ಬೆಂಗಳೂರು: ಇತ್ತೀಚಿನ ಅಂಕಿಅಂಶಗಳ ಪ್ರಕಾರ ದಕ್ಷಿಣ ಭಾರತದಲ್ಲಿ ಸ್ಥಿರಾಸ್ತಿ ಬೆಲೆಯಲ್ಲಿ (Real estate) ಬಲವಾದ ಏರಿಕೆ ಕಂಡುಬರುತ್ತಿದೆ. ಅದರಲ್ಲಿಯೂ ಬೆಂಗಳೂರು (Bengaluru) ಮತ್ತು ಹೈದರಾಬಾದ್‌ನಲ್ಲಿ (Hyderabad) ರಿಯಲ್ ಎಸ್ಟೇಟ್ ದರ ಗಗನಕ್ಕೇರಿದೆ. ಹೈದರಾಬಾದ್‌ನ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ಚಾರ್ಮಿನಾರ್ ಬಳಿ ಕೇವಲ ಒಂದು ಎಕರೆ ಭೂಮಿಯನ್ನು ಖರೀದಿಸಲು 100 ಕೋಟಿ ರೂಪಾಯಿ ನೀಡಿ ದಾಖಲೆ ಸೃಷ್ಟಿಸಿತು. ಇದು ಇಡೀ ತೆಲಂಗಾಣದಲ್ಲೇ ದಾಖಲೆ ಎಂದು ವರದಿಯಾಗಿದೆ.
ಹೈದರಾಬಾದ್‌ನಲ್ಲಿ ಆ ದಾಖಲೆ ಮುರಿಯುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಉದ್ಭವಿಸಿದ್ದು, ಸದ್ಯದ ಮಟ್ಟಿಗೆ ಹೈದರಾಬಾದ್‌ನಲ್ಲಿ ಅಥವಾ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಉತ್ತಮವೇ ಎಂಬ ಅಭಿಪ್ರಾಯ ಅಂಕಿಅಂಶಗಳಿಂದ ವ್ಯಕ್ತವಾಗಿದೆ.
ಅಂಕಿಅಂಶಗಳ ಪ್ರಕಾರ, ಜೀವನ ನಿರ್ವಹಣಾ ವೆಚ್ಚಕ್ಕೆ ಸಂಬಂಧಿಸಿದ ಹೋಲಿಕೆಯಲ್ಲಿ ಬೆಂಗಳೂರಿಗಿಂತಲೂ ಹೈದರಾಬಾದ್ ಉತ್ತಮವಾಗಿದೆ. ಹೈದರಾಬಾದ್‌ನಲ್ಲಿ ಜೀವನ ನಿರ್ವಹಣಾ ವೆಚ್ಚ ಬೆಂಗಳೂರಿಗಿಂತ ಶೇ 26ರಷ್ಟು ಕಡಿಮೆ ಎನ್ನಲಾಗಿದೆ. ಬೆಂಗಳೂರನ್ನು ಭಾರತದ ಸಿಲಿಕಾನ್ ಸಿಟಿ ಎಂದು ಕರೆಯಲಾಗಿದ್ದರೂ ಜೀವನ ನಿರ್ವಹಣೆ ವೆಚ್ಚದ ವಿಚಾರದಲ್ಲಿ ಅದು ಹೈದರಾಬಾದ್‌ಗಿಂತ ಹಿಂದಿದೆ.
ರಿಯಲ್ ಎಸ್ಟೇಟ್ ಮ್ಯಾನೇಜ್‌ಮೆಂಟ್ ಮತ್ತು ಕನ್ಸಲ್ಟೆನ್ಸಿ ಸಂಸ್ಥೆ ಅನಾರಕ್ ವರದಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಹೈದರಾಬಾದ್‌ನಲ್ಲಿ ಐಷಾರಾಮಿ ಮನೆಗಳ ಸರಾಸರಿ ಬೆಲೆ ಶೇ 42 ರಷ್ಟು ಆಗಿದೆ, ಇದು ಬೆಂಗಳೂರು ಮತ್ತು ಎಂಎಂಆರ್ (ಮುಂಬೈ ಮೆಟ್ರೋಪಾಲಿಟನ್ ಪ್ರದೇಶ) ಎರಡೂ ನಗರಗಳಲ್ಲಿ ಕಂಡುಬಂದ ಶೇ 27ಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚಾಗಿದೆ. ಇಲ್ಲಿ 1.5 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಮನೆಯನ್ನು ಐಷಾರಾಮಿ ಎಂದು ವ್ಯಾಖ್ಯಾನಿಸಲಾಗಿದೆ.
ಇದನ್ನೂ ಓದಿ: ನಾಳೆಯಿಂದ ಆಗಸ್ಟ್ 14ರ ವರೆಗೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ; ಇಲ್ಲಿದೆ ಪೂರ್ಣ ವಿವರ
ಜೂನ್ 2023 ಕ್ಕೆ ಕೊನೆಗೊಂಡ ಆರು ತಿಂಗಳ ಅವಧಿಗೆ ನೈಟ್ ಫ್ರಾಂಕ್ ವರದಿ ಪ್ರಕಾರ, ಬೆಂಗಳೂರಿನಲ್ಲಿ ವಸತಿ ಆಸ್ತಿಗಳ ಮಾರಾಟವು ಶೇ 2 ರಷ್ಟು ಕುಸಿದಿದ್ದರೆ ಹೈದರಾಬಾದ್‌ನಲ್ಲಿ ಅದು ಶೇ 5 ರಷ್ಟು ಹೆಚ್ಚಾಗಿದೆ ಎಂದು ಉಲ್ಲೇಖಿಸಲ್ಪಟ್ಟಿದೆ.
ಜನವರಿ – ಜೂನ್ ಅವಧಿಯಲ್ಲಿ ಬೆಂಗಳೂರಿನಲ್ಲಿ ಕಚೇರಿ ಸ್ಥಳದ ಬೇಡಿಕೆಯಲ್ಲಿಯೂ ಶೇ 10ರಷ್ಟು ಕುಸಿತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ