AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊರ ಹಬ್ಬ ವಿಚಾರವಾಗಿ ಬಿಗ್ ಫೈಟ್! ದೇವಸ್ಥಾನ ಕಮಿಟಿಯಲ್ಲಿದ್ದ ಓರ್ವ ಸದಸ್ಯನ ವಜಾ, ಆಕ್ರೋಶಗೊಂಡ ಗ್ರಾಮಸ್ಥರು

ಊರ ಹಬ್ಬವನ್ನ ಮಾಡಿಯೇ ಮಾಡುತ್ತೇವೆ ಅಂತ ಗ್ರಾಮಸ್ಥರು ಹಠ ಹಿಡಿದಿದ್ದಾರೆ. ದೇವಸ್ಥಾನವನ್ನ ಪೊಲೀಸರು ಸುತ್ತುವರೆದಿದ್ದು, 50ಕ್ಕೂ ಹೆಚ್ಚು ಪೊಲೀಸರು, 3 ಪೊಲೀಸ್ ವಾಹನಗಳು ಭದ್ರತೆಗಾಗಿ ನಿನ್ನೆಯಿಂದ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ಊರ ಹಬ್ಬ ವಿಚಾರವಾಗಿ ಬಿಗ್ ಫೈಟ್! ದೇವಸ್ಥಾನ ಕಮಿಟಿಯಲ್ಲಿದ್ದ ಓರ್ವ ಸದಸ್ಯನ ವಜಾ, ಆಕ್ರೋಶಗೊಂಡ  ಗ್ರಾಮಸ್ಥರು
ಊರ ಹಬ್ಬ ವಿಚಾರವಾಗಿ ಬಿಗ್ ಫೈಟ್..!
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 24, 2022 | 1:08 PM

Share

ಬೆಂಗಳೂರು: ಊರ ಹಬ್ಬ ವಿಚಾರವಾಗಿ ಬಿಗ್ ಫೈಟ್ ನಡೆದಿರುವಂತಹ ಘಟನೆ ನಗರದ ಪೀಣ್ಯದ ಫಸ್ಟ್ ಸ್ಟೇಜ್​ನಲ್ಲಿ ನಡೆದಿದೆ. ನಿನ್ನೆ ಪೀಣ್ಯದ ಫಸ್ಟ್ ಸ್ಟೇಜ್​ನಲ್ಲಿ ಆಂಜನೇಯ ಸ್ವಾಮಿಗೆ ಊರ ಹಬ್ಬ ನಡೆಯಬೇಕಿತ್ತು. ದೇವಸ್ಥಾನ ಕಮಿಟಿಯಲ್ಲಿದ್ದ ಓರ್ವ ಸದಸ್ಯನನ್ನ ವಜಾಗೊಳಿಸಿರುವ ಹಿನ್ನಲೆ ದೇವಸ್ಥಾನ ಆಡಳಿತ ಮಂಡಳಿಯ ಏಕಪಕ್ಷೀಯ ನಿರ್ಧಾರಕ್ಕೆ ಸ್ಥಳೀಯರು ಕೆರಳಿದರು. ಕಮಿಟಿಯಿಂದ ವಜಾಗೊಂಡಿರುವ ವ್ಯಕ್ತಿ, ಇತರರನ್ನ ಸೇರಿಸಿಕೊಂಡು ಹಬ್ಬವನ್ನು ನಿಲ್ಲಿಸಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಹಸಿರು ತೋರಣ, ವಿದ್ಯುತ್, ಹೂವಿನ ಅಲಂಕಾರ ಮಾಡಿ ಹಬ್ಬಕ್ಕೆ ಸಿದ್ಧತೆ ಮಾಡಿಕೊಂಡಿದ್ರು. ಆದರೆ ನಿನ್ನೆ ಬೆಳಗ್ಗೆ ಮೆರವಣಿಗೆಗೆ ದೇವರ ಮೂರ್ತಿಯನ್ನ ದೇಗುಲದಿಂದ ಹೊರ ತರಲು ಒಂದು ವರ್ಗ ಬಿಟ್ಟಿಲ್ಲ. ಆಂಜನೇಯ ಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ದೇವಸ್ಥಾನದ ಅಕ್ಕಪಕ್ಕ ಜನ ಸೇರುತ್ತಿದ್ದಂತೆ, ಆಡಳಿತ ಮಂಡಳಿ ದೇವಸ್ಥಾನದ ಬಾಗಿಲು ಮುಚ್ಚಿದೆ.

ಇದನ್ನೂ ಓದಿ: ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮುಗೆ ಯಕ್ಷಗಾನ ಪದ್ಯದ ಮೂಲಕ ಕಲಾವಿದೆಯ ಅಭಿನಂದನೆ

ಊರ ಹಬ್ಬವನ್ನ ಮಾಡಿಯೇ ಮಾಡುತ್ತೇವೆ ಅಂತ ಗ್ರಾಮಸ್ಥರು ಹಠ ಹಿಡಿದಿದ್ದಾರೆ. ದೇವಸ್ಥಾನವನ್ನ ಪೊಲೀಸರು ಸುತ್ತುವರೆದಿದ್ದು, 50ಕ್ಕೂ ಹೆಚ್ಚು ಪೊಲೀಸರು, 3 ಪೊಲೀಸ್ ವಾಹನಗಳು ಭದ್ರತೆಗಾಗಿ ನಿನ್ನೆಯಿಂದ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಊರ ಹಬ್ಬಕ್ಕೆಂದು ನೆಂಟರೆಲ್ಲ ಮನೆಗೆ ಬಂದಿದ್ದು, ಈಗ ಹಬ್ಬ ಕ್ಯಾನ್ಸಲ್ ಆದ ಹಿನ್ನಲೆ ವಾಪಸ್ಸ್​​ ಊರುಗಳಿಗೆ ತೆರಳುತ್ತಿದ್ದಾರೆ. ಗ್ರಾಮ ದೇವರಿಗೆ ಅವಮಾನ ಮಾಡಲಾಗಿದೆ ಎಂದು ಗ್ರಾಮಸ್ಥರು ಬೇಸರಗೊಂಡಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ಸಿಕ್ಕ 45 ಲಕ್ಷ ರೂಪಾಯಿ ಠಾಣೆಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್ ಸಿಬ್ಬಂದಿ