AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಡಮಾನ್‌ನಲ್ಲಿ 200 ಸ್ಕೂಬಾ ಡೈವರ್‌ಗಳೊಂದಿಗೆ ವಿಶ್ವ ದಾಖಲೆ ಬರೆದ ಆರ್​​. ಅಶೋಕ್​​ ಪುತ್ರ ಶರತ್

ಅಂಡಮಾನ್‌ನಲ್ಲಿ 200 ಸ್ಕೂಬಾ ಡೈವರ್‌ಗಳೊಂದಿಗೆ ವಿಶ್ವ ದಾಖಲೆ ಬರೆದ ಆರ್​​. ಅಶೋಕ್​​ ಪುತ್ರ ಶರತ್

ಪ್ರಸನ್ನ ಹೆಗಡೆ
|

Updated on: Aug 16, 2026 | 7:43 AM

Share

ವಿಪಕ್ಷ ನಾಯಕ ಆರ್. ಅಶೋಕ್ ಅವರ ಪುತ್ರ ಶರತ್ ಅಶೋಕ್ ಅವರು ಅಂಡಮಾನ್‌ನ ಸ್ವರಾಜ್ ದ್ವೀಪದ ಸಮುದ್ರದಾಳದಲ್ಲಿ 60x40 ಮೀಟರ್ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 200 ಸ್ಕೂಬಾ ಡೈವರ್‌ಗಳ ತಂಡದೊಂದಿಗೆ ಈ ಸಾಧನೆ ಮಾಡಿರುವ ಶರತ್, ಲೆಫ್ಟಿನೆಂಟ್ ಗವರ್ನರ್ ಡಿ.ಕೆ. ಜೋಶಿ ಅವರಿಂದ ಸನ್ಮಾನಿತರಾಗಿದ್ದಾರೆ.

ಬೆಂಗಳೂರು, ಆಗಸ್ಟ್​​ 16: ವಿಪಕ್ಷ ನಾಯಕ ಆರ್. ಅಶೋಕ್ ಅವರ ಪುತ್ರ ಶರತ್ ಅಶೋಕ್ ಅವರು ಅಂಡಮಾನ್‌ನ ಸ್ವರಾಜ್ ದ್ವೀಪದ ಸಮುದ್ರದಾಳದಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 60×40 ಮೀಟರ್ ಅಳತೆಯ ಈ ಭವ್ಯ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲು 200 ಸ್ಕೂಬಾ ಡೈವರ್‌ಗಳ ತಂಡದೊಂದಿಗೆ ಶರತ್ ಅಶೋಕ್ ಭಾಗಿಯಾಗಿದ್ದರು. ಈ ಐತಿಹಾಸಿಕ ಸಾಧನೆಗಾಗಿ ಶರತ್ ಅಶೋಕ್ ಅವರನ್ನು ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ.ಕೆ. ಜೋಶಿ ಅವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶರತ್ ಅವರಿಗೆ ಗಿನ್ನೆಸ್ ಪ್ರಮಾಣಪತ್ರವನ್ನೂ ಪ್ರದಾನ ಮಾಡಲಾಯಿತು. ತಮ್ಮ ಪುತ್ರನ ಈ ಅಪ್ರತಿಮ ಸಾಧನೆಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ತಂದೆಯಾಗಿ ತಮಗೆ ಇದು ಅತ್ಯಂತ ಹೆಮ್ಮೆಯ ಹಾಗೂ ಪದಗಳಲ್ಲಿ ವರ್ಣಿಸಲಾಗದ ಭಾವುಕ ಕ್ಷಣ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us