ಮತಾಂತರ ನಿಷೇಧ ಕಾಯ್ದೆಯಿಂದ ಭಯವಿಲ್ಲ; ಸಮಾಜ ಸೇವೆಯೇ ಕ್ರೈಸ್ತ ಧರ್ಮದ ಮೂಲ ಉದ್ದೇಶ: ಮೈಸೂರು ಕ್ರೈಸ್ತ ಧರ್ಮಾಧಿಕಾರಿ

ಮತಾಂತರ ನಿಷೇಧ ಕಾಯ್ದೆಯಿಂದ ಭಯವಿಲ್ಲ; ಸಮಾಜ ಸೇವೆಯೇ ಕ್ರೈಸ್ತ ಧರ್ಮದ ಮೂಲ ಉದ್ದೇಶ: ಮೈಸೂರು ಕ್ರೈಸ್ತ ಧರ್ಮಾಧಿಕಾರಿ
ಸಾಂದರ್ಭಿಕ ಚಿತ್ರ

ಮತಾಂತರ ನಿಷೇಧ ಕಾಯ್ದೆ ಕೇವಲ ಕ್ರೈಸ್ತರಿಗೆ ಸಂಬಂಧಿಸಿದ್ದಲ್ಲ ಎಂದು ಮೈಸೂರಿನ ಕ್ರೈಸ್ತ ಧರ್ಮಾಧಿಕಾರಿ ಡಾ.ಕೆ.ಎ.ವಿಲಿಯಮ್ ಹೇಳಿದ್ದಾರೆ. ಈ ಬಗ್ಗೆ ಹೋರಾಟ ಕುರಿತು ಕ್ರೈಸ್ತ ಧರ್ಮಾಧ್ಯಕ್ಷರ ಒಕ್ಕೂಟ ತೀರ್ಮಾನ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

TV9kannada Web Team

| Edited By: ganapathi bhat

Dec 22, 2021 | 2:37 PM

ಮೈಸೂರು: ಮತಾಂತರ ನಿಷೇಧ ಕಾಯ್ದೆಯಿಂದ ನಮಗೆ ಯಾವುದೇ ಭಯವಿಲ್ಲ. ಸಮಾಜ ಸೇವೆಯೇ ಕ್ರೈಸ್ತ ಧರ್ಮದ ಮೂಲ ಉದ್ದೇಶವಾಗಿದೆ. ನಾವು ಯಾರನ್ನೂ ಬಲವಂತವಾಗಿ ಮತಾಂತರ ಮಾಡುತ್ತಿಲ್ಲ. ಏನೂ ಇಲ್ಲದೆ ಅಪವಾದ, ತೊಂದರೆ ಕೊಡುವುದು ಸರಿಯಲ್ಲ ಎಂದು ಸರ್ಕಾರದಿಂದ ಮತಾಂತರ ನಿಷೇಧ ವಿಧೇಯಕ ಮಂಡನೆ ವಿಚಾರವಾಗಿ ಮೈಸೂರಿನ ಕ್ರೈಸ್ತ ಧರ್ಮಾಧಿಕಾರಿ ಡಾ.ಕೆ.ಎ. ವಿಲಿಯಮ್ ಬುಧವಾರ ಹೇಳಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿ ಮತಾಂತರ ನಿಷೇಧ ವಿಧೇಯಕದ ಅಗತ್ಯವಿರಲಿಲ್ಲ. ಉದ್ದೇಶಿತ ಕಾಯ್ದೆ ದುರ್ಬಳಕೆ ಮಾಡಿಕೊಂಡು ತೊಂದರೆ ಸಾಧ್ಯತೆ ಇದೆ. ಯಾವುದೇ ಕಾಯ್ದೆ ಒಂದು ಧರ್ಮಕ್ಕೆ ತೊಂದರೆ ಕೊಡಬಾರದು. ಮತಾಂತರ ನಿಷೇಧ ಕಾಯ್ದೆ ಕೇವಲ ಕ್ರೈಸ್ತರಿಗೆ ಸಂಬಂಧಿಸಿದ್ದಲ್ಲ ಎಂದು ಮೈಸೂರಿನ ಕ್ರೈಸ್ತ ಧರ್ಮಾಧಿಕಾರಿ ಡಾ.ಕೆ.ಎ.ವಿಲಿಯಮ್ ಹೇಳಿದ್ದಾರೆ. ಈ ಬಗ್ಗೆ ಹೋರಾಟ ಕುರಿತು ಕ್ರೈಸ್ತ ಧರ್ಮಾಧ್ಯಕ್ಷರ ಒಕ್ಕೂಟ ತೀರ್ಮಾನ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಸರ್ಕಾರ ವಿರುದ್ಧ ಸುಪ್ರೀಂಕೋರ್ಟ್​ಗೆ ಹೋಗಲು ಕ್ರೈಸ್ತ ಸಮುದಾಯ ಪ್ಲ್ಯಾನ್ ಮತಾಂತರ ನಿಷೇಧ ಕಾಯ್ದೆ (Anti Conversion Bill) ವಿರೋಧಿಸಿ ಸರ್ಕಾರ ವಿರುದ್ಧ ಸುಪ್ರೀಂಕೋರ್ಟ್​ಗೆ ಹೋಗಲು ಕ್ರೈಸ್ತ ಸಮುದಾಯ ನಿರ್ಧರಿಸಿದೆ ಎಂದು ಟಿವಿ9ಗೆ ಭಾರತೀಯ ಕ್ರೈಸ್ತ ಒಕ್ಕೂಟದ ಕಾನೂನು ಸಲಹೆಗಾರ ರಮೇಶ್ ತಿಳಿಸಿದ್ದರು. ನಾವು ಈಗಾಗಲೇ ಸುಪ್ರೀಂ ಕೋರ್ಟ್ ಹೋಗಲು ತೀರ್ಮಾನ ಮಾಡಿದ್ದೇವೆ. ನಮ್ಮ ಎಲ್ಲ ಮುಖಂಡರು, ಪಾದ್ರಿಗಳು ಸೇರಿದಂತೆ ಸಭೆ ಮಾಡಿ ತೀರ್ಮಾನ ಮಾಡಲಾಗಿದೆ. ಈ ಕಾಯ್ದೆ ನಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಎಲ್ಲ ಹಿಂದುಳಿದ ವರ್ಗದವರಿಗೆ ಹೊಡೆಯಲು ಹೊರಟ್ಟಿದ್ದಾರೆ. ಸರ್ಕಾರ ಮತ್ತು ವಿರೋಧ ಪಕ್ಷದ ಮೇಲಿರುವವರ ನಂಬಿಕೆ ಹೊರಟು ಹೋಗಿದೆ. ಹೀಗಾಗಿ ನ್ಯಾಯಕ್ಕಾಗಿ ನಾವು ಸುಪ್ರೀಂಕೋರ್ಟ್ ಮೊರೆ ಹೋಗುತ್ತಿದ್ದೇವೆ ಅಂತ ಹೇಳಿದ್ದರು.

ಕಲ್ಲು ತೂರಾಟ ಮಾಡುವುದು ಗಲಾಟೆ ಮಾಡುವುದನ್ನ ನಾವು ಮಾಡಲ್ಲ. ನಾವು ಶಾಂತಿಯುತವಾಗಿ ಹೋರಾಟ ಮಾಡಿ ನ್ಯಾಯ ಪಡೆಯುತ್ತೇವೆ. ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಅಡಿ ಸೇರಿ ಮೂರ್ನಾಲ್ಕು ಅಂಶಗಳನ್ನಿಟ್ಟುಕೊಂಡು ಕೋರ್ಟ್ ಹೋಗುತ್ತೇವೆ ಅಂತ ಬೆಳಗಾವಿಯಲ್ಲಿ ಭಾರತೀಯ ಕ್ರೈಸ್ತ ಸಮುದಾಯದ ಕಾನೂನು ಸಲಹೆಗಾರ ರಮೇಶ್ ಹೇಳಿದ್ದರು.

ಇದನ್ನೂ ಓದಿ: Anti-conversion laws ಭಾರತದಲ್ಲಿ ಧಾರ್ಮಿಕ ಮತಾಂತರವನ್ನು ರಾಜ್ಯಗಳು ಹೇಗೆ ಎದುರಿಸುತ್ತವೆ? ಯಾವ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾನೂನು ಇದೆ?

ಇದನ್ನೂ ಓದಿ: ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಹೀಗಾದ್ರೆ ಸುಮ್ನೆ ಇರ್ತೀರಾ? ಮತಾಂತರ ನಿಷೇಧ ಕಾಯ್ದೆ ವಿರೋಧಿಸುವವರ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಕೆಂಡಾಮಂಡಲ

Follow us on

Most Read Stories

Click on your DTH Provider to Add TV9 Kannada