New Year 2022: ಮೈಸೂರು ಅರಮನೆಯಲ್ಲಿ ಹೊಸ ವರ್ಷದ ಸಂಭ್ರಮ; ವಿಶೇಷ ಫಲಪುಷ್ಪ ಪ್ರದರ್ಶನ
ಮೈಸೂರು ಅರಮನೆ ಮಂಡಳಿಯಿಂದ ಸುಮಾರು 9 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಅರಮನೆಗೆ ಭೇಟಿ ನೀಡುವ ಪ್ರವಾಸಿಗರು, ಸಾರ್ವಜನಿಕರಿಗಾಗಿ ಹಲವು ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ.
ಮೈಸೂರು: ವರ್ಷಾಂತ್ಯ ಹಾಗೂ ಹೊಸ ವರ್ಷದ ಸಂಭ್ರಮ ಹಿನ್ನೆಲೆ ಡಿಸೆಂಬರ್ 25ರಿಂದ 2022 ಜನವರಿ 2ರ ವರೆಗೆ ಮೈಸೂರು ಅರಮನೆಯಲ್ಲಿ ವಿಶೇಷ ಫಲಪುಷ್ಪ ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 8.30ರವರೆಗೆ ಉಚಿತ ಪ್ರವೇಶ ನೀಡಲಾಗುವುದು. ಶ್ರೀರಾಮ ಮಂದಿರ, ನಾಡದೇವತೆ ತಾಯಿ ಚಾಮುಂಡೇಶ್ವರಿ, ನಂದಿ ಮತ್ತು ಮಹಿಷಾಸುರ ಮಾದರಿ ನಿರ್ಮಾಣ ಮಾಡಲಾಗುತ್ತದೆ. ಅಲ್ಲದೇ 32 ಜಾತಿಯ ಹೂವಿನ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಸುಮಾರು 1 ಲಕ್ಷ ವಿವಿಧ ಹೂವುಗಳನ್ನ ಅನಾವರಣ ಗೊಳಿಸಲಾಗುತ್ತದೆ ಅಂತ ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ ಎಸ್ ಸುಬ್ರಮಣ್ಯ ತಿಳಿಸಿದ್ದಾರೆ.
ಮೈಸೂರು ಅರಮನೆ ಮಂಡಳಿಯಿಂದ ಸುಮಾರು 9 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಅರಮನೆಗೆ ಭೇಟಿ ನೀಡುವ ಪ್ರವಾಸಿಗರು, ಸಾರ್ವಜನಿಕರಿಗಾಗಿ ಹಲವು ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ಮರಿಗೋಲ್ಡ್, ಸಾಲ್ತಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ನಸ್ಟರ್ಸಿಯಂ, ಆಂಟಿರೈನಂ, ಬೋನ್ಸಾಯ್ ಗಿಡಗಳು ಸೇರಿದಂತೆ 32 ಜಾತಿಯ ಹೂವಿನ ಗಿಡಗಳನ್ನ ಪ್ರದರ್ಶನ ಮಾಡಲಾಗುತ್ತದೆ.
ಗುಲಾಬಿ, ಸಾಂಡಿಮಮ್, ಪಿಂಗ್ ಪಾಂಗ್, ಕಾರ್ನೆಷನ್, ಆಸ್ಟಮೇರಿಯ, ಜರ್ಬೆರಾ, ಅಂಥೋರಿಯಮ್, ಆರ್ಕಿಡ್, ಬ್ಲೂ ಡೈಸಿ, ಡೈಸಿನಾ, ಹಾಗೂ ಇತರೆ ಹೂವುಗಳಿಂದ ಅಲಂಕಾರ ಮಾಡಲಾಗುತ್ತದೆ ಅಂತ ಟಿವಿ9ಗೆ ಟಿ ಎಸ್ ಸುಬ್ರಮಣ್ಯ ತಿಳಿಸಿದ್ದಾರೆ.
ಇದನ್ನೂ ಓದಿ
Delmicron ಒಮಿಕ್ರಾನ್ ನಂತರ ಬಂದಿದೆ ಹೊಸ ರೂಪಾಂತರಿ ಡೆಲ್ಮಿಕ್ರಾನ್; ರೋಗ ಲಕ್ಷಣಗಳೇನು? ಚಿಕಿತ್ಸೆ ಏನು?
Viral Video: ಕುಕ್ಕರ್ನಲ್ಲಿ ಕಾಫಿ ತಯಾರಿಸಿದ ವ್ಯಕ್ತಿ: ವೀಡಿಯೋ ವೈರಲ್
Published On - 10:42 am, Thu, 23 December 21