ನೋಟಿಸ್​ ನೀಡಿ ತಿಂಗಳುಗಳೇ ಕಳೆದರೂ ಒತ್ತುವರಿ ಮಾಡಿಕೊಂಡ ಮನೆ, ವಿಲ್ಲಾಗಳನ್ನು ತೆರವುಗೊಳಿಸದ ಬಿಬಿಎಂಪಿ

ರಾಜಕಾಲುವೆ ಒತ್ತುವರಿ ಮಾಡಿಕೊಂಡ ಮನೆಗಳಿಗೆ ಅಧಿಕಾರಿಗಳು ನೋಟಿಸ್​ ನೀಡಿ ತಿಂಗಳುಗಳೇ ಕಳೆದರೂ, ಒತ್ತುವರಿ ತೆರವು ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ.

ನೋಟಿಸ್​ ನೀಡಿ ತಿಂಗಳುಗಳೇ ಕಳೆದರೂ ಒತ್ತುವರಿ ಮಾಡಿಕೊಂಡ ಮನೆ, ವಿಲ್ಲಾಗಳನ್ನು ತೆರವುಗೊಳಿಸದ ಬಿಬಿಎಂಪಿ
ಬಿಬಿಎಂಪಿ
TV9kannada Web Team

| Edited By: Vivek Biradar

Sep 19, 2022 | 4:30 PM

ಬೆಂಗಳೂರು: ಮಹಾನಗರದ ಮಹದೇಪುರದ ಪೂರ್ವ ಪಾರ್ಕ್ರಿಡ್ಜ್ ವಿಲ್ಲಾಗಳನ್ನು (Villa) 2002 ರಲ್ಲಿ ನಿರ್ಮಾಣ ಮಾಡಲಾಗಿತ್ತು. 13 ಎಕರೆ ವಿಸ್ತಿರ್ಣದಲ್ಲಿ 149 ವಿಲ್ಲಾಗಳು ನಿರ್ಮಾಣ ಮಾಡಲಾಗಿತ್ತು. 149 ವಿಲ್ಲಾಗಳ ಪೈಕಿ 3 ವಿಲ್ಲಾಗಳಿಂದ 2.4 ಮೀಟರ್ ಅಗಲದ, 200 ಮೀಟರ್ ಉದ್ದದ ರಾಜಕಾಲುವೆ ಒತ್ತುವರಿ ಮಾಡಲಾಗಿದೆ. ಈ ರಾಜಕಾಲುವೆ ಗರುಡಾಚಾರ್ಯ ಪಾಳ್ಯ ಕೆರೆಯಿಂದ ಮಹಾದೇವಪುರ ಕೆರೆಗೆ ಸಂಪರ್ಕ ಕಲ್ಪಿಸುತ್ತದೆ. ಒತ್ತುವರಿ ಮಾಡಿದ ವಿಲ್ಲಾಗಳನ್ನು ಬಿಬಿಎಂಪಿ ಇನ್ನೂ ತೆರವುಗೊಳಸಿಲ್ಲ.

ಕಾಲುವೆ ಒತ್ತುವರಿ ಮಾಡಿಕೊಂಡು ಪೂರ್ವಾಂಕದಲ್ಲಿ ನಿರ್ಮಾಣ ಮಾಡಿದ ಮನೆಗಳನ್ನು ಬಿಬಿಎಂಪಿ ಅಧಿಕಾರಿಗಳು ಇದೂವರೆಗೂ ಒತ್ತುವರಿ ತೆರವು ಮಾಡಿಲ್ಲ. ಅಧಿಕಾರಿಗಳು ಮೂರು ತಿಂಗಳ ಹಿಂದೆಯೇ ನೋಟೀಸ್ ನೀಡಿದ್ದಲ್ಲದೇ, ಎರಡು ಬಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೂ ಕೂಡ ಒತ್ತುವರಿ ತೆರವು ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಪೂರ್ವಾಂಕದಲ್ಲಿ 1998 ರಲ್ಲಿ ರೈನ್ ಬೋ ಡ್ರೈವ್ ಬಡಾವಣೆ ನಿರ್ಮಾಣ ಮಾಡಲಾಗಿತ್ತು. ರೈನ್ ಬೋ ಡ್ರೈವ್ ಬಡಾವಣೆ ಒಟ್ಟು 400 ನಿವೇಶನಗಳಿವೆ. ಈ ನಿವೇಶನಗಳನ್ನು 2003 ರಲ್ಲಿ ಮಾರಾಟ ಮಾಡಲಾಗಿದೆ. ಇದರಲ್ಲಿ ಒಟ್ಟು 17 ಮನೆಗಳು 500 ಮೀಟರ್ ಉದ್ದದ ಕಾಲುವೆ ಜಮೀನನ್ನು ಒತ್ತುವರಿ ಮಾಡಿಕೊಂಡಿವೆ ಎಂದು ಆರೋಪಿಸಲಾಗಿದೆ. ಈ 17 ಕಟ್ಟಡಗಳಿಗೆ ಏಪ್ರೀಲ್‌ 2002ರಲ್ಲಿ ನೋಟೀಸ್ ನೀಡಲಾಗಿತ್ತು. ಆದರೂ ಕೂಡ ಇನ್ನೂ ತೆರವು ಮಾಡಿಲ್ಲ.

2001 ರಲ್ಲಿ ವಿಪ್ರೋ ಕಂಪನಿಯ ಪ್ರದೇಶವನ್ನು ಅಭಿವೃದ್ಧಿ ಮಾಡಲಾಗಿತ್ತು. ಇದಕ್ಕೆ ಒಟ್ಟು 2.4 ಮೀಟರ್ ಅಗಲ, 300 ಮೀಟರ್ ಉದ್ದದ ರಾಜಕಾಲುವೆ ಒತ್ತುವರಿ ಮಾಡಲಾಗಿತ್ತು. ಒತ್ತುವರಿ ಜಾಗದಲ್ಲಿ ವಿಪ್ರೋ ಗೋಡೆ ನಿರ್ಮಾಣ ಮಾಡಿತ್ತು. ಸದ್ಯ ಅಧಿಕಾರಿಗಳು ಗೋಡೆ ತೆರವು ಮಾಡಿದ್ದು, ಇನ್ನೂ 25% ತೆರವು ಕಾರ್ಯಾಚರಣೆ ಬಾಕಿ ಇದೆ.

ಸಲಾರ್ ಪುರಿಯಾದಿಂದ ಕೂಡ ಒಟ್ಟು 2.4 ಮೀಟರ್ ಅಗಲ,200 ಮೀಟರ್ ಉದ್ದದ ರಾಜಕಾಲುವೆ ಒತ್ತುವರಿಯಾಗಿದೆ. ಸಲಾರ್ ಪುರಿಯಾ ಈಗ ಡೆವಲಪ್ಮೆಂಟ್ ಆಗುತ್ತಿದ್ದು, ಖಾಲಿ ಭೂಮಿ ಇರುವ ಒತ್ತುವರಿ ಪ್ರದೇಶವನ್ನು ಬಿಬಿಎಂಪಿ ತೆರವು ಮಾಡಿಲ್ಲ. ಅಧಿಕಾರಿಗಳು ಮಾರ್ಕಿಂಗ್ ಮಾಡಿದ್ದು, ಮೂರು ಬಾರಿ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ರಾಜಕಾಲುವೆ ಸರ್ಜಾಪುರ ರಸ್ತೆಯಿಂದ ಸಾವಳಕೆರೆಗೆ ಸಂಪರ್ಕ ಕಲ್ಪಿಸಲಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada