‘ಅಕಟಕಟ’ ಚಿತ್ರತಂಡಕ್ಕೆ ಸೇರ್ಪಡೆಯಾದ ರಂಗಭೂಮಿ ಹಿನ್ನೆಲೆಯ ಕಲಾವಿದೆ ಶ್ವೇತಾ ಶ್ರೀನಿವಾಸ್
ಶ್ವೇತಾ ಶ್ರೀನಿವಾಸ್ ಅವರು ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರೀಗ ‘ಅಕಟಕಟ’ ಚಿತ್ರದಲ್ಲೊಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
Updated on: May 21, 2022 | 4:59 PM

Shwetha Shrinivas joins Akatakata Kannada movie team

Shwetha Shrinivas joins Akatakata Kannada movie team

ಶ್ವೇತಾ ಶ್ರೀನಿವಾಸ್ ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಪ್ರಶಸ್ತಿಗಳನ್ನು ಪಡೆದಿರುವ ಅವರು ‘ಪಂಚರಂಗಿ’, ‘ಟೋನಿ’, ‘ದ್ಯಾವ್ರೇ’, ‘ಬೆಂಕಿಪಟ್ಟಣ’, ‘ಕೃಷ್ಣಲೀಲಾ’, ‘ಸಂತೆ’, ‘ದೊಡ್ಮನೆ ಹುಡ್ಗ’, ‘ವೆನಿಲಾ’, ‘ನಾತಿಚರಾಮಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಶ್ವೇತಾ ಅವರು ‘ಅಕಟಕಟ’ ಸಿನಿಮಾದಲ್ಲಿ ವನಜಾ ಎಂಬ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಅವರು ಹೆಚ್ಚು ಮಾಹಿತಿ ಬಿಟ್ಟುಕೊಟ್ಟಿಲ್ಲ. ‘ಪ್ರತಿ ಸಿನಿಮಾದಲ್ಲಿಯೂ ನಾನು ವಿಶೇಷವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ‘ಅಕಟಕಟ’ ಚಿತ್ರದಲ್ಲಿಯೂ ಚಾಲೆಂಜಿಂಗ್ ಪಾತ್ರ ಇದೆ’ ಎಂದಿದ್ದಾರೆ ಶ್ವೇತಾ.

‘ಇದೊಂದು ಅಪರೂಪದ ಪಾತ್ರವಾಗಿದ್ದು, ನನ್ನನು ನಾನು ಕಂಡುಕೊಳ್ಳಲು ಈ ಪಾತ್ರ ಸಹಕಾರಿಯಾಗಿದೆ. ಪ್ರತಿಯೊಬ್ಬರಿಗೂ ಇದು ಕನೆಕ್ಟ್ ಆಗುತ್ತದೆ’ ಎಂದು ಶ್ವೇತಾ ಶ್ರೀನಿವಾಸ್ ಹೇಳಿದ್ದಾರೆ. ಸಂಚಾರಿ ವಿಜಯ್ ನಟನೆಯ ‘ಪುಕ್ಸಟ್ಟೆ ಲೈಫು’ ಚಿತ್ರವನ್ನು ನಿರ್ಮಾಣ ಮಾಡಿದ್ದ ನಾಗರಾಜ್ ಸೋಮಯಾಜಿ ಅವರು ಈಗ ‘ಅಕಟಕಟ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.



















