ಬೆಂಗಳೂರು: ಏರ್​ಪೋರ್ಟ್​ನಲ್ಲಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ ₹ 2.4 ಕೋಟಿ ಮೌಲ್ಯದ ರಕ್ತಚಂದನ ವಶ

| Updated By: shivaprasad.hs

Updated on: Feb 20, 2022 | 7:48 PM

ಅಕ್ರಮವಾಗಿ ರಕ್ತಚಂದನ ವಶಕ್ಕೆ ಯತ್ನಿಸಿದ್ದ ಮೂವರನ್ನು ಬೆಂಗಳೂರು ಏರ್​ಪೋರ್ಟ್​​ನಲ್ಲಿ ಬಂಧಿಸಲಾಗಿದೆ. ವುಡ್ ಫರ್ನಿಚರ್ ಎಂದು ಹೇಳಿ ಅಧಿಕಾರಿಗಳ ಕಣ್ತಪ್ಪಿಸಲು ಆರೋಪಿಗಳು ಯತ್ನ ನಡೆಸಿದ್ದರು.​​

ಬೆಂಗಳೂರು: ಏರ್​ಪೋರ್ಟ್​ನಲ್ಲಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ ₹ 2.4 ಕೋಟಿ ಮೌಲ್ಯದ ರಕ್ತಚಂದನ ವಶ
ವಶಪಡಿಸಿಕೊಂಡ ರಕ್ತಚಂದನ
Follow us on

ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ (Kempegowda Airport) ಅಕ್ರಮವಾಗಿ ಸಾಗಿಸುತ್ತಿದ್ದ 4.82 ಟನ್ ರಕ್ತಚಂದನ (Red Sandalwood) ಸೀಜ್‌ ಮಾಡಲಾಗಿದೆ. ಪ್ಲೈವುಡ್ ಶೀಟ್​ಗಳಲ್ಲಿ ಪ್ಯಾಕ್ ಮಾಡಿ ಅನುಮಾನ ಬಾರದಂತೆ ರವಾನೆಗೆ ಆರೋಪಿಗಳು ಯತ್ನಿಸಿದ್ದರು. ವುಡ್ ಫರ್ನಿಚರ್ ಎಂದು ಹೇಳಿ ಅಕ್ರಮ ಸಾಗಾಟಕ್ಕೆ ಪ್ರಯತ್ನಪಟ್ಟಿದ್ದರು. ಅಧಿಕಾರಿಗಳ ಕಣ್ತಪ್ಪಿಸಲು ಖತರ್ನಾಕ್ ಪ್ಲಾನ್ ಮಾಡಿಕೊಂಡು ಬಂದಿದ್ದ ಖದೀಮರು, ಬೆಂಗಳೂರಿನಿಂದ ತೈವಾನ್​ಗೆ ವೈಟ್ ಫಿಲ್ಡ್ (White Field) ಬಳಿಯ ಕಾರ್ಗೋ ಮೂಲಕ ಸಾಗಾಟ ಮಾಡಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ ಸುಮಾರು 2.4 ಕೋಟಿ ರೂ ಮೌಲ್ಯದ ರಕ್ತಚಂದನವನ್ನು ತೈವಾನ್‌ಗೆ ಸಾಗಿಸಲು ಆರೋಪಿಗಳು ಯತ್ನಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ.

ಕೋಲಾರ: ಕೌಟುಂಬಿಕ ಕಲಹ; ಚಾಕು ಇರಿದು ಬಾವನಿಂದಲೇ ಭಾಮೈದ ಕೊಲೆ

ಕೋಲಾರ: ಬಂಗಾರಪೇಟೆ ಪಟ್ಟಣದ (Bangarapete) ಗೌತಮ್ ನಗರದಲ್ಲಿ ಕೌಟುಂಬಿಕ ಕಲಹದ ಕಾರಣ ಚಾಕು ಇರಿದು ಬಾವನಿಂದಲೇ ಭಾಮೈದ ಸುರೇಶ್(36) ಎಂಬುವವರನ್ನು ಕೊಲೆ ಮಾಡಲಾಗಿದೆ. ಮತ್ತೋರ್ವ ಭಾಮೈದ ಹರೀಶ್‌ಗೆ ಗಾಯವಾಗಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಬಾಬುಗೂ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಕನ್ನಡ: ರೈತನ ಮೇಲೆ ಕಾಡುಹಂದಿ ದಾಳಿ; ಕಾಡು ಹಂದಿ ಹಿಂಡುಗಳ ಕಾಟಕ್ಕೆ ಬೇಸತ್ತ ಜನ

ಹೊನ್ನಾವರ: ರೈತನ ಮೇಲೆ ಕಾಡು ಹಂದಿ ದಾಳಿ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (Honnavar) ತಾಲೂಕಿನ ಹೊದ್ಕೆ ಗ್ರಾಮದಲ್ಲಿ ನಡೆದಿದೆ. ಅಡಿಕೆ ತೋಟಕ್ಕೆ ಹೋದ ಸಂದರ್ಭದಲ್ಲಿ ರೈತನ ಮೇಲೆ ಕಾಡು ಹಂದಿ ದಾಳಿ ಮಾಡಿದೆ. ಹೊದ್ಕೆಯ ಹತ್ತಿರ ಬರ್ಕುಜಡ್ಡಿ ನಿವಾಸಿಯಾದ ಈಶ್ವರ ರಾಮಾ ನಾಯ್ಕ ಎಂಬ ರೈತನ ಕಾಲು ತೊಡೆ ಸೀಳಿ ಕಾಡು ಹಂದಿ ಘಾಸಿಗೊಳಿಸಿದೆ. ಹೊನ್ನಾವರ ತಾಲೂಕಿನ ಸುತ್ತ ಮುತ್ತ ಹಂದಿಗಳ ಹಿಂಡಿನ ಉಪಟಳ ಜೋರಾಗಿದ್ದು, ಕಾಡು ಹಂದಿ ಹಿಂಡುಗಳ ಕಾಟಕ್ಕೆ ಜನರು ಬೇಸತ್ತಿದ್ದಾರೆ.

ಇದನ್ನೂ ಓದಿ:

ಪೊಲೀಸರಿಂದಲೇ ರಕ್ತಚಂದನ ತುಂಡುಗಳ ಸ್ಮಗ್ಲಿಂಗ್, ಇಬ್ಬರು ಹೆಡ್ ಕಾನ್ಸ್‌ಟೇಬಲ್ಗಳ ಮೇಲೆ ಎಫ್ಐಆರ್ ದಾಖಲು

Mysuru Palace: ಮೈಸೂರು ಅರಮನೆಗೆ ಮತ್ತೊಂದು ವಿಶ್ವ ಮನ್ನಣೆ; ಏನದು? ಇಲ್ಲಿದೆ ಹೆಮ್ಮೆಯ ವಿಚಾರ

Published On - 7:39 pm, Sun, 20 February 22