ಅಬುಧಾಬಿಯಲ್ಲಿ ರಶ್ಮಿಕಾ ಮಂದಣ್ಣ: ಮುಖದಲ್ಲಿ ಉಕ್ಕಿದ ಖುಷಿಗೆ ಕಾರಣ ತಿಳಿಸಿದ ನಟಿ
ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಅವರು ಅಬುಧಾಬಿಯಲ್ಲಿ ಇದ್ದಾರೆ. ಈ ಫೋಟೋದಲ್ಲಿ ಅವರ ನಗು ಹೈಲೈಟ್ ಆಗಿದೆ. ಅವರು ಇಷ್ಟು ಸಂತೋಷವಾಗಿ ಇರಲು ಕಾರಣ ಏನು ಎಂಬುದನ್ನು ಪೋಸ್ಟ್ನಲ್ಲಿಯೇ ವಿವರಿಸಿದ್ದಾರೆ.
Updated on:Jul 23, 2022 | 1:59 PM

ನಟಿ ರಶ್ಮಿಕಾ ಮಂದಣ್ಣ ಯಾವ ವಿಚಾರಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುವವರಲ್ಲ. ಅವರು ಎಲ್ಲಾ ವಿಚಾರಗಳನ್ನು ಆದಷ್ಟು ಸರಳವಾಗಿ ಇಡಲು ಪ್ರಯತ್ನಿಸುತ್ತಾರೆ. ಈಗ ಅವರ ಪೂರ್ತಿ ಗಮನ ಸಿನಿಮಾ ಮೇಲಿದೆ. ಸಂಪೂರ್ಣ ಸಮಯವನ್ನು ಅದಕ್ಕಾಗಿಯೇ ಮುಡಿಪಿಟ್ಟಿದ್ದಾರೆ.

ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಅವರು ಅಬುಧಾಬಿಯಲ್ಲಿ ಇದ್ದಾರೆ. ಈ ಫೋಟೋದಲ್ಲಿ ಅವರ ನಗು ಹೈಲೈಟ್ ಆಗಿದೆ. ಅವರು ಇಷ್ಟು ಸಂತೋಷವಾಗಿ ಇರಲು ಕಾರಣ ಏನು ಎಂಬುದನ್ನು ಪೋಸ್ಟ್ನಲ್ಲಿಯೇ ವಿವರಿಸಿದ್ದಾರೆ.

ರಶ್ಮಿಕಾ ಅಬುಧಾಬಿಯಲ್ಲಿ ಸಮಯ ಕಳೆಯುತ್ತಿದ್ದಾರೆ. ‘ಪ್ರಯಾಣ ಮಾಡುವುದು ಎಂದರೆ ಬಹಳ ಪ್ರೀತಿ. ಅದರಲ್ಲೂ ಶೂಟಿಂಗ್ಗಾಗಿ ಪ್ರಯಾಣ ಮಾಡೋದು ಎಂದರೆ ಇನ್ನೂ ಪ್ರೀತಿ’ ಎಂದು ಕ್ಯಾಪ್ಶನ್ ನೀಡಿದ್ದಾರೆ ರಶ್ಮಿಕಾ.

ರಶ್ಮಿಕಾ ಮಂದಣ್ಣ ಯಾವ ಚಿತ್ರದ ಶೂಟಿಂಗ್ಗೆ ದುಬೈಗೆ ತೆರಳಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಬಗ್ಗೆ ರಶ್ಮಿಕಾ ಅವರ ಕಡೆಯಿಂದಲೇ ಉತ್ತರ ಸಿಗಬೇಕಿದೆ.

ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರ ಕೈಯಲ್ಲಿ ಹಲವು ಆಫರ್ಗಳಿವೆ. ಟಾಲಿವುಡ್, ಬಾಲಿವುಡ್, ಮಾಲಿವುಡ್ ಹಾಗೂ ಕಾಲಿವುಡ್ನಲ್ಲಿ ಅವರು ಬ್ಯುಸಿ ಇದ್ದಾರೆ.
Published On - 1:58 pm, Sat, 23 July 22