AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಅರಮನೆ ಮೈದಾನದಲ್ಲಿ ಫಲಪುಷ್ಪ ಪ್ರದರ್ಶನ; ಬಿಪಿನ್ ರಾವತ್, ಪುನೀತ್ ಪ್ರತಿಕೃತಿಗಳ ಮರುನಿರ್ಮಾಣ

Mysuru Palace Ground: ಅಯೋಧ್ಯೆಯ ಶ್ರೀರಾಮಮಂದಿರದ ಪ್ರತಿಕೃತಿ, ಚಾಮುಂಡೇಶ್ವರಿ, ನಂದಿ, ಮಹಿಷಾಸುರ ಸೇರಿದಂತೆ 18 ಬಗೆಯ ಹೂವಿನ ಪ್ರತಿಕೃತಿ ಇರಲಿದ್ದು ಸಿಡಿಎಸ್ ಬಿಪಿನ್ ರಾವತ್, ಪುನೀತ್​ ಪ್ರತಿಕೃತಿಗಳ ನಿರ್ಮಾಣ ಮಾಡಲಾಗಿದೆ.

ಮೈಸೂರು ಅರಮನೆ ಮೈದಾನದಲ್ಲಿ ಫಲಪುಷ್ಪ ಪ್ರದರ್ಶನ; ಬಿಪಿನ್ ರಾವತ್, ಪುನೀತ್ ಪ್ರತಿಕೃತಿಗಳ ಮರುನಿರ್ಮಾಣ
ಮೈಸೂರು ಅರಮನೆ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on:Dec 25, 2021 | 6:39 PM

Share

ಮೈಸೂರು: ಅರಮನೆ ಮೈದಾನದಲ್ಲಿ ಒಂದು ವಾರಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದ್ದು ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಎಸ್.ಟಿ. ಸೋಮಶೇಖರ್​ ಚಾಲನೆ ನೀಡಿದ್ದಾರೆ. ಅರಮನೆ ಮಂಡಳಿಯಿಂದ ಡಿಸೆಂಬರ್ 25 ರಿಂದ ಜನವರಿ 2ರ ವರೆಗೆ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 8.30ರ ವರೆಗೆ ವೀಕ್ಷಣೆಗೆ ಉಚಿತ ಪ್ರವೇಶ ಇರಲಿದೆ.

ವಿವಿಧ ಮಾದರಿಯ 15,000 ಅಲಂಕಾರಿಕ ಹೂವಿನ ಗಿಡಗಳು, ವಿವಿಧ ಮಾದರಿಯ ಸುಮಾರು 1 ಲಕ್ಷ ಹೂವುಗಳ ಅನಾವರಣ ಇರಲಿದೆ. ಅಯೋಧ್ಯೆಯ ರಾಮಮಂದಿರ ಫಲಪುಷ್ಪ ಪ್ರದರ್ಶನದ ಆಕರ್ಷಣೆ ಆಗಿದೆ. ಅಯೋಧ್ಯೆಯ ಶ್ರೀರಾಮಮಂದಿರದ ಪ್ರತಿಕೃತಿ, ಚಾಮುಂಡೇಶ್ವರಿ, ನಂದಿ, ಮಹಿಷಾಸುರ ಸೇರಿದಂತೆ 18 ಬಗೆಯ ಹೂವಿನ ಪ್ರತಿಕೃತಿ ಇರಲಿದ್ದು ಸಿಡಿಎಸ್ ಬಿಪಿನ್ ರಾವತ್, ಪುನೀತ್​ ಪ್ರತಿಕೃತಿಗಳ ನಿರ್ಮಾಣ ಮಾಡಲಾಗಿದೆ.

ಕೊರೊನಾ ಭೀತಿ ನಡುವೆ ಅರಮನೆ ನಗರಿಯಲ್ಲಿ ಜನಸಾಗರ ಹರಿದುಬರುತ್ತಿದೆ. ಕ್ರಿಸ್​ಮಸ್ ವೀಕೆಂಡ್​ಗೆ ಪ್ರವಾಸಿ ತಾಣಗಳು ಭರ್ತಿಯಾಗಿವೆ. ಮೈಸೂರಿನ ಬಹುತೇಕ ಪ್ರವಾಸಿತಾಣಗಳು ಸಂಪೂರ್ಣ ಭರ್ತಿ ಆಗಿದೆ. ಅರಮನೆ, ಮೃಗಾಲಯ, ಚಾಮುಂಡಿಬೆಟ್ಟದಲ್ಲಿ ಜನಜಂಗುಳಿ ಕಂಡುಬಂದಿದೆ. ಅರಮನೆ ಆವರಣದ ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರ ಹರಿದುಬರುತ್ತಿದೆ. ಕ್ರಿಸ್​ಮಸ್, ಹೊಸ ವರ್ಷದ ಸಾಲುಸಾಲು ರಜೆ ಹಿನ್ನೆಲೆ ರಜೆ ಕಳೆಯಲು ಹೊರರಾಜ್ಯ, ಜಿಲ್ಲೆಗಳಿಂದ ಪ್ರವಾಸಿಗರ ದಂಡು ಕಂಡುಬಂದಿದೆ.

ಕಾಂಗ್ರೆಸ್ ವಿರುದ್ಧ ಎಸ್​ಟಿ ಸೋಮಶೇಖರ್ ವಾಗ್ದಾಳಿ ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್​ ಪಾದಯಾತ್ರೆ ಗಿಮಿಕ್​ ಎಂದು ಎಸ್.ಟಿ. ಸೋಮಶೇಖರ್ ಟೀಕಿಸಿದ್ದಾರೆ. ಇದು ಕಾಂಗ್ರೆಸ್ ನಾಯಕರ ದೊಡ್ಡ ಗಿಮಿಕ್ ಆಗಿದೆ. ಸಿಎಂ ಬೊಮ್ಮಾಯಿ, ಬಿಎಸ್​​ವೈ ಕೇಂದ್ರಕ್ಕೆ ಒತ್ತಡ ಹೇರಿದ್ದಾರೆ. ಯೋಜನೆ ಜಾರಿಗೆ ಕೇಂದ್ರ ನಾಯಕರಿಗೆ ಒತ್ತಡ ಹೇರಿದ್ದಾರೆ. ಶೀಘ್ರದಲ್ಲೇ ಮೇಕೆದಾಟು ಯೋಜನೆಗೆ ಅನುಮತಿ ಸಿಗಲಿದೆ. ಇದನ್ನರಿತು ಕಾಂಗ್ರೆಸ್​ನವರಿಂದ ಪಾದಯಾತ್ರೆಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.

ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಡಿ.31 ರಂದು ಕರ್ನಾಟಕ ಬಂದ್​ ನಡೆಸಲಿರುವ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ ಪರ ಸಂಘಟನೆಗಳು ಬಂದ್​ ಮಾಡುವುದು ಬೇಡ. ಎಂಇಎಸ್​ ಪುಂಡಾಟಿಕೆ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ಹೀಗಾಗಿ ಹೋರಾಟಗಾರರು ಬಂದ್​ ಕೈಬಿಡಬೇಕೆಂದು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಚಂದ್ರು ರೀತಿ ಡಿಕೆಶಿ ಪರ್ಮನೆಂಟ್ ಸಿಎಂ ಎಂದು ಡಿಕೆಶಿ ಬಗ್ಗೆ ಸಚಿವ ಎಸ್‌.ಟಿ.ಸೋಮಶೇಖರ್ ವ್ಯಂಗ್ಯವಾಡಿದ್ದಾರೆ. ಪಾದಯಾತ್ರೆ ಮಾಡಿದ್ರೆ ಸಿಎಂ ಆಗ್ತೇನೆಂದು ಅಂದುಕೊಂಡಿದ್ರೆ ಅದು ಡಿಕೆಶಿ ಕನಸು, ಡಿಕೆಶಿ ಯಾವ ಸಿಎಂ ಆಗುತ್ತಾರೆ? ಮುಖ್ಯಮಂತ್ರಿ ಚಂದ್ರು ರೀತಿ ಪರ್ಮನೆಂಟ್ ಸಿಎಂ ಆಗಬೇಕು. ಬೊಮ್ಮಾಯಿರವರೇ ಅವಧಿ ಪೂರೈಸುತ್ತಾರೆಂದು ಹೇಳಿದ್ದಾರೆ. ಬಹಿರಂಗ ವೇದಿಕೆಯಲ್ಲಿ ಅಮಿತ್ ಶಾರವರೇ ಹೇಳಿದ್ದಾರೆ. ಹೀಗಿದ್ದರೂ ಸಿಎಂ ಬದಲಾವಣೆಯ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ಸೋಮಶೇಖರ್ ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಒತ್ತುವರಿ ತೆರವು: 170 ಕೋಟಿ ರೂ. ಮೌಲ್ಯದ 163 ನಿವೇಶನ ಮುಡಾ ವಶಕ್ಕೆ

ಇದನ್ನೂ ಓದಿ: New Year 2022: ಮೈಸೂರು ಅರಮನೆಯಲ್ಲಿ ಹೊಸ ವರ್ಷದ ಸಂಭ್ರಮ; ವಿಶೇಷ ಫಲಪುಷ್ಪ ಪ್ರದರ್ಶನ

Published On - 6:31 pm, Sat, 25 December 21

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ