28 ಕ್ಷೇತ್ರಗಳ ಪೈಕಿ 1 ಕ್ಷೇತ್ರದ ಒಂದಿಷ್ಟು ಭಾಗದಲ್ಲಿ ಮಾತ್ರ ಸಮಸ್ಯೆ, ಮಳೆ ಪ್ರವಾಹ ಪ್ರಪಂಚದ ಎಲ್ಲ ಭಾಗಗಳಲ್ಲೂ ಆಗುತ್ತೆ : ಸಂಸದ ತೇಜಸ್ವಿ ಸೂರ್ಯ

| Updated By: ಸಾಧು ಶ್ರೀನಾಥ್​

Updated on: Sep 09, 2022 | 8:23 PM

Silicon city: ಬೆಂಗಳೂರಿನಲ್ಲಿ ಆದ ಸಮಸ್ಯೆಯನ್ನ ಸರ್ಕಾರ ಬಗೆಹರಿಸುತ್ತೆ. ಬೆಂಗಳೂರಿನ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸಮಸ್ಯೆ ಆಗಿದೆ. 28 ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದ ಒಂದಿಷ್ಟು ಭಾಗದಲ್ಲಿ ಸಮಸ್ಯೆಯಾಗಿದೆಯಷ್ಟೇ -ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ

28 ಕ್ಷೇತ್ರಗಳ ಪೈಕಿ 1 ಕ್ಷೇತ್ರದ ಒಂದಿಷ್ಟು ಭಾಗದಲ್ಲಿ ಮಾತ್ರ ಸಮಸ್ಯೆ, ಮಳೆ ಪ್ರವಾಹ ಪ್ರಪಂಚದ ಎಲ್ಲ ಭಾಗಗಳಲ್ಲೂ ಆಗುತ್ತೆ : ಸಂಸದ ತೇಜಸ್ವಿ ಸೂರ್ಯ
28 ಕ್ಷೇತ್ರಗಳ ಪೈಕಿ 1 ಕ್ಷೇತ್ರದ ಒಂದಿಷ್ಟು ಭಾಗದಲ್ಲಿ ಮಾತ್ರ ಸಮಸ್ಯೆ, ಮಳೆ ಪ್ರವಾಹ ಪ್ರಪಂಚದ ಎಲ್ಲ ಭಾಗಗಳಲ್ಲೂ ಆಗುತ್ತೆ : ಸಂಸದ ತೇಜಸ್ವಿ ಸೂರ್ಯ
Follow us on

ಬೆಂಗಳೂರು: ದಶಕಗಳ ಕಾಲದ ರಣಭೀಕರ ಮಳೆಗೆ ಸಿಲಿಕಾನ್ ಸಿಟಿ (Silicon city) ಬೆಂಗಳೂರು ತತ್ತರಿಸಿರುವಾಗ ಪರಿಸ್ಥಿತಿಯ ವ್ಯಂಗ್ಯವೆಂಬಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು (Bangalore South MP Tejasvi Surya) ಮಳೆಯಲ್ಲಿ ಮಸಾಲೆ ದೋಸೆ ತಿನ್ನುತ್ತಾ, ಕಾಫಿ ಹೀರುತ್ತಾ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ, ಟೀಕೆಗೆ ಆಹಾರವಾಗಿತ್ತು. ಅದಾದ ಮೇಲೆ ತಡವಾಗಿಯಾದರೂ ಸಂಸದ ತೇಜಸ್ವಿ ಸೂರ್ಯ ಅವರು ಇಂದು ಕೆಲ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ನಗರದ ಕೋರಮಂಗಲದ ಬಳಿ ಇರುವ ಈಜಿಪುರ ಫ್ಲೈ ಓವರ್ ವೀಕ್ಷಣೆ ವೇಳೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ಮತ್ತದೇ ಉಡಾಫೆಯ ಧಾಟಿಯಲ್ಲಿ ಬೆಂಗಳುರು ಮಳೆ ಪರಿಸ್ಥಿತಿಯ ಕುರಿತು ವ್ಯಾಖ್ಯಾನ ನೀಡಿದ್ದಾರೆ (Bangalore Rains).

ನಮ್ಮ ಕ್ಷೇತ್ರದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಬೆಂಗಳೂರಿನಲ್ಲಿ ಆದ ಸಮಸ್ಯೆಯನ್ನ ಸರ್ಕಾರ ಬಗೆಹರಿಸುತ್ತೆ. ಬೆಂಗಳೂರಿನ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸಮಸ್ಯೆ ಆಗಿದೆ. 28 ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದ ಒಂದಿಷ್ಟು ಭಾಗದಲ್ಲಿ ಸಮಸ್ಯೆಯಾಗಿದೆಯಷ್ಟೇ. ಹಾನಿಯಾದ ಕಡೆ ಅಲ್ಲಿನ ಜನಪ್ರತಿನಿಧಿಗಳು ಕೆಲಸ ಮಾಡ್ತಿದ್ದಾರೆ ಎಂದು ಜವಾಬ್ದಾರಿಯನ್ನು ಭುಜದಿಂದ ಭುಜಕ್ಕೆ ವರ್ಗಾಯಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು ಬೆಂಗಳೂರಷ್ಟೇ ಅಲ್ಲ, ಎಲ್ಲ ಕಡೆ ಪ್ರವಾಹ ಆಗೋದು ಸಾಮಾನ್ಯ. ಪ್ರಪಂಚದ ಎಲ್ಲ ಭಾಗಗಳಲ್ಲೂ ಪ್ರವಾಹ ಆಗಿದೆ. ಬೆಳ್ಳಂದೂರು, ಮಹದೇವಪುರದಲ್ಲಿ 5 % ಮಳೆಯಿಂದ ಹಾನಿ ಆಗಿದೆ. ಇಡೀ ಬೆಂಗಳೂರೇ ಮುಳುಗಿ ಹೋಗಿದೆ ಅನ್ನೋದು ಸರಿಯಲ್ಲ. ರಾಜಕೀಯ ಲಾಭಕ್ಕಾಗಿ ಬೆಂಗಳೂರಿಗೆ ಅಪಮಾನ ಸರಿಯಲ್ಲ ಎಂದು ರಾಜಕೀಯ ಲೇಪಿತ ವ್ಯಾಖ್ಯಾನವನ್ನೂ ಬೆಂಗಳೂರಿನಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿದ್ದಾರೆ.