CWG 2022: ಕಾಮನ್​ವೆಲ್ತ್​ ಗೇಮ್ಸ್​ಗೆ ಹೊರಡುವ ಮುನ್ನ ಬೆಂಗಳೂರಿನಲ್ಲಿ ಪೂಜೆ ಸಲ್ಲಿಸಿದ ಭಾರತೀಯ ಹಾಕಿ ತಂಡ

Commonwealth Games 2022: . ಈ ಮೂಲಕ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಇರಾದೆಯಲ್ಲಿದ್ದಾರೆ. ಅದರಂತೆ ಜುಲೈ 31 ರಂದು ಭಾರತ ತಂಡವು ಇಂಗ್ಲೆಂಡ್ ವಿರುದ್ದದ ಪಂದ್ಯದ ಮೂಲಕ ಕಾಮನ್​ವೆಲ್ತ್ ಗೇಮ್ಸ್ ಅಭಿಯಾನ ಆರಂಭಿಸಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Jul 23, 2022 | 11:09 AM

ಜುಲೈ 28 ರಿಂದ ಆಗಸ್ಟ್ 8 ರವರೆಗೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತೀಯ ಹಾಕಿ ತಂಡ ಪ್ರಯಾಣ ಬೆಳೆಸಿದೆ. ಇದಕ್ಕೂ ಮುನ್ನ ಮೊದಲು ಭಾರತೀಯ ಪುರುಷರ ಹಾಕಿ ತಂಡವನ್ನು ವಿಶೇಷ ಸಂಭ್ರಮಾಚರಣೆಯ ಮೂಲಕ ಹುರಿದುಂಬಿಸಲಾಯಿತು.

1 / 6
ಬೆಂಗಳೂರಿಗೆ ಆಗಮಿಸಿದ ಭಾರತೀಯ ಹಾಕಿ ತಂಡವನ್ನು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (SAI) ವಿಶೇಷವಾಗಿ ಬರಮಾಡಿಕೊಂಡರು. ಅಷ್ಟೇ ಅಲ್ಲದೆ ಆಟಗಾರರ ಫೋಟೋವನ್ನು ಒಳಗೊಂಡ ವಿಶೇಷ ಕೇಕ್​ ಅನ್ನು ಕಟ್ ಮಾಡುವ ಮೂಲಕ ಶುಭ ಹಾರೈಸಲಾಯಿತು.

2 / 6
ಇದೇ ವೇಳೆ ಆಟಗಾರರು ಬೆಂಗಳೂರಿನ ಸ್ಥಳೀಯ ದೇವಸ್ಥಾನಗಳಿಗೂ ತೆರಳಿ ಪೂಜೆ ಸಲ್ಲಿಸಿದ್ದು ವಿಶೇಷ. ಇದೀಗ ಟೀಮ್ ಇಂಡಿಯಾ ಹಾಕಿ ಆಟಗಾರರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರಿಂದಲೂ ಶುಭ ಹಾರೈಕೆಗಳು ಮೂಡಿಬರುತ್ತಿವೆ.

3 / 6
ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕದೊಂದಿಗೆ ಹಿಂತಿರುಗಿದ್ದ ಭಾರತೀಯ ಹಾಕಿ ತಂಡವು ಈ ಬಾರಿ ಚಿನ್ನದ ಪದಕಕ್ಕೆ ಮುತ್ತಿಡುವ ವಿಶ್ವಾಸದಲ್ಲಿದ್ದಾರೆ.

4 / 6
ಈ ಮೂಲಕ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಇರಾದೆಯಲ್ಲಿದ್ದಾರೆ. ಅದರಂತೆ ಜುಲೈ 31 ರಂದು ಭಾರತ ತಂಡವು ಇಂಗ್ಲೆಂಡ್ ವಿರುದ್ದದ ಪಂದ್ಯದ ಮೂಲಕ ಕಾಮನ್​ವೆಲ್ತ್ ಗೇಮ್ಸ್ ಅಭಿಯಾನ ಆರಂಭಿಸಲಿದೆ.

5 / 6
ಭಾರತ ಹಾಕಿ ತಂಡ ಹೀಗಿದೆ: ಪಿಆರ್‌ ಶ್ರೀಜೇಶ್‌, ಕೃಷನ್‌ ಬಹದ್ದೂರ್‌, ಪಾಠಕ್‌ (ಗೋಲ್ ಕೀಪರ್ಸ್​), ವರುಣ್‌ ಕುಮಾರ್‌, ಸುರೇಂದರ್‌ ಕುಮಾರ್‌, ಹರ್ಮನ್‌ ಪ್ರೀತ್‌ ಸಿಂಗ್‌ (ಉಪನಾಯಕ), ಅಮಿತ್‌ ರೋಹಿದಾಸ್‌, ಜುಗರಾಜ್‌ ಸಿಂಗ್‌, ಜರ್ಮನ್‌ ಪ್ರೀತ್‌ ಸಿಂಗ್ (ಡಿಫೆಂಡರ್ಸ್​), ಮನ್‌ ಪ್ರೀತ್‌ ಸಿಂಗ್‌ (ನಾಯಕ), ಹಾರ್ದಿಕ್‌ ಸಿಂಗ್‌, ವಿವೇಕ್‌ ಸಾಗರ್‌ ಪ್ರಸಾದ್‌, ಶಂಶೇರ್‌ ಸಿಂಗ್‌, ಆಕಾಶ್‌ ದೀಪ್‌ ಸಿಂಗ್‌, ನೀಲಕಂಠ ಶರ್ಮ (ಮಿಡ್​ ಫೀಲ್ಡರ್ಸ್​), ಮಂದೀಪ್‌ ಸಿಂಗ್‌, ಗುಜರಾತ್‌ ಸಿಂಗ್‌, ಲಲಿತ್‌ ಕುಮಾರ್‌ ಉಪಾಧ್ಯಾಯ, ಅಭಿಷೇಕ್ (ಫಾವರ್ಡ್ಸ್​)

6 / 6
Follow us