ನಗರದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತೇನೆ’ ಎಂದು ರಣಧೀರ್ ಗೌಡ ಹೇಳಿದ್ದಾರೆ. ಹಿರಿಯ ಕಲಾವಿದ ನಂಜಪ್ಪ ಬೆನಕ, ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ಮಾಡಲಾಗಿದೆ.

ನಿರ್ದೇಶಕ ಸೆಂದಿಲ್​ ಅವರು ಮೂಲತಃ ರಂಗಭೂಮಿ ಕಲಾವಿದ. ಎನ್​ಎಸ್​ಡಿಯಲ್ಲಿ ತರಬೇತಿ ಪಡೆದುಕೊಂಡ ಬಂದಿರುವ ಅವರು, ಪುನೀತ್ ರಾಜ್‍ಕುಮಾರ್ ನಡೆಸಿಕೊಡುತ್ತಿದ್ದ ‘ಕನ್ನಡದ ಕೋಟ್ಯಧಿಪತಿ’ ಶೋಗಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ‘ಈಗ ಹಂಸಲೇಖ ಜೊತೆ ಕೆಲಸ ಮಾಡುತ್ತಿದ್ದೇನೆ. ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ಇದು ಕೊರೊನಾಗಿಂತ ಮುನ್ನ ನಿರ್ಮಾಣವಾದ ಚಿತ್ರ. ನೋಟ್​ ಬ್ಯಾನ್​ ಮಾಡಿದ ಸಮಯದಲ್ಲಿ ಹುಟ್ಟಿದ ಕಥೆಯನ್ನು ಇಟ್ಟುಕೊಂಡು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಮಾಡಿದ್ದೇವೆ. ‘ರಕ್ಕಂ’ ಎಂದರೆ ಹಣದ ಗಂಟು ಎಂಬ ಅರ್ಥವಿದೆ’ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಶ್ರೀವತ್ಸ ಸಂಗೀತ ನಿರ್ದೇಶನ, ಶಾಮ್​ ಸಾಲ್ವಿನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ ಮಾಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿದ ಈ ಸಿನಿಮಾ ‘ನಮ್ಮ ಹೈಕ್ಳು ಚಿತ್ರ’ ಬ್ಯಾನರ್​ ಮೂಲಕ ತಯಾರಾಗಿದೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada