ನಿದ್ರೆ ಮಾಡುವಾಗ ಪದೇ ಪದೇ ಎಚ್ಚರವಾಗುತ್ತಾ? ರಾತ್ರಿ ಮಲಗುವ ಮುನ್ನ ಈ ಆಹಾರಗಳನ್ನು ಸೇವಿಸಿ
ಆರೋಗ್ಯವಾಗಿರಲು ಹೇಗೆ ಆರೋಗ್ಯಕರ ಆಹಾರಗಳು ಮುಖ್ಯವಾಗುತ್ತದವೋ ಹಾಗೆಯೇ ಉತ್ತಮ ನಿದ್ರೆಯೂ ಅಷ್ಟೇ ಮುಖ್ಯ. ಯಾವುದೋ ಕಾರಣಕ್ಕೆ ಒಂದೆರಡು ದಿನ ನಿದ್ರೆ ಬಾರದೇ ಇದ್ದರೆ ಸಮಸ್ಯೆಯಲ್ಲ ಆದರೆ ದೀಘರ್ಕಾಲದವರೆಗೆ ಈ ಸಮಸ್ಯೆ ಮುಂದುವರೆದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ನಿದ್ರೆಯು ವರವಿದ್ದಂತೆ, ಕೆಲವರಿಗೆ ಮಲಗಿದ ಕೆಲವೇ ಸೆಕೆಂಡುಗಳಲ್ಲಿ ನಿದ್ರಾ ದೇವತೆ ಆವರಿಸುತ್ತಾಳೆ, ಇನ್ನೂ ಕೆಲವರು ಮಲಗಿ ಗಂಟೆಗಳಾದರೂ ನಿದ್ರೆ ಮಾಡುವುದಿಲ್ಲ, ಇನ್ನೂ ಕೆಲವರಿಗೆ ಶಬ್ದವಿದ್ದರೆ ನಿದ್ರೆ ಬರುವುದಿಲ್ಲ, ಇನ್ನೂ ಕೆಲವರು ಸಣ್ಣ ಶಬ್ದವಾದರೂ ಎಚ್ಚರವಾಗುವಷ್ಟು ನಿದ್ರೆ ಸೂಕ್ಷ್ಮವಾಗಿರುತ್ತದೆ.
ಆರೋಗ್ಯವಾಗಿರಲು ಹೇಗೆ ಆರೋಗ್ಯಕರ ಆಹಾರಗಳು ಮುಖ್ಯವಾಗುತ್ತದವೋ ಹಾಗೆಯೇ ಉತ್ತಮ ನಿದ್ರೆಯೂ ಅಷ್ಟೇ ಮುಖ್ಯ. ಯಾವುದೋ ಕಾರಣಕ್ಕೆ ಒಂದೆರಡು ದಿನ ನಿದ್ರೆ ಬಾರದೇ ಇದ್ದರೆ ಸಮಸ್ಯೆಯಲ್ಲ ಆದರೆ ದೀಘರ್ಕಾಲದವರೆಗೆ ಈ ಸಮಸ್ಯೆ ಮುಂದುವರೆದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಒಂದು ವಾರದವರೆಗೆ ಇಂತಹ ಸಮಸ್ಯೆಗಳು ಮುಂದುವರೆದರೆ ನಿದ್ರೆಯ ಚಕ್ರವನ್ನು ಸರಿಪಡಿಸುವುದು ಅಷ್ಟು ಸುಲಭವಾಗಿರುವುದಿಲ್ಲ. ನಿದ್ರೆ ಮಾತ್ರೆಯನ್ನು ತೆಗೆದುಕೊಂಡರೆ ಮಾತ್ರ ನಿದ್ರೆ ಬರುತ್ತದೆ. ನಿದ್ರಾಹೀನತೆಯ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ನಿಮ್ಮ ಆಹಾರದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ನೀವು ಈ ಸಮಸ್ಯೆಯನ್ನು ಹೋಗಲಾಡಿಸಬಹುದು.
ಬಾದಾಮಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ರಾತ್ರಿಯಲ್ಲಿ ಉತ್ತಮ ನಿದ್ರೆ ಬರುತ್ತದೆ ಎಂದು ಅವರು ಹೇಳಿದ್ದಾರೆ. ಇದಲ್ಲದೇ ಇಂತಹ ಹಲವು ಬಗೆಯ ಆಹಾರಗಳನ್ನು ಸೇವಿಸಬಹುದು.
ರಾತ್ರಿ ಗಾಢ ನಿದ್ರೆಗೆ ಉತ್ತಮ ಆಹಾರಗಳು ಯಾವುವು ಎನ್ನುವ ಕುರಿತ ಮಾಹಿತಿ ಇಲ್ಲಿದೆ
ಬಾದಾಮಿ: ಬಾದಾಮಿ ತಿನ್ನುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ, ಅದೇ ರೀತಿ ರಾತ್ರಿ ಮಲಗಲು ತೊಂದರೆ ಇರುವವರು ತಮ್ಮ ಆಹಾರದಲ್ಲಿ ಬಾದಾಮಿಯನ್ನು ಸೇರಿಸಿಕೊಳ್ಳಬೇಕು. ಇದು ನಿಮಗೆ ವೇಗವಾಗಿ ಮತ್ತು ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಬಾದಾಮಿಯನ್ನು ಯಾವ ಪ್ರಮಾಣದಲ್ಲಿ ತಿನ್ನಬೇಕು ಎಂದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಹಾಗಾಗಿ ರಾತ್ರಿ ಮಲಗುವ ಮುನ್ನ ಎರಡು ಬಾದಾಮಿಯನ್ನು ಸೇವಿಸಬೇಕು ಎಂದು ಹೇಳೋಣ. ಇದನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ನಿದ್ರೆಯ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ಕ್ಯಾಮೊಮೈಲ್ ಚಹಾ: ಕ್ಯಾಮೊಮೈಲ್ ಚಹಾದಲ್ಲಿ ಎಪಿಜೆನಿನ್ ಕಂಡುಬರುತ್ತದೆ, ಇದು ನಿದ್ರಾಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ರಾತ್ರಿಯಲ್ಲಿ ಮಲಗಲು ತೊಂದರೆ ಇರುವವರು ಕ್ಯಾಮೊಮೈಲ್ ಚಹಾವನ್ನು ಸೇವಿಸಬೇಕು. ಈ ಟೀ ಸೇವನೆಯಿಂದ ನಿದ್ದೆ ಬರುವುದು ಮಾತ್ರವಲ್ಲದೆ ಆತಂಕವೂ ಕಡಿಮೆಯಾಗುತ್ತದೆ. ಆಂಟಿಆಕ್ಸಿಡೆಂಟ್ ಭರಿತ ಕ್ಯಾಮೊಮೈಲ್ ಚಹಾವನ್ನು ನೀವು ರಾತ್ರಿ ಮಲಗುವ ಮೊದಲು ಸೇವಿಸಬಹುದು.
ಹಾಲು: ಸಾಮಾನ್ಯವಾಗಿ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುತ್ತಾರೆ. ಅರಿಶಿನದ ಹಾಲು ಕುಡಿಯುವುದು ಹೊಟ್ಟೆ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಆದರೆ ರಾತ್ರಿ ಹಾಲು ಕುಡಿದರೆ ಒಳ್ಳೆಯ ನಿದ್ದೆ ಬರುತ್ತದೆ ಎಂದು ನಿಮಗೆ ತಿಳಿದಿದೆಯೇ. ರಾತ್ರಿಯಲ್ಲಿ ಅರಿಶಿನದ ಹಾಲನ್ನು ಕುಡಿಯುವುದರಿಂದ ಆಳವಾದ ಮತ್ತು ಉತ್ತಮ ನಿದ್ರೆ ಬರುತ್ತದೆ. ಇದಲ್ಲದೇ ಹಾಲು ಕುಡಿಯುವುದರಿಂದ ದಿನದ ಆಯಾಸವೂ ದೂರವಾಗುತ್ತದೆ. ತಜ್ಞರ ಪ್ರಕಾರ, ರಾತ್ರಿ ಮಲಗುವ 30 ನಿಮಿಷಗಳ ಮೊದಲು ಹಾಲು ಕುಡಿಯಬೇಕು.
ಮೀನು ಸೇವನೆ: ಮೀನು ಸೇವನೆ ಮಾಡಿದರೆ ನಿದ್ರೆ ಉತ್ತಮವಾಗುತ್ತದೆ. ವಾರದಲ್ಲಿ ಮೂರು ಬಾರಿ ಮೀನು ಸೇವಿಸುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ. ತಜ್ಞರ ಪ್ರಕಾರ, ವಿಟಮಿನ್-ಡಿ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಮೀನುಗಳಲ್ಲಿ ಕಂಡುಬರುತ್ತವೆ, ಇದು ನಿದ್ರೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈ ಲೇಖನವು ಟಿವಿ9ನ ಅಧಿಕೃತ ವರದಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.