ಪೊಲೀಸರಿಂದಲೇ ರಕ್ತಚಂದನ ತುಂಡುಗಳ ಸ್ಮಗ್ಲಿಂಗ್, ಇಬ್ಬರು ಹೆಡ್ ಕಾನ್ಸ್‌ಟೇಬಲ್ಗಳ ಮೇಲೆ ಎಫ್ಐಆರ್ ದಾಖಲು

ಪೊಲೀಸರಿಂದಲೇ ರಕ್ತಚಂದನ ತುಂಡುಗಳ ಸ್ಮಗ್ಲಿಂಗ್, ಇಬ್ಬರು ಹೆಡ್ ಕಾನ್ಸ್‌ಟೇಬಲ್ಗಳ ಮೇಲೆ ಎಫ್ಐಆರ್ ದಾಖಲು
ಮೋಹನ್, ಮಮ್ತೇಶ್ ಗೌಡ

ಡಿ.15ರಂದು ಅಕ್ರಮವಾಗಿ ರಕ್ತಚಂದನ ತುಂಡುಗಳ ಸಾಗಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡುವ ನೆಪದಲ್ಲಿ ಆರೋಪಿಗಳಿಂದ ರಕ್ತಚಂದನ ತುಂಡು ವಶಕ್ಕೆ ಪಡೆದಿದ್ದ ಪೊಲೀಸರು ವಶಕ್ಕೆ ಪಡೆದಿದ್ದಂತಹ ತುಂಡುಗಳನ್ನ ಮಾರಾಟ ಮಾಡಿದ್ದರು.

TV9kannada Web Team

| Edited By: Ayesha Banu

Jan 10, 2022 | 2:40 PM

ದೇವನಹಳ್ಳಿ: ಪೊಲೀಸರಿಂದಲೇ ರಕ್ತಚಂದನ ಮರದ ತುಂಡುಗಳ ಸ್ಮಗ್ಲಿಂಗ್ ನಡೆದಿದ್ದು ಮೋಹನ್, ಮಮ್ತೇಶ್ ಗೌಡ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರೈಡ್ ಮಾಡಿರುವ ನೆಪದಲ್ಲಿ ರಕ್ತ ಚಂದನ ತೆಗೆದುಕೊಂಡು ಹೋಗಿ ತಗಲಾಕ್ಕೊಂಡ ಇಬ್ಬರು ಪೊಲೀಸರ ವಿರುದ್ಧ ಕೇಸ್ ದಾಖಲಾಗಿದೆ.

ಡಿ.15ರಂದು ಅಕ್ರಮವಾಗಿ ರಕ್ತಚಂದನ ತುಂಡುಗಳ ಸಾಗಾಟ ಮಾಡುತ್ತಿದ್ದವರ ಮೇಲೆ ದಾಳಿ ಮಾಡುವ ನೆಪದಲ್ಲಿ ಆರೋಪಿಗಳಿಂದ ರಕ್ತಚಂದನ ತುಂಡು ವಶಕ್ಕೆ ಪಡೆದಿದ್ದ ಪೊಲೀಸರು ವಶಕ್ಕೆ ಪಡೆದಿದ್ದಂತಹ ತುಂಡುಗಳನ್ನ ಮಾರಾಟ ಮಾಡಿದ್ದರು. ರಕ್ತಚಂದನ ಸಾಗಾಟ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದೆ ಬಿಟ್ಟು ಕಳಿಸಿದ್ದರು. ಈ ಬಗ್ಗೆ ಹೊಸಕೋಟೆ ಪೊಲೀಸರ ತನಿಖೆಯ ವೇಳೆ ಅಕ್ರಮ ಬಯಲಾಗಿತ್ತು. ಸದ್ಯ ಈಗ ಸಿಸಿಬಿ ಹೆಡ್ ಕಾನ್ಸ್‌ಟೇಬಲ್ ಮೋಹನ್ ಮತ್ತು ಮಹದೇವಪುರ ಠಾಣೆಯ HC ಮಮ್ತೇಶ್ ಗೌಡ ವಿರುದ್ಧ ಕೇಸ್ ದಾಖಲಾಗಿದೆ. ಪ್ರಕರಣದ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ವಂಶಿಕೃಷ್ಣ ವರದಿ ಸಲ್ಲಿಸಿದ್ದಾರೆ.

ಘಟನೆ ಮಾಹಿತಿ ಡಿಸೆಂಬರ್ 15 ರಂದು ನೆರೆಯ ಆಂಧ್ರದಿಂದ ರೆಡ್ ಸ್ಯಾಂಡಲ್ ಸಾಗಾಟ ಮಾಡ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಸಿಸಿಬಿ ಹೆಡ್ ಕಾನ್ಸ್‌ಟೇಬಲ್ ಮೋಹನ್ ಮತ್ತು ಮಹದೇವಪುರ ಠಾಣೆಯ HC ಮಮ್ತೇಶ್ ಗೌಡ ಖಚಿತ ಮಾಹಿತಿ ಮೆರೆಗೆ ಮೊದಲೇ ಕೋಲಾರದ ಶ್ರೀನಿವಾಸಪುರಕ್ಕೆ ತೆರಳಿದ್ದರು. ಶ್ರೀನಿವಾಸಪುರದಿಂದ ಚಿಂತಾಮಣಿ ಮೂಲಕ ಹೊಸಕೋಟೆಗೆ ಬರ್ತಿದ್ದ ಟಾಟಾಏಸ್ ಗೂಡ್ಸ್ ವಾಹನ ಹಿಂಬಾಲಿಸಿ ಹೊಸಕೋಟೆಯ ಸಂತೇಗೇಟ್ ಬಳಿ‌ ಬರ್ತಿದ್ದಂತೆ ಆಕ್ಸಿಡೆಂಟ್ ಡ್ರಾಮ ಮಾಡಿ‌ ಟಾಟಾಏಸ್ ನಿಲ್ಲಿಸಿದ್ದರು. ಬಳಿಕ ಚಾಲಕನಿಗೆ ಬೇಡಿ ತೋರಿಸಿ ರಕ್ತ ಚಂದನ ಸಮೇತ ವಾಹನ ಮತ್ತು ಚಾಲಕನನ್ನ ಕರೆದುಕೊಂಡು ಹೋಗಿದ್ದರು. ತಮ್ಮ ಅಡ್ಡಾಗೆ ಕರೆದೋಗಿ ಗೂಡ್ಸ್ ವಾಹನದಲ್ಲಿದ್ದ 13 ಲಕ್ಷ ಮೌಲ್ಯದ 21 ರಕ್ತ ಚಂದನದ ತುಂಡುಗಳನ್ನು ವಶಕ್ಕೆ ಪಡೆದು ಚಾಲಕನನ್ನ ಬೆದರಿಸಿ ಕಳಿಸಿದ್ದರು.

ಹೆದ್ದಾರಿ ಬದಿ ನಡೆದಿದ್ದ ಡ್ರಾಮದ ಬಗ್ಗೆ ಕಿಡ್ನಾಪ್ ಅಂತಾ ಪೊಲೀಸರಿಗೆ ಸ್ಥಳೀಯರು ಮಾಹಿತಿ‌ ನೀಡಿದ್ದರು. ಹೀಗಾಗಿ ಡಿಸೆಂಬರ್ 15 ರಂದು ನಡೆದಿದ್ದ ಘಟನೆಯ ಮಾಹಿತಿಯನ್ನು ಪಡೆದ ಹೊಸಕೋಟೆ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಎಲ್ಲೂ ಡಿಸೆಂಬರ್ 15ರಂದು ನಡೆದ ಘಟನೆ ಸಂಬಂಧ ಕೇಸ್ ದಾಖಲಾಗಿರಲಿಲ್ಲ. ಹೀಗಾಗಿ ಅನುಮಾನಗೊಂಡ ಪೊಲೀಸರು ತನಿಖೆ ವೇಳೆ ಹೆದ್ದಾರಿ‌ ಬದಿಯಲ್ಲಿರುವ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದಾಗ ಘಟನೆ ಸಂಬಂಧ ಸುಳಿವು ಸಿಕ್ಕಿದೆ. ವಾಹನದ ನಂಬರ್ ಪ್ಲೇಟ್ ಆಧಾರದ ಮೇಲೆ ಹೊಸಕೋಟೆ ಪೊಲೀಸರು ತನಿಖೆ ನಡೆಸಿದಾಗ ಅಕ್ರಮ ಬಯಲಾಗಿದೆ.

ಖತರ್ನಾಕ್ ಪೇದೆಗಳಿಗೆ ಅಡ್ಡೆಯಾಗಿದ್ದ ಹೊಸಕೋಟೆ ಕಳೆದ ಹಲವು ವರ್ಷಗಳಿಂದ ಹೊಸಕೋಟೆ ಸುತ್ತಾಮುತ್ತ ಕೆಲಸ ಮಾಡಿದ್ದ ಇಬ್ಬರು ಪೇದೆಗಳು ರೆಡ್ ಸ್ಯಾಂಡಲ್ ಮತ್ತು ಗಾಂಜಾ ಸಾಗಾಟದ ಬಗ್ಗೆ ಚನ್ನಾಗಿ ತಿಳಿದುಕೊಂಡಿದ್ದರು. ಈ ವೇಳೆ ಕೇಸ್ ಮಾಡಿದ್ರೆ ಅಲ್ಪ ಸ್ವಲ್ಪ ಹಣ ಸಿಗುತ್ತೆ ಅಂತ ಡೈರೆಕ್ಟ್ ಡೀಲ್ಗೆ ಮುಂದಾಗಿದ್ದರು. ಕಳೆದ ಹಲವು ವರ್ಷಗಳಿಂದ ಸಾಕಷ್ಟು ಭಾರಿ ರಕ್ತ ಚಂದನ ಮತ್ತು ಗಾಂಜಾ ಹಿಡಿದು ಹಣ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಹಲವು ಸ್ಮಗ್ಲರ್ಗಳ ಜೊತೆಗೂಡಿ ಅಡ್ಡ ದಾರಿಯಲ್ಲಿ ಹಣ ಸಂಪಾದನೆ ಮಾಡ್ತಿದ್ದ ಇವರು, ಸ್ಥಳೀಯ ರಾಜಕೀಯ ಮುಖಂಡರ ಜೊತೆಗೂ ಪರಿಚಯ ಬೆಳೆಸಿಕೊಂಡಿದ್ದರು. ಪೊಲೀಸರೆ ಸ್ಮಗ್ಲರ್ಗಳಂತೆ ದಂದೆ ಮಾಡ್ತಿದ್ದರು. ಸದ್ಯ ಈಗ ಇವರ ವಿರುದ್ಧ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ರಕ್ತಚಂದನ ಕಳ್ಳ ಸಾಗಾಣಿಕೆಗೆ ಕಸ್ಟಮ್ಸ್ ಅಧಿಕಾರಿಗಳ ಸಹಕಾರ; ಐವರ ವಿರುದ್ಧ ಎಫ್ಐಆರ್ ದಾಖಲು

Follow us on

Related Stories

Most Read Stories

Click on your DTH Provider to Add TV9 Kannada