Mysuru Palace: ಮೈಸೂರು ಅರಮನೆಗೆ ಮತ್ತೊಂದು ವಿಶ್ವ ಮನ್ನಣೆ; ಏನದು? ಇಲ್ಲಿದೆ ಹೆಮ್ಮೆಯ ವಿಚಾರ

ಮೈಸೂರು ಅರಮನೆ ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿದೆ. ಇದೀಗ ಅರಮನೆಗೆ ಹೊಸ ಗರಿಯೊಂದು ಲಭ್ಯವಾಗಿದೆ. ಏನದು? ಇಲ್ಲಿದೆ ವಿಶೇಷ ಬರಹ.

Mysuru Palace: ಮೈಸೂರು ಅರಮನೆಗೆ ಮತ್ತೊಂದು ವಿಶ್ವ ಮನ್ನಣೆ; ಏನದು? ಇಲ್ಲಿದೆ ಹೆಮ್ಮೆಯ ವಿಚಾರ
ಮೈಸೂರು ಅರಮನೆ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 20, 2022 | 10:46 PM

ಮೈಸೂರು: ಮೈಸೂರು ಅಂದರೆ ಥಟ್ಟನೆ ನೆನಪಾಗುವುದು ವಿಶ್ವ ವಿಖ್ಯಾತ ಮೈಸೂರು ಅರಮನೆ. ದೀಪಾಲಂಕಾರದಿಂದ ಝಗಮಗಿಸುವ ಬೆಳಕಿನ ಚಿತ್ತಾರದಲ್ಲಿ ಅರಮನೆಯ (Mysuru Palace) ಅಂದ ಚೆಂದವನ್ನು ನೋಡುವುದೇ ಅದ್ಬುತ ಅಮೋಘ. ಈಗಾಗಲೇ ವಿಶ್ವ ಮಾನ್ಯತೆ ಪಡೆದುಕೊಂಡಿರುವ ಮೈಸೂರು ಅರಮನೆಗೆ ಮತ್ತೊಂದು ವಿಶ್ವ ಮನ್ನಣೆ ಸಿಕ್ಕಿದೆ. ಪ್ರತಿಷ್ಠಿತ ಗೂಗಲ್ ರಿವ್ಯೂ (Google Review) ಪಟ್ಟಿಯಲ್ಲಿ ಮೈಸೂರು ಅರಮನೆ 15ನೇ ಸ್ಥಾನ ಪಡೆದಿದೆ. ಏನಿದು ‘ಗೂಗಲ್ ರಿವ್ಯೂ’? ಪೂರ್ಣ ಮಾಹಿತಿ ಇಲ್ಲಿದೆ. ಗೂಗಲ್ ಸರ್ಚ್ ಎಲ್ಲರಿಗೂ ಗೊತ್ತಿರುವ ವಿಚಾರ. ಯಾವುದೇ ಮಾಹಿತಿ ಬೇಕಾದರೂ ಕ್ಷಣಾರ್ಧದಲ್ಲಿ ಸಿಗುತ್ತದೆ. ಹೀಗಾಗಿ ಜಗತ್ತಿನ ಮೂಲೆ ಮೂಲೆಗಳಿಂದಲೂ ಜನರು ತಮಗೆ ಬೇಕಾದ ಮಾಹಿತಿಯನ್ನು ಗೂಗಲ್‌ನಿಂದ ಪಡೆಯುತ್ತಾರೆ. ಈ ರೀತಿ ಜನರು ಗೂಗಲ್ ಮೂಲಕ ಮಾಹಿತಿ ಪಡೆದ ದಾಖಲೆ ಗೂಗಲ್‌ನಲ್ಲಿ ಇರುತ್ತದೆ. ಈ ರೀತಿ ಜನರು ಗೂಗಲ್ ಮೂಲಕ ಅತಿ ಹೆಚ್ಚು ಹುಡುಕಾಡಿ ಮಾಹಿತಿ ಪಡೆದ 20 ಸ್ಥಳಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಈ‌ ಪಟ್ಟಿಯಲ್ಲಿ ಮೈಸೂರು ಅರಮನೆ 15ನೇ ಸ್ಥಾನ‌ ಪಡೆದಿದೆ.

ಈ ಪಟ್ಟಿ ತಯಾರಿಸಿದ್ದು ಹೇಗೆ?

ಸಾಮಾನ್ಯವಾಗಿ ಗೂಗಲ್‌ಗೆ ಹೋಗಿ ಅಲ್ಲಿ ಮಾಹಿತಿಗಳನ್ನು ಹುಡುಕಿ ನಂತರ ನೀಡುವ ರಿವ್ಯೂ ಆಧಾರಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಮೈಸೂರು ಅರಮನೆಗೆ ಬರೋಬ್ಬರಿ 1,93,177 ಪ್ರತಿಕ್ರಿಯೆಗಳು ಬಂದಿವೆ. ಈ ಮೂಲಕ ಮೈಸೂರು ಅರಮನೆ ವಿಶ್ವದಲ್ಲೇ 15ನೇ ಸ್ಥಾನ ಪಡೆದುಕೊಂಡು ಎಲ್ಲರ ಗಮನ ಸೆಳೆದಿದೆ.

ತಾಜ್ ಮಹಲ್ ಹಿಂದಿಕ್ಕಿದ ಮೈಸೂರು ಅರಮನೆ:

ಮೈಸೂರು ಅರಮನೆಗೆ ಪ್ರತಿನಿತ್ಯ ಸಾವಿರಾರು‌ ಜನರು ಬರುತ್ತಾರೆ. ತಿಂಗಳಿಗೆ ಇದು ಲಕ್ಷದ ಗಡಿ ದಾಟುತ್ತದೆ. ಇನ್ನು ದಸರಾ ಸಂದರ್ಭಲ್ಲಿ ಕೇಳುವುದೇ ಬೇಡ. ಲಕ್ಷ ಲಕ್ಷ ಜನರು ಮೈಸೂರಿಗೆ ಬರುತ್ತಾರೆ. ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಸುತ್ತಾಡಿ ಖುಷಿ ಪಡುತ್ತಾರೆ. ಇದು ದಿನೇ ದಿನೇ ಹೆಚ್ಚಾಗುತ್ತಲೇ ಇದೆ‌. ಇನ್ನು ತಾಜ್ ಮಹಲ್ ಹೊರತುಪಡಿಸಿದರೆ ಮೈಸೂರು ಅರಮನೆಗೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದಾರೆ ಅನ್ನೋ ಹೆಗ್ಗಳಿಕೆ ಪಾತ್ರವಾಗಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಮೈಸೂರು ಅರಮನೆ ತಾಜ್ ಮಹಲ್‌ನ್ನು ಹಿಂದಿಕ್ಕಿದೆ. ಗೂಗಲ್ ರಿವ್ಯೂ ಪಟ್ಟಿಯಲ್ಲಿ ಜಗತ್ತಿನ ಅದ್ಬುತಗಳಲ್ಲಿ ಒಂದಾದ ತಾಜ್ ಮಹಲ್‌ಗೆ 17ನೇ ಸ್ಥಾನ ಸಿಕ್ಕಿದೆ. ಗೂಗಲ್ ರಿವ್ಯೂನಲ್ಲಿ ತಾಜ್ ಮಹಲ್‌ ಬಗ್ಗೆ 1,87,245 ರಿವ್ಯೂ ಬಂದಿದೆ. ಅಂದರೆ ಮೈಸೂರು ಅರಮನೆಗಿಂತ 5,932 ಕಡಿಮೆ ರಿವ್ಯೂ ಬಂದಿದೆ. ಈ‌ ಮೂಲಕ ತಾಜ್‌ಮಹಲ್‌ಗಿಂತ ಮೈಸೂರು ಅರಮನೆ ಬಗ್ಗೆ ಹೆಚ್ಚಿನ ರಿವ್ಯೂ ಬಂದಿದೆ.

ಮೈಸೂರು ಅರಮನೆ ಆಡಳಿತ ಮಂಡಳಿ ಉಪ‌ನಿರ್ದೇಶಕ ಟಿ.ಎಸ್.ಸುಬ್ರಮಣ್ಯ

ಗೂಗಲ್ ಹಾಟ್ ಟಾಪಿಕ್ 20 ಸ್ಥಳಗಳು:

  1. ಸೌದಿ ಅರೇಬಿಯಾದ ಮೆಕ್ಕಾ ಮಸ್ಸಿದ್
  2. ಇಟಲಿಯ ರೋಮ್ ನಗರದ ಟ್ರೆವಿ ಫೌಂಟೇನ್
  3. ಇಟಲಿಯ ಕೋಲೋಸಿಯಮ್
  4. ಪ್ಯಾರಿಸ್‌ನ ಐಫೆಲ್ ಟವರ್
  5. ಮುಂಬಯಿ ಗೇಟ್ ವೇ ಆಫ್ ಇಂಡಿಯಾ
  6. ಮೆಕ್ಸಿಕೋದಾ ಝೋಕಾಲೋ
  7. ಸೌದಿ ಅರೇಬಿಯಾದ ಮದೀನಾದ ಅಲ್ ಮಸ್ಜಿದ್ ನಭವಿ
  8. ಬ್ರೆಜಿಲ್‌ನ ಇಬಿರಾಪುರಾ ಪಾರ್ಕ್
  9. ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಂ
  10. ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್
  11. ಫ್ರಾನ್ಸ್‌ನ ಡಿಸ್ನಿಲ್ಯಾಂಡ್
  12. ಪ್ಲೋರಿಡಾದ ವಾಲ್ಟ್‌ ಡಿಸ್ನಿ ವರ್ಲ್ಡ್ ರೆಸಾರ್ಟ್
  13. ಮೆಕ್ಸಿಕೋದ ಬಾಸ್ಕ್ ಡಿ ಚಾಪಲ್ಟೆಪಕ್
  14. ಹೊಸದಿಲ್ಲಿಯ ಇಂಡಿಯಾ ಗೇಟ್
  15. ಮೈಸೂರು ಅರಮನೆ
  16. ದುಬೈ ಮಾಲ್
  17. ತಾಜ್ ಮಹಲ್
  18. ಕೊಲ್ಕತ್ತಾದ ಮೈದಾನ್
  19. ಪ್ಲೋರಿಡಾದ ಮ್ಯಾಜಿಕ್ ಕಿಂಗ್ ಡಮ್ ಪಾರ್ಕ್
  20. ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್

ಮೈಸೂರಿನ ಹೆಮ್ಮೆಗೆ ಮತ್ತೊಂದು ಗರಿ; ನಾಗರಿಕರು ಏನಂತಾರೆ?

‘‘ಅರಮನೆ ನಮ್ಮ ಮೈಸೂರಿನಲ್ಲಿರೋದೇ ಒಂದು ವಿಶೇಷ ಮತ್ತು ಖುಷಿ. ನಾವು ಹೊರಗಡೆ ಹೋದಾಗ ನಿಮ್ಮ ಊರು ಯಾವುದು ಅಂತಾ ಕೇಳುತ್ತಾರೆ ಆಗ ನಾವು ಮೈಸೂರು ಅಂದರೆ ತಕ್ಷಣ ಓಹೋ ಅದೇ ಅರಮನೆ ಇದೆಯಲ್ಲಾ ಅದಾ ? ಅಂತಾರೆ. ಹೂ ಅಂದರೆ ಸಾಕು ಓಹೋ ರಾಜರ ಕಾಲದ್ದು, ರಾತ್ರಿ ಪುಲ್ ಲೈಟಿಂಗ್ ಇರುತ್ತಲ್ಲ ಅದು ಇದು ಅಂತಾ ಬರೀ ಅರಮನೆ ಬಗ್ಗೆನೇ ಮಾತನಾಡುತ್ತಾರೆ. ನಮ್ಮ ಮೈಸೂರು ಅರಮನೆ ನಮ್ಮ ಹೆಮ್ಮೆ. ಇಂತಹ ಮೈಸೂರು ಅರಮನೆಗೆ ಗೂಗಲ್ ಸರ್ಚ್‌ನಲ್ಲಿ ವಿಶ್ವದಲ್ಲೇ 15ನೇ ಸ್ಥಾನ ಸಿಕ್ಕಿರುವುದು ತುಂಬಾ ಖುಷಿಯಾಗಿದೆ’’ ಎನ್ನುತ್ತಾರೆ ನಗರದಲ್ಲಿ ವಾಸವಾಗಿರುವ ಗೃಹಿಣಿ ವನಿತಾ.

ಮೈಸೂರಿನ ಗೃಹಿಣಿ ವನಿತಾ

ಅರಮನೆ ಆಡಳಿತ ಮಂಡಳಿ ಸಂತಸ ಹಂಚಿಕೊಂಡಿದ್ದು ಹೀಗೆ:

‘‘ಸಾಂಸ್ಕೃತಿಕ ರಾಜಧಾನಿ ಮೈಸೂರು ಅರಮನೆ ಮೈಸೂರು ರಾಜರ ಪರಂಪರೆಯ ಸಂಕೇತವಾಗಿದೆ. ಅರಮನೆಗೆ ಪ್ರತಿವರ್ಷ 60 ಲಕ್ಷ ಜನರು ಭೇಟಿ‌ ನೀಡುತ್ತಾರೆ. ಅರಮನೆಯ ಚಿನ್ನದ ಅಂಬಾರಿ, ಸಾರ್ವಜನಿಕ ದರ್ಬಾರ್ ಹಾಲ್, ಖಾಸಗಿ ದರ್ಬಾರ್ ಹಾಲ್, ಅರಮನೆಯ ಗೋಡೆಗಳ ವರ್ಣಚಿತ್ರಗಳು, ಸ್ಥಂಭಗಳು, ಮದುವೆ ಮಂಟಪ, ರಾಜರ ಕಾಲದ ಪೋಟೋಗಳು, ಆಯುಧಗಳು, ವಿಶಾಲ ಉದ್ಯಾನವನ ಸೇರಿ ಅರಮನೆಯ ಪ್ರತಿ ವಸ್ತುವ ಅದ್ಬುತ ಆಕರ್ಷಣಿಯವಾಗಿದೆ. ಇಲ್ಲಿಗೆ ಬರುವ ದೇಶ ವಿದೇಶದ ಪ್ರವಾಸಿಗರಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲಾಗಿದೆ. ಪ್ರವಾಸಿ ಸ್ನೇಹಿ ಗೈಡ್‌ಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಇದು ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಹಲವು ಬಾರಿ ಮೈಸೂರು ಅರಮನೆ ವಿಶ್ವ ಮನ್ನಣೆ ಗಳಿಸಿದೆ. ಇದೀಗ ಕೋಟ್ಯಾಂತರ ಜನರು ಬಳಸುವ ಗೂಗಲ್‌ ರಿವ್ಯೂನಲ್ಲೂ ಉತ್ತಮ ಸ್ಥಾನ ಪಡೆದಿರುವುದು ಖುಷಿ ತಂದಿದೆ’’ ಎಂದಿದ್ದಾರೆ ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕರಾಗಿರುವ ಟಿ ಎಸ್ ಸುಬ್ರಮಣ್ಯ.

ಜಗಮಗಿಸುತ್ತಿರುವ ಮೈಸೂರು ಅರಮನೆ ಮತ್ತಷ್ಟು ಪ್ರಕಾಶಮಾನವಾಗಲಿ. ಈ ಮೂಲಕ ನಮ್ಮ ನಾಡಿನ ಪರಂಪರೆ ಸಂಸ್ಕೃತಿ ಇಡೀ ಜಗತ್ತಿಗೆ ಪಸರಿಸಲಿ ಅನ್ನೋದೆ ನಮ್ಮ ಆಶಯ.

ವಿಶೇಷ ವರದಿ: ರಾಮ್ ಟಿವಿ9 ಮೈಸೂರು

ಇದನ್ನೂ ಓದಿ:

ಈ ಬಾರಿ ಪ್ರೇಮಿಗಳ ದಿನದಂದು ಬೆಂಗಳೂರಿನಿಂದ ರಫ್ತಾದ ಗುಲಾಬಿ ಹೂವುಗಳ ಪ್ರಮಾಣವೆಷ್ಟು? ಇಲ್ಲಿದೆ ಅಚ್ಚರಿಯಾಗುವ ಅಂಕಿಅಂಶ

ಬಿಇ ಪದವಿ ಪಡೆದ 114 ಮಂದಿ ಪೊಲೀಸ್ ಇಲಾಖೆಗೆ ಸೇರ್ಪಡೆ; ಸರ್ಕಾರಿ ಹುದ್ದೆಯತ್ತ ಮುಖ ಮಾಡಿದ ಯುವಕರು

Published On - 6:56 pm, Sun, 20 February 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?